ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ವಿದೇಶಿ ಮಾರುಕಟ್ಟೆಗಳಂತೆ ವಿಶ್ವಾಸದಿಂದಿರಿ:ಚಿದಂಬರಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿದೇಶಿ ಮಾರುಕಟ್ಟೆಗಳಂತೆ ವಿಶ್ವಾಸದಿಂದಿರಿ:ಚಿದಂಬರಂ
ಅಮೆರಿಕ, ಯುರೋಪ್ ರಾಷ್ಟ್ರಗಳು ತೋರಿಸಿದ ಆಶಾವಾದಿತ್ವದಂತೆ ಭಾರತದ ಬಂಡವಾಳ ಮಾರುಕಟ್ಟೆ ಕೂಡಾ ಅಂತಹ ಆಶಾವಾದಿತ್ವವನ್ನು ಹೊಂದುವ ವಿಶ್ವಾಸವಿದೆ ಎಂದು ಕೇಂದ್ರ ಹಣಕಾಸು ಖಾತೆ ಸಚಿವ ಪಿ.ಚಿದಂಬರಂ ಭರವಸೆ ವ್ಯಕ್ತಪಡಿಸಿದ್ದಾರೆ.

ಅಮೆರಿಕ, ಯುರೋಪ್ ಹಾಗೂ ಪೂರ್ವಿಯ ಏಷ್ಯಾ ರಾಷ್ಟ್ರಗಳ ಬಂಡವಾಳ ಮಾರುಕಟ್ಟೆಗಳು ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ವ್ಯಕ್ತಪಡಿಸಿದಂತಹ ಆಶಾವಾದಿ ಹಾಗೂ ಭರವಸೆಯನ್ನು ಭಾರತದ ಮಾರುಕಟ್ಟೆಗಳು ತೋರಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಹಿಂದಿನ ದಿನದ ಶೇರು ವಹಿವಾಟಿನಲ್ಲಿ ಅಮೆರಿಕ ಮತ್ತು ಯುರೋಪ್ ಮಾರುಕಟ್ಟೆಗಳು ಚೇತರಿಕೆ ಕಂಡಿದ್ದವು . ಪೂರ್ವ ಏಷ್ಯಾ ರಾಷ್ಟ್ರಗಳು ಮಂಗಳವಾರದ ವಹಿವಾಟಿನಲ್ಲಿ ಶೇರು ಸೂಚ್ಯಂಕ ಏರಿಕೆಗೆ ಕಾರಣವಾಗಿವೆ ಎಂದು ಹೇಳಿದ್ದಾರೆ.

ಅನೇಕ ದೇಶಗಳ ಸರಕಾರಗಳು ಹಾಗೂ ಫೆಡರಲ್ ಬ್ಯಾಂಕ್‌ಗಳು ಆರ್ಥಿಕ ಕುಸಿತವನ್ನು ತಡೆಯುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಂಡಿದ್ದಲ್ಲದೇ ಬ್ಯಾಂಕಿಂಗ್ ಕ್ಷೇತ್ರಗಳ ಕುರಿತಂತೆ ಭರವಸೆ ಮೂಡಿಸುವಲ್ಲಿ ಕೂಡಾ ಯಶಸ್ವಿಯಾಗಿವೆ ಎಂದು ಸಚಿವ ಚಿದಂಬರಂ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನೂತನ ಜವಳಿ ನೀತಿ ಅನುಷ್ಠಾನಕ್ಕೆ ಚಾಲನೆ
ಭಾರತದ ಆರ್ಥಿಕತೆ ಪ್ರಗತಿಯತ್ತ: ಐಎಂಎಫ್
ನ್ಯಾನೋಗೆ ಒರೆವಾ-ಇ ಪೈಪೋಟಿ
ಟಾಟಾ ಜನ್ಮದಿನದಂದೇ ನ್ಯಾನೋ 'ಉಡುಗೊರೆ'
ಗ್ರಾಹಕರ ಠೇವಣಿ ಭದ್ರವಾಗಿದೆ - ಐಸಿಐಸಿಐ
2012ರವೇಳೆಗೆ ಜವಳಿ ವಹಿವಾಟು 115 ಬಿ.ಡಾಲರ್