ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಜೆಟ್-ಕಿಂಗ್‌ಫಿಶರ್ ಸಹಭಾಗಿತ್ವ ವಹಿವಾಟು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜೆಟ್-ಕಿಂಗ್‌ಫಿಶರ್ ಸಹಭಾಗಿತ್ವ ವಹಿವಾಟು
ಊಹಾಪೋಹ ವರದಿಗಳಿಗೆ ತೆರೆ ಏಳೆಯಲು ನಿರ್ಧರಿಸಿದ ಜೆಟ್‌ಏರ್‌ವೇಸ್ ಮತ್ತು ಕಿಂಗ್‌ಫಿಶರ್ ಏರ್‌ಲೈನ್ಸ್ ಖಾಸಗಿ ವಿಮಾನಯಾನ ಸಂಸ್ಥೆಗಳು, ವೆಚ್ಚವನ್ನು ಕಡಿತಗೊಳಿಸಲು ಹಾಗೂ ಅಂತಾರಾಷ್ಟೀಯ ವಿಮಾನ ಹಾರಾಟವನ್ನು ಹಂಚಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಜಂಟಿಯಾಗಿ ಘೋಷಿಸಿವೆ.

ಕಿಂಗ್‌ಫಿಶರ್ ಏರ್‌ಲೈನ್ಸ್ ಮುಖ್ಯಸ್ಥ ವಿಜಯ್ ಮಲ್ಯ ಹಾಗೂ ಜೆಟ್‌ ಏರ್‌ವೇಸ್ ಮುಖ್ಯಸ್ಥ ನರೇಶ್ ಗೋಯಲ್ ಜಂಟಿಯಾಗಿ ಪ್ರಕಟಣೆಯೊಂದು ಹೊರಡಿಸಿ ಮುಂದಿನ ದಿನಗಳಲ್ಲಿ ಉಭಯ ವಿಮಾನಯಾನ ಸಂಸ್ಥೆಗಳು ಜಂಟಿಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದ್ದಾರೆ.

ಜೆಟ್‌-ಕಿಂಗ್‌ಫಿಶರ್ ಮೈತ್ರಿಯಿಂದಾಗಿ ಇಂಧನ ವೆಚ್ಚವನ್ನು ಕಡಿತಗೊಳಿಸಲು ಸಾಧ್ಯವಾಗುತ್ತದೆ. ಬಹುದೂರದ ಮೈತ್ರಿಯಿಂದಾಗಿ ಶೇರುದಾರರಿಗೆ ಆರ್ಥಿಕ ಲಾಭವನ್ನು ನೀಡುತ್ತದೆ ಎಂದು ಕಿಂಗ್‌ಫಿಶರ್ ಮುಖ್ಯಸ್ಥ ವಿಜಯ್ ಮಲ್ಯ ತಿಳಿಸಿದ್ದಾರೆ.

ಕಳೆದ ಆರು ವರ್ಷಗಳಿಂದ ವೈಮಾನಿಕ ಸಂಸ್ಥೆಗಳು ಹಣಕಾಸಿನ ತೀವ್ರ ತೊಂದರೆಯನ್ನು ಎದುರಿಸುತ್ತಿದ್ದು ವೆಚ್ಚವನ್ನು ಕಡಿತಗೊಳಿಸಲು ಸಾಧ್ಯವಾಗುತ್ತಿಲ್ಲ. ವೆಚ್ಚ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಆದರೆ ಮೈತ್ರಿಯಿಂದ ವೆಚ್ಚವನ್ನು ಕಡಿತಗೊಳಿಸಬಹುದಾಗಿದೆ ಎಂದು ಜೆಟ್ ಏರ್‌ವೇಸ್ ಮುಖ್ಯಸ್ಥ ನರೇಶ್ ಗೋಯಲ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವಿದೇಶಿ ಮಾರುಕಟ್ಟೆಗಳಂತೆ ವಿಶ್ವಾಸದಿಂದಿರಿ:ಚಿದಂಬರಂ
ನೂತನ ಜವಳಿ ನೀತಿ ಅನುಷ್ಠಾನಕ್ಕೆ ಚಾಲನೆ
ಭಾರತದ ಆರ್ಥಿಕತೆ ಪ್ರಗತಿಯತ್ತ: ಐಎಂಎಫ್
ನ್ಯಾನೋಗೆ ಒರೆವಾ-ಇ ಪೈಪೋಟಿ
ಟಾಟಾ ಜನ್ಮದಿನದಂದೇ ನ್ಯಾನೋ 'ಉಡುಗೊರೆ'
ಗ್ರಾಹಕರ ಠೇವಣಿ ಭದ್ರವಾಗಿದೆ - ಐಸಿಐಸಿಐ