ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ತೈಲ ಬೆಲೆ ಇಳಿಕೆಯಾದಲ್ಲಿ ಪೆಟ್ರೋಲ್ ದರ ಕಡಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತೈಲ ಬೆಲೆ ಇಳಿಕೆಯಾದಲ್ಲಿ ಪೆಟ್ರೋಲ್ ದರ ಕಡಿತ
ಡಾಲರ್ ಎದುರಿಗೆ ರೂಪಾಯಿ ಮೌಲ್ಯ ಕುಸಿತದಿಂದಾಗಿ ಭಾರತದ ಕಚ್ಚಾ ತೈಲ ಅಮುದು ದರ ವಾರ್ಷಿಕ ಇಳಿಕೆ ಕಂಡರೂ ಪೆಟ್ರೋಲ್ ಮತ್ತು ಡಿಸೈಲ್ ದರಗಳಲ್ಲಿ ಇಳಿಕೆಯಾಗಿಲ್ಲ. ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ 61ಡಾಲರ್‌ಗೆ ತಲುಪಿದಾಗ ಮಾತ್ರ ದರ ಇಳಿಕೆ ಸಾಧ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತ ಕಚ್ಚಾ ತೈಲ ಅಮುದು ದರ ಪ್ರತಿ ಬ್ಯಾರೆಲ್‌ಗೆ 67 ಡಾಲರ್‌ಗಳಿಗೆ ಇಳಿಕೆಯಾದಾಗ ಮಾತ್ರ ಪೆಟ್ರೋಲ್ ಮತ್ತು ಡಿಸೈಲ್ ಮಾರಾಟ ದರಗಳಲ್ಲಿ ಇಳಿಕೆಯಾಗುವ ಸಾಧ್ಯತೆಗಳಿವೆ ಎಂದು ತೈಲ ಸಂಸ್ಥೆಗಳು ಪ್ರಕಟಿಸಿದ್ದವು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ದರಗಳು ಇಳಿಕೆಯಾಗಿದ್ದರೂ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತದಿಂದಾಗಿ ಅದರ ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಇಂಡಿಯನ್ ಆಯಿಲ್ , ಹಿಂದೂಸ್ತಾನ್ ಪೆಟ್ರೋಲಿಯಂ ಮತ್ತು ಭಾರತ ಪೆಟ್ರೋಲಿಯಂ ತೈಲ ಸಂಸ್ಥೆಗಳು ಪ್ರತಿನಿತ್ಯ 350 ಕೋಟಿ ರೂ.ಗಳ ನಷ್ಟವನ್ನು ಅನುಭವಿಸುತ್ತಿವೆ.

ಭಾರತದ ಅಮುದು ಕಚ್ಚಾ ತೈಲ ದರ ನಿನ್ನೆ ಪ್ರತಿ ಬ್ಯಾರೆಲ್‌‌ಗೆ 72.20ಡಾಲರ್‌ಗಳಾಗಿದ್ದು, ವರ್ಷದ ಅತ್ಯಂತ ಇಳಿಕೆ ದರವಾಗಿದ್ದು, ಅಕ್ಟೋಬರ್ ತಿಂಗಳಿನಲ್ಲಿ ಸರಾಸರಿ ಪ್ರತಿ ಬ್ಯಾರೆಲ್‌ಗೆ 79.70 ಡಾಲರ್‌ಗಳಾಗಲಿವೆ ಎಂದು ಮೂಲಗಳು ತಿಳಿಸಿವೆ.

ಇಂಡಿಯನ್ ಆಯಿಲ್ , ಹಿಂದೂಸ್ತಾನ್ ಪೆಟ್ರೋಲಿಯಂ ಮತ್ತು ಭಾರತ ಪೆಟ್ರೋಲಿಯಂ ತೈಲ ಸಂಸ್ಥೆಗಳು ಪ್ರತಿ ಲೀಟರ್ ಮಾರಾಟದ ಪೆಟ್ರೋಲ್‌ಗೆ 4.68 ರೂಪಾಯಿ ಹಾಗೂ ಡಿಸೈಲ್‌ಗೆ 11.48 ರೂ.ಸೀಮೆ ಎಣ್ಣೆಗೆ ಪ್ರತಿ ಲೀಟರ್‌ಗೆ 28.07 ಹಾಗೂ ಅನಿಲ್ ಸಿಲೆಂಡರ್‌ಗೆ 322.14 ರೂಪಾಯಿಗಳ ಹಾನಿಯನ್ನು ಪ್ರತಿನಿತ್ಯ ಅನುಭವಿಸುತ್ತಿದ್ದು, ಪ್ರಸಕ್ತ ವರ್ಷದ ಒಟ್ಟು ಹಾನಿ 1,62,158 ಕೋಟಿ ರೂ.ಗಳಾಗಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜೆಟ್-ಕಿಂಗ್‌ಫಿಶರ್ ಸಹಭಾಗಿತ್ವ ವಹಿವಾಟು
ವಿದೇಶಿ ಮಾರುಕಟ್ಟೆಗಳಂತೆ ವಿಶ್ವಾಸದಿಂದಿರಿ:ಚಿದಂಬರಂ
ನೂತನ ಜವಳಿ ನೀತಿ ಅನುಷ್ಠಾನಕ್ಕೆ ಚಾಲನೆ
ಭಾರತದ ಆರ್ಥಿಕತೆ ಪ್ರಗತಿಯತ್ತ: ಐಎಂಎಫ್
ನ್ಯಾನೋಗೆ ಒರೆವಾ-ಇ ಪೈಪೋಟಿ
ಟಾಟಾ ಜನ್ಮದಿನದಂದೇ ನ್ಯಾನೋ 'ಉಡುಗೊರೆ'