ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಶ್ರೀಲಂಕಾದಲ್ಲಿ ಭಾರ್ತಿಏರ್‌ಟೆಲ್ ಆರಂಭ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶ್ರೀಲಂಕಾದಲ್ಲಿ ಭಾರ್ತಿಏರ್‌ಟೆಲ್ ಆರಂಭ
ದೇಶದ ಪ್ರಮುಖ ಖಾಸಗಿ ಟೆಲಿಕಾಂ ಸಂಸ್ಥೆ ಭಾರ್ತಿ ಏರ್‌ಟೆಲ್ ಶ್ರೀಲಂಕಾದಲ್ಲಿ ತನ್ನ ಸೇವೆಯನ್ನು ಮುಂಬರುವ ಡಿಸೆಂಬರ್ ತಿಂಗಳಲ್ಲಿ ಆರಂಭಿಸಲು ನಿರ್ಧರಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಶ್ರೀಲಂಕಾದಲ್ಲಿ ಭಾರ್ತಿಏರ್‌ಟೆಲ್‌ಗೆ ಭಾರಿ ಬೆಂಬಲ ವ್ಯಕ್ತವಾಗಿದೆ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮನೋಜ್ ಕೊಹ್ಲಿ ದಕ್ಷಿಣ ಏಷ್ಯಾದ ಟೆಲಿಕಮ್ಯೂನಿಕೇಶನ್ ರೆಗುಲೆಟರ್ ಸಮಿತಿ ಸಭೆಯಲ್ಲಿ ತಿಳಿಸಿದ್ದಾರೆ.

ಶ್ರೀಲಂಕಾದಲ್ಲಿ ಅಂತರಜಾಲ ಸಂಪರ್ಕ ಸೇವೆ ಕುರಿತಂತೆ ಕೆಲ ಸಮಸ್ಯೆಗಳಿದ್ದು ಮುಂಬರುವ ಕೆಲ ದಿನಗಳಲ್ಲಿ ಬಗೆಹರಿಸಿಕೊಂಡು ಡಿಸೆಂಬರ್ 2008ರೊಳಗಾಗಿ ಸೇವೆಯನ್ನು ಆರಂಭಿಸಲಾಗುವುದು.

ಸ್ಥಳೀಯ ಆಪರೇಟರ್‌ಗಳು ಅಂತರಜಾಲ ಸಂಪರ್ಕವನ್ನು ಭಾರ್ತಿಏರ್‌ಟೆಲ್‌ಗೆ ನೀಡಲು ವಿರೋಧಿಸುತ್ತಿವೆ ಎಂದು ಭಾರ್ತಿ ಏರ್‌ಟೆಲ್ ಕಂಪೆನಿ ವಿಷಾದ ವ್ಯಕ್ತಪಡಿಸಿದೆ.

ಭಾರ್ತಿ ಏರ್‌ಟೆಲ್ ಲಿಮಿಟೆಡ್‌ನ ಶಾಖೆಯಾದ ಭಾರ್ತಿ ಏರ್‌ಟೆಲ್ ಲಂಕಾ ಪ್ರೈವೇಟ್ ಲಿಮಿಟೆಡ್ 2ಜಿ ಮತ್ತು 3ಜಿ ಸೇವೆಗಳನ್ನು ಏರ್‌ಟೆಲ್ ಬ್ಯಾನರ್‌ನಡಿಯಲ್ಲಿ ನೀಡಲು ನಿರ್ಧರಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಐಸಿಐಸಿಐ ದೂರು: ತನಿಖೆಗೆ ವಿಶೇಷ ಪೊಲೀಸ್ ತಂಡ
ತೈಲ ಬೆಲೆ ಇಳಿಕೆಯಾದಲ್ಲಿ ಪೆಟ್ರೋಲ್ ದರ ಕಡಿತ
ಜೆಟ್-ಕಿಂಗ್‌ಫಿಶರ್ ಸಹಭಾಗಿತ್ವ ವಹಿವಾಟು
ವಿದೇಶಿ ಮಾರುಕಟ್ಟೆಗಳಂತೆ ವಿಶ್ವಾಸದಿಂದಿರಿ:ಚಿದಂಬರಂ
ನೂತನ ಜವಳಿ ನೀತಿ ಅನುಷ್ಠಾನಕ್ಕೆ ಚಾಲನೆ
ಭಾರತದ ಆರ್ಥಿಕತೆ ಪ್ರಗತಿಯತ್ತ: ಐಎಂಎಫ್