ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಇಂಡಿಯಾ ಏರ್‌ಶೋ ಪ್ರದರ್ಶನ ಆರಂಭ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇಂಡಿಯಾ ಏರ್‌ಶೋ ಪ್ರದರ್ಶನ ಆರಂಭ
ದೇಶದ ಪ್ರಥಮ ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಪ್ರದರ್ಶನ ಮತ್ತು ಸಮ್ಮೆಳನದ ಇಂಡಿಯಾ ಏವಿಯೇಶನ್ 2008 ಆರಂಭವಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಅಮೆರಿಕದ ಪಾಲುದಾರಿಕೆಯೊಂದಿಗೆ ಎಫ್‌‌ಐಸಿಸಿಐ ಮತ್ತು ನಾಗರಿಕ ವಿಮಾನಯಾನ ಸಚಿವಾಲಯಗಳು ಜಂಟಿಯಾಗಿ ನಾಲ್ಕು ದಿನಗಳ ಏರ್‌ಶೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ನಗರದ ಬೇಗಂಪೇಟ್‌ ವಿಮಾನನಿಲ್ದಾಣದಲ್ಲಿ ಏರ್‌ಶೋ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದ್ದು, ದೇಶದ ವಿಮಾನಯಾನ ಕ್ಷೇತ್ರದ ಅಭಿವೃದ್ಧಿ ಮತ್ತು ಅಪರೂಪದ ಛಾಯಾಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ನಾಗರಿಕ ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ಕಾರ್ಯಕ್ರಮವನ್ನು ಉದ್ಘಾಟಿಸಿದ್ದು, ಆಂಧ್ರಪ್ರದೇಶ ಮುಖ್ಯಮಂತ್ರಿ ವೈ .ಎಸ್ ರಾಜಶೇಖರ್ ರೆಡ್ಡಿ ಮುಖ್ಯಅತಿಥಿಗಳಾಗಿ ಪಾಲ್ಗೊಂಡಿದ್ದರು. ಸಮಾರಂಭದಲ್ಲಿ ದೇಶವಿದೇಶಗಳಿಂದ ವಿಮಾನಯಾನ ಕ್ಷೇತ್ರಕ್ಕೆ ಸಂಬಂಧಿಸಿದ ಗಣ್ಯರು ಉಪಸ್ಥಿತರಿದ್ದರು.

ಭಾರತೀಯ ವಾಯುಸೇನೆಯ ಸೂರ್ಯಕಿರಣ್ ವಿಮಾನಗಳ ಅತ್ಯಾಧುನಿಕ ಪ್ರದರ್ಶನ, ಪ್ಯಾರಾ ಸೆಲ್ಲಿಂಗ್ಸ್ ಪ್ಯಾರಾ ಜಂಪಿಂಗ್ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ಉದ್ಘಾಟನಾ ಸಮಾರಂಭದಲ್ಲಿ ಆಯೋಜಿಸಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶ್ರೀಲಂಕಾದಲ್ಲಿ ಭಾರ್ತಿಏರ್‌ಟೆಲ್ ಆರಂಭ
ಐಸಿಐಸಿಐ ದೂರು: ತನಿಖೆಗೆ ವಿಶೇಷ ಪೊಲೀಸ್ ತಂಡ
ತೈಲ ಬೆಲೆ ಇಳಿಕೆಯಾದಲ್ಲಿ ಪೆಟ್ರೋಲ್ ದರ ಕಡಿತ
ಜೆಟ್-ಕಿಂಗ್‌ಫಿಶರ್ ಸಹಭಾಗಿತ್ವ ವಹಿವಾಟು
ವಿದೇಶಿ ಮಾರುಕಟ್ಟೆಗಳಂತೆ ವಿಶ್ವಾಸದಿಂದಿರಿ:ಚಿದಂಬರಂ
ನೂತನ ಜವಳಿ ನೀತಿ ಅನುಷ್ಠಾನಕ್ಕೆ ಚಾಲನೆ