ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಜೆಟ್-ಕಿಂಗ್‌ಫಿಶರ್ ವಿಲೀನ ಯೋಜನೆಯಿಲ್ಲ: ಮಲ್ಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜೆಟ್-ಕಿಂಗ್‌ಫಿಶರ್ ವಿಲೀನ ಯೋಜನೆಯಿಲ್ಲ: ಮಲ್ಯ
ಜೆಟ್‌ಏರ್‌ವೇಸ್ ಮತ್ತು ಕಿಂಗ್‌ಫಿಶರ್ ಏರ್‌ಲೈನ್ಸ್ ವಿಮಾನಯಾನ ಸಂಸ್ಥೆಗಳು ವಿಲೀನವಾಗಲಿವೆ ಎನ್ನುವ ಊಹಾಪೋಹಗಳ ವರದಿಗಳನ್ನು ತಳ್ಳಿಹಾಕಿದ ಉಭಯ ಕಂಪೆನಿಗಳ ಮುಖ್ಯಸ್ಥರಾದ ಮಲ್ಯ ಮತ್ತು ಗೋಯಲ್ ಕಂಪೆನಿಗಳ ಶೇರುಹಂಚಿಕೆ ಮತ್ತು ಇತರ ವಿಷಯಗಳ ಕುರಿತಂತೆ ಚರ್ಚಿಸುವ ಯಾವುದೇ ಯೋಜನೆಯಿಲ್ಲ ಎಂದು ತಳ್ಳಿಹಾಕಿದ್ದಾರೆ.

ಜೆಟ್‌ಏರ್‌ವೇಸ್ ಮತ್ತು ಕಿಂಗ್‌ಫಿಶರ್ ಏರ್‌ಲೈನ್ಸ್ ವಿಮಾನಯಾನ ಸಂಸ್ಥೆಗಳ ಮೈತ್ರಿಯನ್ನು ಸಮರ್ಥಿಸಿಕೊಂಡ ಉಭಯ ಸಂಸ್ಥೆಗಳ ಮುಖ್ಯಸ್ಥರು ವಿಮಾನಯಾನ ಕ್ಷೇತ್ರದಲ್ಲಿ ಶೇ. 60ರಷ್ಟು ವ್ಯಾಪ್ತಿಯನ್ನು ಹೊಂದಿವೆ. ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ದರ ಇಳಿಕೆ ಪೈಪೋಟಿ ನಡೆಸುತ್ತಿರುವುದರಿಂದ ದೇಶಿಯ ವಿಮಾನಯಾನ ಸಂಸ್ಥೆಗಳು ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲವಾದ್ದರಿಂದ ಮೈತ್ರಿ ಮಾಡಿಕೊಳ್ಳಲಾಗಿದೆ ಎಂದು ಗೋಯಲ್ ಹೇಳಿದ್ದಾರೆ.

ವಿಮಾನಗಳ ಹಾರಾಟವನ್ನು ಕಡಿತಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಸಂಸ್ಥೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನೌಕರರನ್ನು ವಜಾಗೊಳಿಸಲಾಗಿದೆ.ಕಾಯಂ ನೌಕರನ್ನು ವಜಾಗೊಳಿಸಿಲ್ಲ. ಕಾಯಂ ನೌಕರರಿಲ್ಲದೇ ಯಾವುದೇ ಸಂಸ್ಥೆ ನಡೆಸಲು ಸಾಧ್ಯವಿಲ್ಲ ಎಂದು ಗೋಯಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆರ್‌ಬಿಐಯಿಂದ ಆರ್ಥಿಕ ಬಿಕ್ಕಟ್ಟು ಪರಿಶೀಲನೆ
ಜೆಟ್‌ಏರ್‌ವೇಸ್‌ಗೆ ರಾಜ್‌ಠಾಕ್ರೆ ಧಮಕಿ
ಆರ್ಥಿಕ ಕುಸಿತ ತಡೆಗೆ ಸೂಕ್ತ ಕ್ರಮ: ಚಿದು
ಸಾವಿರ ಉದ್ಯೋಗಿಗಳಿಗೆ ಅರ್ಧಚಂದ್ರ: ಜೆಟ್ ಏರ್‌ವೇಸ್
ಇಂಡಿಯಾ ಏರ್‌ಶೋ ಪ್ರದರ್ಶನ ಆರಂಭ
ಶ್ರೀಲಂಕಾದಲ್ಲಿ ಭಾರ್ತಿಏರ್‌ಟೆಲ್ ಆರಂಭ