ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ನೌಕರರ ವಜಾ: ಜೆಟ್ ದಾರಿಯಲ್ಲಿ ಪೆಪ್ಸಿಕೋಲಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೌಕರರ ವಜಾ: ಜೆಟ್ ದಾರಿಯಲ್ಲಿ ಪೆಪ್ಸಿಕೋಲಾ
ಜೆಟ್ ಏರ್‌ವೇಸ್ ಒಂದು ಸಾವಿರ ನೌಕರರನ್ನು ವಜಾ ಮಾಡಿದ ಆದೇಶ ಹೊರಬೀಳುತ್ತಿದ್ದಂತೆ ಅದೇ ದಾರಿಯಲ್ಲಿ ಸಾಗಿದ ಅಮೆರಿಕ ಮೂಲದ ತಂಪುಪಾನೀಯ ಉತ್ಪಾದಕ ಕಂಪೆನಿ ಪೆಪ್ಸಿ ಕಂಪೆನಿ ಕೂಡಾ 3,300 ನೌಕರರನ್ನು ವಜಾಗೊಳಿಸಲು ನಿರ್ಧರಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಅಮೆರಿಕದಲ್ಲಿ ಎದುರಾದ ಆರ್ಥಿಕ ಬಿಕ್ಕಟ್ಟಿನ ಬಿಸಿ ತಂಪು ಪಾನೀಯ ಪೆಪ್ಸಿಗೂ ಕೂಡಾ ತಗುಲಿದ್ದು ನಷ್ಟವನ್ನು ಸರಿದೂಗಿಸಿ ಮುಂದಿನ ಮೂರು ವರ್ಷಗಳಲ್ಲಿ 1.2 ಬಿಲಿಯನ್ ಡಾಲರ್ ಉಳಿಸಲು 3,300 ನೌಕರರನ್ನು ಕೆಲಸದಿಂದ ತೆಗೆದುಹಾಕಲು ಪೆಪ್ಸಿ ಅಡಳಿತ ಮಂಡಳಿ ತೀರ್ಮಾನ ತೆಗೆದುಕೊಂಡಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಪೆಪ್ಸಿ ಷೇರುಗಳ ಕುಸಿತ ಹಾಗೂ ಆರ್ಥಿಕ ಸಂಕಷ್ಟದಿಂದಾಗಿ ಪ್ರಸಕ್ತ ವರ್ಷದ ಆರ್ಥಿಕ ಲಾಭ ನಷ್ಟದ ವಿವರಗಳನ್ನು ಕೂಡಾ ಷೇರುಪೇಟೆಗೆ ನೀಡಲು ಹಿಂಜರಿಯುತ್ತಿದ್ದು, ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಪೆಪ್ಸಿ ಕಂಪೆನಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೆಪ್ಟೆಂಬರ್‌ಗೆ ಅಂತ್ಯಗೊಂಡಂತೆ ಪೆಪ್ಸಿ ಕಂಪೆನಿಯ ಲಾಭಾಂಶದಲ್ಲಿ ನಷ್ಟ ಎದುರಾಗಿದ್ದರಿಂದ ಕೆಲ ಉತ್ಪಾದಕ ಘಟಕಗಳನ್ನು ಬಂದ್ ಮಾಡಿ ನೌಕರರನ್ನು ವಜಾಗೊಳಿಸುವ ನಿರ್ಧಾರಕ್ಕೆ ಬಂದಿದೆ ಎಂದು ವಹಿವಾಟಿನ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜೆಟ್-ಕಿಂಗ್‌ಫಿಶರ್ ವಿಲೀನ ಯೋಜನೆಯಿಲ್ಲ: ಮಲ್ಯ
ಆರ್‌ಬಿಐಯಿಂದ ಆರ್ಥಿಕ ಬಿಕ್ಕಟ್ಟು ಪರಿಶೀಲನೆ
ನೌಕರರ ಸೇರಿಸಿಕೊಳ್ಳದಿದ್ದರೆ ವಿಮಾನ ಹಾರಾಟಕ್ಕೆ ಅಡ್ಡಿ:ಠಾಕ್ರೆ
ಆರ್ಥಿಕ ಕುಸಿತ ತಡೆಗೆ ಸೂಕ್ತ ಕ್ರಮ: ಚಿದು
ಸಾವಿರ ಉದ್ಯೋಗಿಗಳಿಗೆ ಅರ್ಧಚಂದ್ರ: ಜೆಟ್ ಏರ್‌ವೇಸ್
ಇಂಡಿಯಾ ಏರ್‌ಶೋ ಪ್ರದರ್ಶನ ಆರಂಭ