ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಜೆಟ್ ಏರ್‌ವೇಸ್‌ನಿಂದ 1900 ನೌಕರರಿಗೆ ಕೊಕ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜೆಟ್ ಏರ್‌ವೇಸ್‌ನಿಂದ 1900 ನೌಕರರಿಗೆ ಕೊಕ್
WD
ಮಂಗಳವಾರದಂದು 800 ನೌಕರರನ್ನು ವಜಾಗೊಳಿಸಿದ ರಾಷ್ಟ್ರದ ಪ್ರಮುಖ ಜೆಟ್ ಏರ್‌ವೇಸ್ ಬುಧವಾರ ಸಧ್ಯದಲ್ಲೇ ಇನ್ನಷ್ಟು ನೌಕರರನ್ನು ವಜಾಗೊಳಿಸಲಾಗುತ್ತದೆ ಎಂದು ತಿಳಿಸಿದೆ. ಒಟ್ಟು 1900ನೌಕರರನ್ನು ವಜಾಗೊಳಿಸಲಾಗುತ್ತದೆ.

ಇದೊಂದು ದುರದೃಷ್ಟಕರ ನಿರ್ಧಾರ ಆದರೆ ಇದು ಕಂಪೆನಿಯನ್ನು ಮತ್ತು ಉಳಿದ ನೌಕರರನ್ನು ಉಳಿಸಿಕೊಳ್ಳುವ ಪ್ರಯತ್ನ ಎಂದು ಜೆಟ್ ಏರ್‌ವೇಸ್‌ನ ಕಾರ್ಯನಿರ್ವಹಣಾಧಿಕಾರಿ ಬಿ ಸರೋಜ್ ದತ್ತಾ ವರದಿಗಾರರಿಗೆ ತಿಳಿಸಿದ್ದಾರೆ. 15 ವರ್ಷಗಳ ನಂತರ ಪ್ರಥಮ ಬಾರಿಗೆ ನೌಕರರನ್ನು ವಜಾಗೊಳಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಹಲವಾರಿಗೆ ಈಗಾಗಲೇ ನೋಟೀಸ್ ಕಳುಹಿಸಲಾಗಿದ್ದು, ಇನ್ನೂ ಕೆಲವರಿಗೆ ಮುಂದಿನ ದಿನಗಳಲ್ಲಿ ನೋಟೀಸ್ ನೀಡಲಾಗುತ್ತದೆ ಎಂದು ದತ್ತಾ ಹೇಳಿದ್ದಾರೆ.

"ಒಟ್ಟು 1900 ಜನರಿಗೆ ವಜಾಗೊಳಿಸುವ ನೋಟಿಸ್ ನೀಡಲಾಗುತ್ತದೆ. 800 ಜನರಿಗೆ ಈಗಾಗಲೇ ನೋಟೀಸ್ ನೀಡಲಾಗಿದೆ. ಮುಂದಿನ ಕೆಲ ದಿನಗಳಲ್ಲಿ ಉಳಿದವರಿಗೆ ನೋಟೀಸ್ ನೀಡಲಾಗುತ್ತದೆ. ಇದು ಉಳಿದ 11,100 ನೌಕರರ ವೃತ್ತಿಯನ್ನು ಉಳಿಸಿಕೊಡುವ ಪ್ರಯತ್ನ" ಎಂದು ಅವರು ಹೇಳಿದ್ದಾರೆ.

ಅವರು ಕಂಪೆನಿಯ ಆರ್ಥಿಕ ಪರಿಸ್ಥಿತಿ ಸದೃಢಗೊಂಡ ಮೇಲೆ ನೌಕಕರನ್ನು ಮರಳಿ ತೆಗೆದುಕೊಳ್ಳಲಾಗುವುದು ಎಂದು ನುಡಿದರು.
WD


ನೌಕರರ ವಜಾ ವಿಷಯದ ಬಗ್ಗೆ ಸರಕಾರ ತಾನೇನು ಮಾಡುವುದು ಸಾಧ್ಯವಿಲ್ಲ ಇದು ಕಂಪೆನಿಯ ಮಾನವ ಸಂಪನ್ಮೂಲ(ಎಚ್ಐರ್) ವಿಭಾಗಕ್ಕೆ ಸೇರಿದ ವಿಚಾರ ಎಂದು ಹೇಳಿದೆ.

ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ಅವರು "ಕೆಲಸಕಳೆದುಕೊಳ್ಳುತ್ತಿರುವ ನೌಕರರ ಬಗ್ಗೆ ಬಹಳ ಬೇಸರವಿದೆ ಆದರೆ ಇದು ಕಂಪೆನಿಯ ಎಚ್ಆರ್ ವಿಭಾಗಕ್ಕೆ ಸೇರಿದ ವಿಚಾರ ಮತ್ತು ಸರಕಾರ ವಿಚಾರದಲ್ಲಿ ಏನು ಮಾಡುವಂತಿಲ್ಲ" ಎಂದು ಹೇಳಿದರು.

ಭಾರತದ ವಿಮಾನಯಾನ ಕ್ಷೇತ್ರದಲ್ಲಿ ಉಂಟಾಗುತ್ತಿರುವ ಬಿಕ್ಕಟ್ಟಿನ ಪರಿಣಾಮವಾಗಿ ಇಂಡಿಯನ್ ಏರ್‌ಲೈನ್ಸ್‌ ಸಹ ನೌಕರರನ್ನು ವಜಾಗೊಳಿಸುವುದೇ ಎಂದು ಪ್ರಶ್ನಿಸಿದ್ದಕ್ಕೆ ಅವರು, "ಇಲ್ಲ. ಏರ್ ಇಂಡಿಯಾ ಯಾವುದೇ ನೌಕರರನ್ನು ವಜಾಗೊಳಿಸುವುದಿಲ್ಲ. ಆದರೆ ಈ ಪರಿಸ್ಥಿತಿ ಖಂಡಿತವಾಗಿಯೂ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು" ಎಂದು ಅವರು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನೌಕರರ ವಜಾ: ಜೆಟ್ ದಾರಿಯಲ್ಲಿ ಪೆಪ್ಸಿಕೋಲಾ
ಜೆಟ್-ಕಿಂಗ್‌ಫಿಶರ್ ವಿಲೀನ ಯೋಜನೆಯಿಲ್ಲ: ಮಲ್ಯ
ಆರ್‌ಬಿಐಯಿಂದ ಆರ್ಥಿಕ ಬಿಕ್ಕಟ್ಟು ಪರಿಶೀಲನೆ
ನೌಕರರ ಸೇರಿಸಿಕೊಳ್ಳದಿದ್ದರೆ ವಿಮಾನ ಹಾರಾಟಕ್ಕೆ ಅಡ್ಡಿ:ಠಾಕ್ರೆ
ಆರ್ಥಿಕ ಕುಸಿತ ತಡೆಗೆ ಸೂಕ್ತ ಕ್ರಮ: ಚಿದು
ಸಾವಿರ ಉದ್ಯೋಗಿಗಳಿಗೆ ಅರ್ಧಚಂದ್ರ: ಜೆಟ್ ಏರ್‌ವೇಸ್