ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ವಾಲ್‌ಸ್ಟ್ರೀಟ್: ಐತಿಹಾಸಿಕ ದಾಖಲೆಯ ಕುಸಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಾಲ್‌ಸ್ಟ್ರೀಟ್: ಐತಿಹಾಸಿಕ ದಾಖಲೆಯ ಕುಸಿತ
ಕಳೆದೆರಡು ದಶಕದಲ್ಲೇ ಅತ್ಯಧಿಕ ಮಟ್ಟದ ಕುಸಿತವನ್ನು ವಾಲ್‌ಸ್ಟ್ರೀಟ್ ಶೇರುಗಳು ಕಂಡಿದ್ದು ಜಾಗತಿಕ ಆರ್ಥಿಕ ಮಾರುಕಟ್ಟೆ ತಲ್ಲಣಗೊಂಡಿದ್ದು ವಿಶ್ವದ ಅತಿದೊಡ್ಡ ಆರ್ಥಿಕತೆ ಹಿಂಜರಿತಕ್ಕೆ ಜಾರುವ ಭೀತಿಯನ್ನು ಹುಟ್ಟುಹಾಕಿದೆ. ಇತಿಹಾಸದಲ್ಲೇ ಇದು ಎರಡನೆಯ ಅತಿ ದೊಡ್ಡ ಕುಸಿತವಾಗಿದೆ.

ಡೋ ಜೋನ್ಸ್ ಇಂಡಸ್ಟ್ರಿಯಲ್ ಸರಾಸರಿಯು 733.08(ಶೇ.7.87) ಅಂಕಗಳಷ್ಚು ಕುಸಿದಿದೆ. ಇದು ಕಳೆದ ತಿಂಗಳ ದಾಖಲೆಯ ಕುಸಿತ 777 ಅಂಕಗಳ ನಂತರದ ಅತ್ಯಂತ ಕೆಟ್ಟ ಇಳಿಕೆಯಾಗಿದೆ. ಅಲ್ಲದೆ 1987ರ ಬಳಿಕದ ಅತಿ ಮೊನಚಿನ ಕುಸಿತವಾಗಿದೆ.
ವಿಸ್ತರಿತ ಮಾರುಕಟ್ಟೆ ಸ್ಯಾಂಡರ್ಡ್ ಮತ್ತು ಪೂರ್ ಸೂಚ್ಯಂಕವು 90.17 ಅಂಕಗಳನ್ನು (ಶೇ.9.03) ಕಳೆದುಕೊಂಡು 907.84 ಅಂಕಗಳಿಗೆ ಇಳಿದಿದೆ.

ನಸ್ದಕ್ ಸೂಚ್ಯಂಕವು 150.68(ಶೇ.8.47) ಅಂಕಗಳಷ್ಟು ಕುಸಿತ ಕಂಡಿದ್ದು, 1,628.33 ಅಂಕಗಳಿಗೆ ಇಳಿದಿದೆ. ಬೃಹತ್ ರಕ್ಷಣಾ ಕ್ರಮಗಳನ್ನು ಕೈಗೊಂಡಿದ್ದರೂ ಕುಸಿತ ಮುಂದುವರಿದಿದೆ.

ಆರ್ಥಿಕ ಹಿಂಜರಿತದ ಭೀತಿಯಿಂದ ಶೇರು ಮಾರುಕಟ್ಟೆ ಹೂತು ಹೋಗಿದೆ ಎಂದು ವಕೋವಿಯಾ ಸೆಕ್ಯುರಿಟೀಸ್‌ನ ಅಲ್ ಗೋಲ್ಡ್‌ಮನ್ ಹೇಳಿದ್ದಾರೆ.

ರಖಂ ಮಾರಾಟವು ನಿರೀಕ್ಷೆಗೆ ಮೀರಿ ಕುಸಿದಿದೆ. ಉತ್ಪಾದನಾ ರಂಗದ ಶೇರುಗಳೂ ಕುಸಿತಕ್ಕೀಡಾಗಿವೆ. ಅಂತೆಯೇ ಆರ್ಥಿಕ ಸೂಕ್ಷ್ಮ ಕಂಪೆನಿಗಳ ಬುಡ ಅಲ್ಲಾಡುತ್ತಿದೆ.

ಲಂಡನ್ ಶೇರು ಮಾರುಕಟ್ಟೆಯು ಶೇ.7.16ರಷ್ಟು ಕುಸಿದಿದ್ದರೆ, ಫ್ರಾಂಕ್‌ಫರ್ಟ್ ಶೇ6.49ರಷ್ಟು ಮತ್ತು ಪ್ಯಾರೀಸ್ ಮಾರುಕಟ್ಟೆಯಲ್ಲಿ ಶೇ.6.82ರಷ್ಟು ಕುಸಿತ ದಾಖಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜೆಟ್ ಏರ್‌ವೇಸ್‌ನಿಂದ 1900 ನೌಕರರಿಗೆ ಕೊಕ್
ನೌಕರರ ವಜಾ: ಜೆಟ್ ದಾರಿಯಲ್ಲಿ ಪೆಪ್ಸಿಕೋಲಾ
ಜೆಟ್-ಕಿಂಗ್‌ಫಿಶರ್ ವಿಲೀನ ಯೋಜನೆಯಿಲ್ಲ: ಮಲ್ಯ
ಆರ್‌ಬಿಐಯಿಂದ ಆರ್ಥಿಕ ಬಿಕ್ಕಟ್ಟು ಪರಿಶೀಲನೆ
ನೌಕರರ ಸೇರಿಸಿಕೊಳ್ಳದಿದ್ದರೆ ವಿಮಾನ ಹಾರಾಟಕ್ಕೆ ಅಡ್ಡಿ:ಠಾಕ್ರೆ
ಆರ್ಥಿಕ ಕುಸಿತ ತಡೆಗೆ ಸೂಕ್ತ ಕ್ರಮ: ಚಿದು