ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಏರ್ ಇಂಡಿಯಾದ 15 ಸಾವಿರ ನೌಕರರಿಗೆ ತಾತ್ಕಾಲಿಕ ಕತ್ತರಿ ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಏರ್ ಇಂಡಿಯಾದ 15 ಸಾವಿರ ನೌಕರರಿಗೆ ತಾತ್ಕಾಲಿಕ ಕತ್ತರಿ ?
ಜಾಗತಿಕ ಮಟ್ಟದಲ್ಲಿ ಆರ್ಥಿಕ ಸ್ಥಿತಿ ಡೋಲಾಯಮಾನ ಸ್ಥಿತಿಯ ಬಿಸಿ ತಟ್ಟಿರುವ ಹಿನ್ನೆಲೆಯಲ್ಲಿ ಜೆಟ್ ಏರ್‌ವೇಸ್ 1900 ಸಿಬ್ಬಂದಿಗಳಿಗೆ ಕೊಕ್ ನೀಡಿದ್ದ ಬೆನ್ನಲ್ಲೇ, ಇದೀಗ ದೇಶದ ಸರಕಾರಿ ಒಡೆತನದ ಏರ್ ಇಂಡಿಯಾ ಕೂಡ ಸುಮಾರು 15 ಸಾವಿರ ನೌಕರರನ್ನು 3 ರಿಂದ 5 ವರ್ಷಗಳ ಕಾಲ ಸಂಬಳ ರಹಿತ ರಜೆಯ ಮೇಲೆ ಕಳುಹಿಸುವ ಚಿಂತನೆ ನಡೆಸುತ್ತಿರುವುದಾಗಿ ಗುರುವಾರ ತಿಳಿಸಿದೆ.

ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ನಾವು 3 ರಿಂದ 5 ವರ್ಷಗಳ ಕಾಲ ಸಂಬಳ ರಹಿತ ರಜೆಯ ಮೇಲೆ ತೆರಳುವ ಕುರಿತುವ ನೌಕರರನ್ನು ಕೋರಿದ್ದು, ನಾವು ಸುಮಾರು 15ಸಾವಿರ ನೌಕರರನ್ನು ಈ ರೀತಿ ರಜೆ ಮೇಲೆ ಕಳುಹಿಸಲು ಚಿಂತನೆ ನಡೆಸಿರುವುದಾಗಿ ಏರ್ ಇಂಡಿಯಾ ಎಎಂಡಿ ರಾಘು ಮೆನನ್ ಹೇಳಿದ್ದಾರೆ.

ನಮ್ಮ ಕೋರಿಕೆಯನ್ನು ಮನ್ನಿಸಿ ರಜೆಯ ಮೇಲೆ ತೆರಳುವ ನೌಕರರನ್ನು, ನಾವು ಅದೇ ಸೇವಾ ಹಿರಿತನದ ಆಧಾರದ ಮೇಲೆ ಹಿಂದಿನ ಸಂಬಳದಲ್ಲೇ ಕೆಲಸದಲ್ಲಿ ಮುಂದುವರಿಯಲು ಅನುವು ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ.

ಏರ್ ಇಂಡಿಯಾದ ಆಧೀನ ಸಂಸ್ಥೆ ರಾಷ್ಟ್ರೀಯ ವಿಮಾನಯಾನ ಕಂಪೆನಿಯ ಅಧಿಕಾರಿಯೊಬ್ಬರು, ಇದು ಖಾಸಗಿ ಸಂಸ್ಥೆಗಳಾದ ಜೆಟ್ ಏರ್‌ವೇಸ್ ಅಥವಾ ಕಿಂಗ್‌ಫಿಶರ್ ಏರ್‌ಲೈನ್ಸ್ ಮಾಡಿದಂತೆ ವಜಾ ಮಾಡುವುದಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಕಂಪೆನಿಯ ಮಂಡಳಿಯ ಎದುರು ಶೀಘ್ರದಲ್ಲೇ ಈ ವೇತನ ರಹಿತ ರಜೆಗಾಗಿನ ಪ್ರಸ್ತಾಪವನ್ನು ಮಂಡಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.

ದೇಶದ ಪ್ರತಿಷ್ಠಿತ ಖಾಸಗಿ ವಿಮಾನಯಾನ ಸಂಸ್ಥೆಯಾದ ಜೆಟ್ ಏರ್ ವೇಸ್ ತನ್ನ 1900 ನೌಕರರ ಹುದ್ದೆಯನ್ನು ಕಡಿತಗೊಳಿಸಿದ ಹೇಳಿಕೆ ಬಂದ ಬೆನ್ನಲ್ಲೇ,ಮೆನನ್ ಅವರ ಈ ಹೇಳಿಕೆ ಹೊರಬಿದ್ದಿರುವುದು ನೌಕರರಲ್ಲಿ ಆತಂಕ ಮನೆಮಾಡುವಂತಾಗಿದೆ.

ಆದರೆ ಬುಧವಾರವಷ್ಟೇ ಸರ್ಕಾರ, ಏರ್ ಇಂಡಿಯಾದಿಂದ ಯಾವುದೇ ನೌಕರರನ್ನು ತೆಗೆಯುವ ಪ್ರಸ್ತಾಪ ನಮ್ಮ ಮುಂದಿಲ್ಲ ಎಂದು ನಾಗರಿಕ ವಿಮಾನಯಾನ ಸಚಿವ ಪ್ರಫುಲ್ಲ ಪಟೇಲ್ ಭರವಸೆ ನೀಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹಣದುಬ್ಬರ ಶೇ.11.44ಕ್ಕೆ ಇಳಿಕೆ
ವಾಲ್‌ಸ್ಟ್ರೀಟ್: ಐತಿಹಾಸಿಕ ದಾಖಲೆಯ ಕುಸಿತ
ಜೆಟ್ ಏರ್‌ವೇಸ್‌ನಿಂದ 1900 ನೌಕರರಿಗೆ ಕೊಕ್
ನೌಕರರ ವಜಾ: ಜೆಟ್ ದಾರಿಯಲ್ಲಿ ಪೆಪ್ಸಿಕೋಲಾ
ಜೆಟ್-ಕಿಂಗ್‌ಫಿಶರ್ ವಿಲೀನ ಯೋಜನೆಯಿಲ್ಲ: ಮಲ್ಯ
ಆರ್‌ಬಿಐಯಿಂದ ಆರ್ಥಿಕ ಬಿಕ್ಕಟ್ಟು ಪರಿಶೀಲನೆ