ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಆಹಾರ, ಇಂಧನ ದರ ಏರಿಕೆಯಿಂದ ಬದುಕು ದುಸ್ತರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಹಾರ, ಇಂಧನ ದರ ಏರಿಕೆಯಿಂದ ಬದುಕು ದುಸ್ತರ
ನ್ಯೂಯಾರ್ಕ್: ಇತ್ತೀಚಿನ ದಿನಗಳಲ್ಲಿನ ಆಹಾರ, ಪೆಟ್ರೋಲಿಯಂ ಮತ್ತು ವಿದ್ಯುತ್ ದರ ಏರಿಕೆ ಪರಿಣಾಮ ಜನತೆಗೆ ಬದುಕು ದುರ್ಬರವೆನಿಸಿದೆ. ಹೀಗೆಂದು ಬಿಬಿಸಿ ವರ್ಲ್ಡ್ ಸರ್ವಿಸ್ ನಡೆಸಿದ ಸಮೀಕ್ಷೆಯಲ್ಲಿ 26 ದೇಶಗಳ ಸುಮಾರು ಮೂರನೇ ಎರಡರಷ್ಟು ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಹುಪಾಲು ಮಂದಿ ಕುಟುಂಬದ ನಿರ್ವಹಣೆಗೆ ಸರ್ಕಸ್ ಮಾಡಬೇಕಾದ ಅನಿವಾರ್ಯತೆ ಬಗ್ಗೆ ಒತ್ತಿ ಹೇಳಿದ್ದಾರೆ.

ಈ ಸಮೀಕ್ಷೆ ಪ್ರಕಾರ ಜಗತ್ತಿನ ಬಡ ದೇಶಗಳು ಕಷ್ಟಕರ ಪರಿಸ್ಥಿತಿಯನ್ನೆದುರಿಸುತ್ತಿದ್ದು, ಅಗತ್ಯವಾಗಿ ಕನಿಷ್ಠ ಪಕ್ಷ ಇಲ್ಲಾದರೂ ವಾತಾವರಣ ಬದಲಾಗಬೇಕು ಎಂಬ ಸಲಹೆ ಬಂದಿದೆ. ದರ ಏರಿಕೆ ಪರಿಣಾಮ ಜನತೆಯ ಆಹಾರ ಸೇವಿಸುವ ಪ್ರಮಾಣದಲ್ಲಿ ಕುಸಿತವಾಗಿದೆ.

ಫಿಲಿಫೈನ್ಸ್ ಮತ್ತು ಪನಾಮಾದಲ್ಲಿ ಶೇಕಡಾ 63, ಕೀನ್ಯಾದಲ್ಲಿ ಶೇಕಡಾ 61, ನೈಜೀರಿಯಾದಲ್ಲಿ ಶೇಕಡಾ 58ರಷ್ಟು ಮಂದಿ ಆಹಾರ ಸೇವನಾ ಪ್ರಮಾಣವನ್ನು ಕಡಿತಗೊಳಿಸಿದ್ದಾರೆ ಮತ್ತು ಶೈಲಿಯನ್ನು ಬದಲಿಸಿದ್ದಾರೆ. ಪ್ರಗತಿಪರ ದೇಶಗಳಾದ ಆಸ್ಟ್ರೇಲಿಯಾದ ಶೇಕಡಾ 27, ಯು.ಕೆ.ಯ ಶೇಕಡಾ 25, ಜರ್ಮನಿಯಲ್ಲಿನ ಶೇಕಡಾ 10 ಮಂದಿ ಹೇಳುವ ಪ್ರಕಾರ ಆಹಾರ ದರ ಏರಿಕೆ ಪರಿಣಾಮ ತಟ್ಟಿದ್ದರೂ ಸಹ, ಸೇವನಾ ಪ್ರಮಾಣದಲ್ಲಷ್ಟೇ ಕಡಿತಗೊಳಿಸಿದ್ದಾರೆ. ಆದರೆ ಸಾಮಾನ್ಯವಾಗಿ ಹೇಳುವುದಾದರೆ ಅಭಿವೃದ್ಧಿಶೀಲ ರಾಷ್ಟ್ರಗಳ ಜನ ತಮ್ಮ ಜೀವನ ಶೈಲಿಯಲ್ಲಿ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ. ಸ್ಜೇನ್‌ನ ಶೇಕಡಾ 17, ಪೋಲ್ಯಾಂಡ್‌ನ ಶೇಕಡಾ 19, ಜರ್ಮನಿಯ ಶೇಕಡಾ 24 ಮಂದಿ ಮಾತ್ರ ತಮ್ಮ ಆಹಾರ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ.

ಜಗತ್ತಿನ ಶೇಕಡಾ 70ರಷ್ಟು ಜನ ಆಹಾರ ದರ ಏರಿಕೆ ಹಿಡಿತದಲ್ಲಿಟ್ಟುಕೊಳ್ಳುವ ವಿಚಾರದಲ್ಲಿ ತಮ್ಮ ಸರಕಾರಗಳ ಕಾರ್ಯನಿರ್ವಹಣೆ ಬಗ್ಗೆ ಅಸಂತೃಪ್ತಿ ವ್ಯಕ್ತಪಡಿಸಿದ್ದಾರೆ. ಈಜಿಪ್ಟ್‌ನಲ್ಲಿ ಶೇಕಡಾ 88, ಫಿಲಿಫೈನ್ಸ್‌ನಲ್ಲಿ ಶೇಕಡಾ 86, ಲೆಬನಾನ್‌ನಲ್ಲಿ ಶೇಕಡಾ 85, ಫ್ರಾನ್ಸ್‌ನಲ್ಲಿ ಶೇಕಡಾ 79, ರಷ್ಯಾದಲ್ಲಿ ಶೇಕಡಾ 78 ಹಾಗೂ ಇಟಲಿಯಲ್ಲಿ ಶೇಕಡಾ 74ರಷ್ಟು ಮಂದಿ ಸರಕಾರದ ಬಗ್ಗೆ ಅಸಮಾಧಾನ ಸೂಚಿಸಿದ್ದಾರೆ. ಭಾರತದ ಶೇಕಡಾ 49 ಮತ್ತು ಅರಬ್ ರಾಷ್ಟ್ರಗಳ ಶೇಕಡಾ 47ರಷ್ಟು ಬಡಜನತೆ ಕೂಡ ಆಹಾರ ದರ ಏರಿಕೆ ಅನಿಯಂತ್ರಿತವಾಗಿರುವುದಕ್ಕೆ ಸರಕಾರವನ್ನು ದೂಷಿಸಿದ್ದಾರೆ. ಆದರೆ ಚೀನಾದಲ್ಲಿ ವ್ಯತಿರಿಕ್ತ ವಾತಾವರಣ. ಮೂರರಲ್ಲಿ ಎರಡರಷ್ಟು ಮಂದಿ ಸರಕಾರದ ಕ್ರಮಗಳ ಬಗ್ಗೆ ಸಮಾಧಾನ ಹೊಂದಿದ್ದಾರೆ. ಆಹಾರ ಮತ್ತು ಇಂಧನ ಬೆಲೆ ಗಗನಕ್ಕೇರಿರುವುದರಿಂದ ಭಾರತದ ಶೇಕಡಾ 80ರಷ್ಟು ಜನತೆಗೆ ಜೀವನ ಒಂದು ಸವಾಲಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ ಸಮೀಕ್ಷೆಯನ್ನು ಜಗತ್ತಿನ 26 ರಾಷ್ಟ್ರಗಳಲ್ಲಿ ನಡೆಸಲಾಗಿದ್ದು, ಅದರಲ್ಲಿ 23 ದೇಶಗಳು ಇಂಧನ ಮತ್ತು ಆಹಾರದ ಬೆಲೆ ಏರುಗತಿಯಲ್ಲಿ ಸಾಗುತ್ತಿರುವ ಬಗ್ಗೆ ಆತಂಕಿತರಾಗಿದ್ದಾರೆ. ಈ ಸಮೀಕ್ಷೆಯಲ್ಲಿ ಭಾರತ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಕೋಸ್ಟರಿಕಾ, ಈಜಿಪ್ಟ್, ಫ್ರಾನ್ಸ್, ಜರ್ಮನಿ, ಇಂಡೋನೇಷಿಯಾ, ಇಟಲಿ, ಕೀನ್ಯಾ, ಲೆಬನಾನ್, ಮೆಕ್ಸಿಕೋ, ನೈಜೀರಿಯಾ, ಪಾಕಿಸ್ತಾನ, ಪನಾಮಾ, ಫಿಲಿಫೈನ್ಸ್, ಪೋಲ್ಯಾಂಡ್, ರಷ್ಯಾ, ದಕ್ಷಿಣ ಕೊರಿಯಾ, ಸ್ಪೇನ್, ಟರ್ಕಿ, ಯುಎಇ, ಅಮೆರಿಕಾ ಮತ್ತು ಯುಕೆ ಸಂಯುಕ್ತ ರಾಷ್ಟ್ರಗಳ ಒಟ್ಟು 27,319 ಜನ ಭಾಗವಹಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಏರ್ ಇಂಡಿಯಾದ 15 ಸಾವಿರ ನೌಕರರಿಗೆ ತಾತ್ಕಾಲಿಕ ಕತ್ತರಿ ?
ಹಣದುಬ್ಬರ ಶೇ.11.44ಕ್ಕೆ ಇಳಿಕೆ
ವಾಲ್‌ಸ್ಟ್ರೀಟ್: ಐತಿಹಾಸಿಕ ದಾಖಲೆಯ ಕುಸಿತ
ಜೆಟ್ ಏರ್‌ವೇಸ್‌ನಿಂದ 1900 ನೌಕರರಿಗೆ ಕೊಕ್
ನೌಕರರ ವಜಾ: ಜೆಟ್ ದಾರಿಯಲ್ಲಿ ಪೆಪ್ಸಿಕೋಲಾ
ಜೆಟ್-ಕಿಂಗ್‌ಫಿಶರ್ ವಿಲೀನ ಯೋಜನೆಯಿಲ್ಲ: ಮಲ್ಯ