ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಜೆಟ್ ಉದ್ಯೋಗಿಗಳು ಮರಳಿ ನೌಕರಿಗೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜೆಟ್ ಉದ್ಯೋಗಿಗಳು ಮರಳಿ ನೌಕರಿಗೆ
PR
ಜೆಟ್ ಏರ್‌ವೇಸ್‌ನಿಂದ ವಜಾಗೊಳಿಸಲಾಗಿರುವ ಎಲ್ಲಾ ನೌಕರರನ್ನು ಮರಳಿ ತೆಗೆದುಕೊಳ್ಳಲಾಗುವುದು ಎಂದು ಜೆಟ್ ಏರ್‌ವೇಸ್ ಮುಖ್ಯಸ್ಥ ನರೇಶ್ ಗೋಯಲ್ ಘೋಷಿದ್ದಾರೆ.

ಗುರುವಾರ ತಡ ರಾತ್ರಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾವನಾತ್ಮಕರಾದ ಗೋಯಲ್ ನೌಕರರ ಕ್ಷಮೆ ಕೋರಿದರು ಮತ್ತು ಈ ನಿರ್ಧಾರವನ್ನು ಯಾವುದೇ ರಾಜಕೀಯ ಒತ್ತಡದಿಂದ ಕೈಗೊಳ್ಳಲಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.

"ನಾನು ಎಲ್ಲಾ ನೌಕರರನ್ನು ನಾಳೆ (ಶುಕ್ರವಾರ) ಮತ್ತೆ ಕೆಲಸಕ್ಕೆ ಹಾಜರಾಗುವಂತೆ ಮನವಿ ಮಾಡುತ್ತೇನೆ. ನಾವೆಲ್ಲಾ ಸೇರಿ ಆರ್ಥಿಕತೆಯನ್ನು ಸರಿಯಾದ ದಾರಿಗೆ ತರಲು ಉಪಾಯ ಕಂಡುಕೊಳ್ಳುತ್ತೇವೆ ಎಂಬ ಭರವಸೆ ನನಗಿದೆ" ಎಂದು ಅವರು ಹೇಳಿದ್ದಾರೆ.

"ಈ ಸಂಸ್ಥೆ ಉತ್ತಮ ಸ್ಥಾನ ತಲುಪಲು ನೌಕರರೇ ಕಾರಣ. ಅವರೆಲ್ಲಾ ಖಂಡಿತ ಇದನ್ನು ಮತ್ತೆ ಆರ್ಥಿಕವಾಗಿ ಸದೃಢ ಸ್ಥಿತಿಗೆ ಮರಳಿಸುತ್ತಾರೆ ಎಂಬ ವಿಶ್ವಾಸವಿದೆ. ನಾನು ಈ ನಿರ್ಧಾರ ಕೈಗೊಳ್ಳುವಾಗ ಅಂಕಿಅಂಶಗಳು ಮತ್ತು ಹಣದ ವಿಷಯವನ್ನು ಬದಿಗಿರಿಸಿದ್ದೇನೆ. ನನ್ನ ನಿರ್ವಾಹಕ ಮಂಡಳಿ ಮತ್ತು ನನ್ನ ಪತ್ನಿಗೂ ಸಹ ಈ ವಿಷಯ ತಿಳಿದಿಲ್ಲ" ಎಂದು ಅವರು ಹೇಳಿದ್ದಾರೆ.

ಗೋಯಲ್ ಅವರು ಈ ನಿರ್ಧಾರವು ಯಾವುದೇ ರೀತಿಯಲ್ಲೂ ವಿಜಯ್ ಮಲ್ಯ ಅವರ ಕಿಂಗ್ ಫಿಶರ್ ಸಂಸ್ಥೆಗೆ ಸಂಬಂಧಿಸಿಲ್ಲ ಎಂದು ಸಹ ಸ್ಪಷ್ಟಪಡಿಸಿದರು.

ನೌಕರರು ಮತ್ತು ರಾಜಕೀಯ ಪಕ್ಷಗಳಿಂದ ಪ್ರತಿಭಟಿಸಲ್ಪಟ್ಟ 1900 ನೌಕರರನ್ನು ವಜಾಗೊಳಿಸುವ ನಿರ್ಧಾರವನ್ನು ತಮ್ಮದಲ್ಲವೆಂದ ಗೋಯಲ್ "ನಿರ್ವಾಹಕ ಮಂಡಳಿ ಈ ನಿರ್ಣಯ ಕೈಗೊಂಡಿತ್ತು ಮತ್ತು ನಾನು ಎರಡು ದಿನಗಳಿಂದ ನಗರದ ಹೊರಗಿದ್ದೆ. ನನ್ನ ಯುವ ಕಾರ್ಮಿಕರು ಕಣ್ಣೀರು ಹರಿಸುತ್ತಿರುವ ದೃಶ್ಯಗಳನ್ನು ಕಂಡು ಬಹಳ ಬೇಸರವಾಯಿತು. ಅವರನ್ನು ದುಃಖದಲ್ಲಿ ನೋಡುವುದು ಸಾಧ್ಯವಿಲ್ಲವಾದ್ದರಿಂದ ಅವರೆಲ್ಲರನ್ನು ಮರಳಿ ತೆಗೆದುಕೊಳ್ಳುವ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಅವರು ಹೇಳಿದ್ದಾರೆ".

"ರಾತ್ರಿಗಳಲ್ಲಿ ಶಾಂತಿಯುತ ನಿದ್ರೆ ಮಾಡಲು ಸಾಧ್ಯವಾಗುವಂತೆ ನಾನು ಈ ನಿರ್ಧಾರ ತೆಗೆದುಕೊಂಡೆ. ನನ್ನ ಮೇಲೆ ಒತ್ತಡವಿಲ್ಲ ನಾನು ಬಹಳಷ್ಟು ಕಷ್ಟಗಳನ್ನು ನನ್ನ ಬದುಕಿನಲ್ಲಿ ಎದುರಿಸಿದ್ದೇನೆ" ಎಂದು ಅವರು ಹೇಳಿದ್ದಾರೆ ಮತ್ತು ನೌಕರರು ಅನುಭವಿಸಬೇಕಾದ ನೋವಿಗಾಗಿ ಅವರು ಕ್ಷಮೆ ಕೋರಿದರು.

ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ನಿರ್ಣಯವನ್ನು ಸ್ವಾಗತಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆಹಾರ, ಇಂಧನ ದರ ಏರಿಕೆಯಿಂದ ಬದುಕು ದುಸ್ತರ
ಏರ್ ಇಂಡಿಯಾದ 15 ಸಾವಿರ ನೌಕರರಿಗೆ ತಾತ್ಕಾಲಿಕ ಕತ್ತರಿ ?
ಹಣದುಬ್ಬರ ಶೇ.11.44ಕ್ಕೆ ಇಳಿಕೆ
ವಾಲ್‌ಸ್ಟ್ರೀಟ್: ಐತಿಹಾಸಿಕ ದಾಖಲೆಯ ಕುಸಿತ
ಜೆಟ್ ಏರ್‌ವೇಸ್‌ನಿಂದ 1900 ನೌಕರರಿಗೆ ಕೊಕ್
ನೌಕರರ ವಜಾ: ಜೆಟ್ ದಾರಿಯಲ್ಲಿ ಪೆಪ್ಸಿಕೋಲಾ