ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಆರ್ಥಿಕ ಕುಸಿತ: ಆರ್‌‌ಬಿಐನಿಂದ ಸೂಕ್ಷ್ಮ ಪರಿಶೀಲನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆರ್ಥಿಕ ಕುಸಿತ: ಆರ್‌‌ಬಿಐನಿಂದ ಸೂಕ್ಷ್ಮ ಪರಿಶೀಲನೆ
ಭಾರತದ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿಗಳನ್ನು ರಿಸರ್ವ್ ಬ್ಯಾಂಕ್ ಸೂಕ್ಷ್ಮಮವಾಗಿ ಪರಿಶೀಲಿಸುತ್ತಿದ್ದು ಅಗತ್ಯ ಕಂಡು ಬಂದಲ್ಲಿ ಇನ್ನೂ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಗವರ್ನರ್ ಡಿ .ಸುಬ್ಬರಾವ್ ಗುರುವಾರ ತಿಳಿಸಿದ್ದಾರೆ.

ಈಗಾಗಲೇ ಅಗತ್ಯ ಕ್ರಮಗಳನ್ನು ಈತನಕ ಕೈಗೊಂಡಿದ್ದು ಅವಶ್ಯಕತೆ ಬಂದಲ್ಲಿ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ಅವರು ಹೇಳಿದರು.

ನಗದು ಮೀಸಲು ದರದಲ್ಲಿ 100 ಬೇಸಿಸ್ ಪಾಯಿಂಟ್‌ಗಳನ್ನು ಕಡಿತಗೊಳಿಸಿ ರಿಸರ್ವ್ ಬ್ಯಾಂಕ್ ಗುರುವಾರದಂದು 40,000ಕೋಟಿ ರೂಪಾಯಿ ನಷ್ಟ ಪರಿಹಾರ ತುಂಬಲು ಹಣ ಬಿಡುಗಡೆ ಮಾಡಿದೆ.ಇದರ ಹೊರತು ರೈತರ ಸಾಲಮನ್ನ ಯೋಜನೆಯ ಪ್ರಥಮ ಕಂತಾಗಿ ವಾಣಿಜ್ಯ ಬ್ಯಾಂಕ್ ಮತ್ತು ನಬಾರ್ಡ್‌ಗೆ ತಕ್ಷಣ 25,000ಕೋಟಿ ರೂಗಳನ್ನು ಬಿಡುಗಡೆ ಮಾಡಿರುವುದಾಗಿ ತಿಳಿಸಿದರು.

"ಪರಿಸ್ಥಿಯನ್ನು ಸೂಕ್ಷ್ಮವಾಗಿ ಪರಿಶೀಲಿಸುವುದನ್ನು ನಾವು ಮುಂದುವರಿಸುತ್ತೇವೆ,ಸದ್ಯದ ಮಟ್ಟಿಗೆ ಎಲ್ಲವೂ ನಿಯಂತ್ರಣದಲ್ಲಿದೆ" ಎಂದು ಸುಬ್ಬರಾವ್ ಮಂಡಳಿ ಸಭೆಯ ಬಳಿಕ ಮಾತನಾಡುತ್ತಾ ನುಡಿದರು. ದೇಶದ ಹಣಕಾಸು ವ್ಯವಸ್ಥೆಯು 15ದಿವಸದ ಅವಧಿಯೊಳಗೆ 1,45,000ಕೋಟಿ ರೂ.ಗಳ ದ್ರವ್ಯತೆಯನ್ನು ಪಡೆದಿದೆ.

ಇದರಲ್ಲಿ ಮ್ಯುಚುವಲ್ ಫಂಡ್‌ಗಳಿಗೆ 20,000ಕೋಟಿ ರೂ.ಗಳ ಹರಿವು ಮತ್ತು 150 ಬೇಸಿಕ್ ಪಾಯಿಂಟ್‌ಗಳ ಸಿಆರ್ಆರ್ ಕಡಿತದ ಮ‌ೂಲಕ 60,000ಕೋಟಿ ರೂಪಾಯಿಗಳ ಬಿಡುಗಡೆ ಸೇರಿವೆ. ಅಗತ್ಯಬಿದ್ದಲ್ಲಿ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ವಿತ್ತ ಸಚಿವ ಪಿ.ಚಿದಂಬರಂ ಮತ್ತು ಆರ್‌ಬಿಐ ಭರವಸೆ ನೀಡಿದೆ.

ಭಾರತದ ಬ್ಯಾಂಕಿಂಗನ್ನು ಸುಭದ್ರಪಡಿಸಲು ದೇಶದ ನಿಧಿ ಸಂಗ್ರಹಕ್ಕಾಗಿ ಬಂಡವಾಳ ಸಾಮರ್ಥ್ಯವನ್ನು ಶೇಕಡಾ 12ಕ್ಕೇರಿಸುವ ಭರವಸೆ ನೀಡಿದ್ದಾರೆ. ಏತನ್ಮಧ್ಯೆ,ವಿದೇಶಿ ಹೂಡಿಕೆಯನ್ನು ಆಕರ್ಷಿಸಲು ಎಫ್‌ಐಐ ಹೂಡಿಕೆ ಮಿತಿಯನ್ನು ದ್ವಿಗುಣಗೊಳಿಸುವುದಾಗಿ ಹಣಕಾಸು ಸಚಿವರು ಘೋಷಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜೆಟ್ ಉದ್ಯೋಗಿಗಳು ಮರಳಿ ನೌಕರಿಗೆ
ಆಹಾರ, ಇಂಧನ ದರ ಏರಿಕೆಯಿಂದ ಬದುಕು ದುಸ್ತರ
ಏರ್ ಇಂಡಿಯಾದ 15 ಸಾವಿರ ನೌಕರರಿಗೆ ತಾತ್ಕಾಲಿಕ ಕತ್ತರಿ ?
ಹಣದುಬ್ಬರ ಶೇ.11.44ಕ್ಕೆ ಇಳಿಕೆ
ವಾಲ್‌ಸ್ಟ್ರೀಟ್: ಐತಿಹಾಸಿಕ ದಾಖಲೆಯ ಕುಸಿತ
ಜೆಟ್ ಏರ್‌ವೇಸ್‌ನಿಂದ 1900 ನೌಕರರಿಗೆ ಕೊಕ್