ಅಂತಾರಾಷ್ಟೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ 69.85 ಡಾಲರ್‌ಗೆ ಇಳಿಕೆಯಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
2007ರ ಜೂನ್ 27ರಲ್ಲಿ ಪ್ರತಿ ಬ್ಯಾರೆಲ್‌ಗೆ 68.57 ಡಾಲರ್ ಇಳಿಕೆಯಾದಂತೆ ಪ್ರಸಕ್ತ ವಾರದಲ್ಲಿ ಪ್ರತಿ ಬ್ಯಾರೆಲ್‌ಗೆ 69.85 ಡಾಲರ್‌ಗೆ ದಾಖಲೆಯ ಇಳಿಕೆಯಾಗಿದೆ. ಲವೆಂಬರ್ ತಿಂಗಳ ವಿತರಣೆಯ ಕಚ್ಚಾ ತೈಲ ಪ್ರತಿ ಬ್ಯಾರೆಲ್‌ಗೆ 66.32 ಡಾಲರ್‌ಗೆ ನಿಗದಿಯಾಗಿದೆ ಎಂದು ಮೂಲಗಳು ತಿಳಿಸಿವೆ.
ಜಾಗತಿಕವಾಗಿ ಬೇಡಿಕೆ ಕುಸಿತವಾಗುವ ಆತಂಕದಿಂದ ಅಗತ್ಯ ವಸ್ತುಗಳು ಚಿನ್ನಾಭರಣ ದರಗಳಲ್ಲಿ ಶೇ. 8ರಷ್ಟು ಇಳಿಕೆಯಾಗುವ ಸಾಧ್ಯತೆಗಳಿವೆ ಎಂದು ವಹಿವಾಟುದಾರರು ಅಭಿಪ್ರಾಯಪಟ್ಟಿದ್ದಾರೆ. |