ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ವಿದೇಶಿ ಕರೆನ್ಸಿ ಠೇವಣಿ ದರ ಹೆಚ್ಚಳ:ಎಸ್‌ಬಿಐ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿದೇಶಿ ಕರೆನ್ಸಿ ಠೇವಣಿ ದರ ಹೆಚ್ಚಳ:ಎಸ್‌ಬಿಐ
ದೇಶದ ಪ್ರತಿಷ್ಠಿತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿದೇಶಿ ಕರೆನ್ಸಿ ಠೇವಣಿಗಳ ಮೇಲೆ ಬಡ್ಡಿ ದರವನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಿದ್ದು, ಇದು ಶನಿವಾರದಿಂದಲೇ ಜಾರಿಗೆ ಬರಲಿದೆ ಎಂದು ಬ್ಯಾಂಕ್ ತಿಳಿಸಿದೆ.

1-2ವರ್ಷ ಅವಧಿಯ ಅಮೆರಿಕದ ಡಾಲರ್‌ ಠೇವಣಿಯ ಮೇಲೆ ಶೇ.4.21ರಷ್ಟು ಬಡ್ಡಿದರ ಹಾಗೂ 2-3ವರ್ಷದ ಅವಧಿಯ ಠೇವಣಿಗೆ 3.52 ಮತ್ತು 3-4ವರ್ಷದ ಅವಧಿಯ ಠೇವಣಿಗೆ 3.81 ಬಡ್ಡಿದರದಲ್ಲಿ ಹೆಚ್ಚಳ ಮಾಡಲಾಗಿದೆ ಎಂದು ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.

ಅದರಂತೆ ಯುರೋ ಮತ್ತು ಪೌಂಡ್‌ ಕರೆನ್ಸಿಯ 1-2 ವರ್ಷದ ಅವಧಿಯ ಠೇವಣಿಗಳಲ್ಲಿ ಶೇ. 5.74,ಮತ್ತು ಶೇ. 6.77ರಷ್ಟು ಬಡ್ಡಿ ದರವನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.

ಅನಿವಾಸಿ ಭಾರತೀಯರ 1-2 ವರ್ಷದ ಅವಧಿಯ ಠೇವಣಿ ಹಾಗೂ 2-3 ವರ್ಷದ ಠೇವಣಿ ಮತ್ತು 3-5ವರ್ಷ ಅವಧಿಯ ಠೇವಣಿಗಳ ಮೇಲೆ ಶೇ. 4.96, ಶೇ. 4.27 ಮತ್ತು ಶೇ. 4.56 ಬಡ್ಡಿದರವನ್ನು ಹೆಚ್ಚಿಸಲಾಗಿದೆ ಎಂದು ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ತೈಲ ಬೆಲೆ 70 ಡಾಲರ್‌ಗೆ ಕುಸಿತ
ಆರ್ಥಿಕ ಕುಸಿತ: ಆರ್‌‌ಬಿಐನಿಂದ ಸೂಕ್ಷ್ಮ ಪರಿಶೀಲನೆ
ಜೆಟ್ ಉದ್ಯೋಗಿಗಳು ಮರಳಿ ನೌಕರಿಗೆ
ಆಹಾರ, ಇಂಧನ ದರ ಏರಿಕೆಯಿಂದ ಬದುಕು ದುಸ್ತರ
ಏರ್ ಇಂಡಿಯಾದ 15 ಸಾವಿರ ನೌಕರರಿಗೆ ತಾತ್ಕಾಲಿಕ ಕತ್ತರಿ ?
ಹಣದುಬ್ಬರ ಶೇ.11.44ಕ್ಕೆ ಇಳಿಕೆ