ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಶೀಘ್ರವೇ ಭೂ ಬ್ಯಾಂಕ್ ಸ್ಥಾಪನೆ: ಯಡಿಯೂರಪ್ಪ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶೀಘ್ರವೇ ಭೂ ಬ್ಯಾಂಕ್ ಸ್ಥಾಪನೆ: ಯಡಿಯೂರಪ್ಪ
ಅಂತಾರಾಷ್ಟ್ರೀಯ ಮಟ್ಟದ ಹೂಡಿಕೆದಾರರನ್ನು ರಾಜ್ಯಕ್ಕೆ ಸೆಳೆಯಲು ಎಲ್ಲ ಜಿಲ್ಲೆಗಳಲ್ಲೂ ಭೂ ಬ್ಯಾಂಕ್‌ಗಳನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪರಿಶೀಲನಾ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2009ರ ಜನವರಿ 15ಮತ್ತು 16ರಂದು ನಡೆಯುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೂ ಮುನ್ನವೇ ಭೂ ಬ್ಯಾಂಕ್ ಸ್ಥಾಪಿಸಲಾಗುವುದು ಎಂದರು.

ಈ ನಿಟ್ಟಿನಲ್ಲಿ ಕೈಗಾರಿಕೆ ಸ್ಥಾಪನೆಗೆ ಅಗತ್ಯ ಭೂಮಿಯನ್ನು ಮೊದಲೇ ಸ್ವಾಧೀನ ಪಡಿಸಿಕೊಂಡು, ಕಾಯ್ದಿರಿಸಿಕೊಳ್ಳುವ ವ್ಯವಸ್ಥೆಯನ್ನು ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದರು.

ಅಲ್ಲದೇ ಕೈಗಾರಿಕೆಗಳ ಸ್ಥಾಪನೆಗೆಂದು ಸರ್ಕಾರದಿಂದ ಭೂಮಿ ಪಡೆದಿರುವ ಹಲವರು ಅದನ್ನು ಬಳಕೆ ಮಾಡದೆ ಹಾಗೆಯೇ ಉಳಿಸಿಕೊಂಡಿದ್ದಾರೆ. ಬಳಕೆಯಾಗದ ಭೂಮಿಯನ್ನು ಗುರುತಿಸಿ, ವಾಪಸು ಪಡೆಯಲು ಭೂ ಲೆಕ್ಕ ಪರಿಶೋಧನಾ ಸಮಿತಿಯನ್ನು ನೇಮಕ ಮಾಡಲು ಸಭೆ ತೀರ್ಮಾನಿಸಿದೆ ಎಂದು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭತ್ತ ಕ್ವಿಂಟಾಲ್‌ಗೆ 50 ರೂ.ಬೋನಸ್
ವಿದೇಶಿ ಕರೆನ್ಸಿ ಠೇವಣಿ ದರ ಹೆಚ್ಚಳ:ಎಸ್‌ಬಿಐ
ತೈಲ ಬೆಲೆ 70 ಡಾಲರ್‌ಗೆ ಕುಸಿತ
ಆರ್ಥಿಕ ಕುಸಿತ: ಆರ್‌‌ಬಿಐನಿಂದ ಸೂಕ್ಷ್ಮ ಪರಿಶೀಲನೆ
ಜೆಟ್ ಉದ್ಯೋಗಿಗಳು ಮರಳಿ ನೌಕರಿಗೆ
ಆಹಾರ, ಇಂಧನ ದರ ಏರಿಕೆಯಿಂದ ಬದುಕು ದುಸ್ತರ