ದೀಪಾವಳಿ ಹಬ್ಬದ ಕೊಡುಗೆ ಅಂಗವಾಗಿ ರಿಲಯನ್ಸ್ ಕಮ್ಯೂನಿಕೇಶನ್ಸ್ ಅವರ ಹೋಂ ಎಂಟರ್‌ಟೈನ್‌ಮೆಂಟ್ ಬಿಗ್ ಟಿವಿ ಡಿಟಿಎಚ್ ಸೇವೆಯ ಚಾನೆಲ್‌ಗಳ ಸಂಖ್ಯೆಯನ್ನು 200ರಿಂದ 400ಕ್ಕೆ ಏರಿಸಿದೆ.ನವೆಂಬರ್‌ನಿಂದಲೇ ಈ ಸೇವೆಯ ವೀಕ್ಷಕರಿಗೆ ಲಭ್ಯವಾಗಲಿದೆ ಎಂದು ರಿಲಯನ್ಸ್ ಎಡಿಎ ಗುಂಪಿನ ಮುಖ್ಯಸ್ಥ ಅನಿಲ್ ಅಂಬಾನಿ ಅವರು ವಾರ್ಷಿಕ ಸಭೆಯಲ್ಲಿ ಘೋಷಿಸಿದರು.ಪೂರ್ಣ ಪ್ರಮಾಣದ ಡಿಜಿಟಲ್ ಸೌಲಭ್ಯಗಳನ್ನೊಳಗೊಂಡ ಬಿಗ್ ಟಿವಿ ಡಿಟಿಎಚ್ ಸೇವೆಯು ಸೆಪ್ಟೆಂಬರ್‌ನಲ್ಲಿ ಆರಂಭಗೊಂಡಿದ್ದು, ಈಗಾಗಲೇ ತನ್ನ ಪ್ರತಿಸ್ಪರ್ಧಿಗಳಿಗಿಂತ ಭರ್ಜರಿ ಅಂತರದಲ್ಲಿ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.ಪ್ರತಿ ತಿಂಗಳು ಡಿಟಿಎಚ್ ಗ್ರಾಹಕರ ಸಂಖ್ಯೆಯು 4 ಲಕ್ಷದಷ್ಟು ಹೆಚ್ಚಿಸುವ ಗುರಿ ಹೊಂದಲಾಗಿದ್ದು, ಆದರೆ ಕಳೆದ ತಿಂಗಳು 7 ಲಕ್ಷ ನೂತನ ಗ್ರಾಹಕರನ್ನು ಡಿಟಿಎಚ್ ಸೇವೆ ಹೊಂದಿದೆ ಎಂದರು.ಕಂಪೆನಿಯು ಬಿಗ್ ಟಿವಿ ಡಿಟಿಎಚ್ ಗ್ರಾಹಕರಿಗೆ ಉತ್ತಮ ಸವಲತ್ತುಗಳನ್ನು ನೀಡಲು ಸಜ್ಜಾಗಿದ್ದು, ಅದಕ್ಕಾಗಿ ಅಂತಾರಾಷ್ಟ್ರೀಯ ಚಾನೆಲ್‌ಗಳನ್ನು ಭಾರತಕ್ಕೆ ಪರಿಚಯಿಸಲಿದೆ. ಅಂತಾರಾಷ್ಟ್ರೀಯದ ಹಲವು ಚಾನೆಲ್‌ಗಳು ಭಾರತೀಯ ಮಾರುಕಟ್ಟೆಗೆ ಬಿಗ್ ಟಿವಿ ಮೂಲಕ ಬರಲು ಅನುಮತಿಗಾಗಿ ಕಾಯುತ್ತಿದೆ ಎಂದು ತಿಳಿಸಿದರು.ಬಿಗ್ ಟಿವಿ ಆಗಸ್ಟ್ ತಿಂಗಳಾಂತ್ಯದಲ್ಲಿ 200 ಚಾನೆಲ್‌ಗಳೊಂದಿಗೆ ದೇಶದ 6000ನಗರಗಳಲ್ಲಿ ತನ್ನ ಕಾರ್ಯಾ ಆರಂಭಿಸಿತ್ತು. ಬಿಗ್ ಟಿವಿಯ ಉದ್ಘಾಟನೆಯ ಕೊಡುಗೆಯಾಗಿ 1900 ರೂಪಾಯಿ ದರದಲ್ಲಿ ಚಂದಾದಾರರಿಗೆ ಅವಕಾಶ ಕಲ್ಪಿಸಿತ್ತು. |
|