ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಉತ್ತರಖಂಡದಲ್ಲಿ ಶಾಶ್ವತ ನ್ಯಾನೋ ಘಟಕ: ಟಾಟಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉತ್ತರಖಂಡದಲ್ಲಿ ಶಾಶ್ವತ ನ್ಯಾನೋ ಘಟಕ: ಟಾಟಾ
ಉತ್ತರಖಂಡ್ ರಾಜ್ಯದ ಪಂಥನಗರದಲ್ಲಿ ನ್ಯಾನೋ ಕಾರು ತಯಾರಿಕೆಯನ್ನು ಟಾಟಾ ಮೋಟಾರ್ಸ್ ಸಂಸ್ಥೆ ಈಗಾಗಲೇ ಆರಂಭಿಸಿದ್ದು, ಇದೀಗ ಶಾಶ್ವತವಾದ ನ್ಯಾನೋ ಘಟಕ ಸ್ಥಾಪನೆಗೆ ಚಿಂತನೆ ನಡೆಸಿರುವುದಾಗಿ ಟಾಟಾ ಮೂಲಗಳು ತಿಳಿಸಿವೆ.

ಪಂಥನಗರದಲ್ಲಿ ಶಾಶ್ವತ ನ್ಯಾನೋ ಘಟಕವನ್ನು ಸ್ಥಾಪಿಸಲು ಸಿದ್ದವಾಗಿರುವುದಾಗಿ ಟಾಟಾ ಕಂಪೆನಿಯ ಅಧಿಕಾರಿಗಳು ತಮಗೆ ತಿಳಿಸಿದ್ದಾರೆ ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಐ.ಕೆ ಪಾಂಡೆ ತಿಳಿಸಿದ್ದಾರೆ.

ಟಾಟಾ ಮೋಟಾರ್ಸ್ ಕೇಂದ್ರ ಘಟಕವನ್ನು ಗುಜರಾತ್‌ನ ಸನಂದ್ ಬಳಿ ಸ್ಥಾಪಿಸಲು ನಿರ್ಧರಿಸಿದ್ದರೂ ಪಂಥನಗರದಲ್ಲಿ ಮಿನಿ ಟ್ರಕ್‌ಗಳನ್ನು ತಯಾರಿಸುವ ಘಟಕದಲ್ಲಿ ನ್ಯಾನೋ ಕಾರುಗಳನ್ನು ತಯಾರಿಸುತ್ತಿದೆ ಎಂದು ಟಾಟಾ ಅಧಿಕಾರಿಗಳು ಹೇಳಿದರು.

ಟಾಟಾ ಕಂಪೆನಿಯ ಅಧಿಕಾರಿಗಳು ನೂತನ ಘಟಕವನ್ನು ಸ್ಥಾಪಿಸಲು ಬಯಸುತ್ತಿದ್ದಾರೋ ಅಥವಾ ಮಿನಿ ಟ್ರಕ್ ಘಟಕವನ್ನು ಪರಿವರ್ತಿಸಿ ಹೊಸತನ್ನು ಮಾಡಲಿದ್ದಾರೆ ಎನ್ನುವ ಕುರಿತಂತೆ ಟಾಟಾ ಅಧಿಕಾರಿಗಳು ಸ್ಪಷ್ಟಪಡಿಸಿಲ್ಲ ಎಂದು ಪಾಂಡೆ ತಿಳಿಸಿದ್ದಾರೆ.

ಈ ಕುರಿತು ಟಾಟಾ ಅಧಿಕಾರಿಗಳೊಂದಿಗೆ ಸಂಪರ್ಕಿಸಿದಾಗ ಸನಂದ್‌ನಲ್ಲಿ ನ್ಯಾನೋ ಘಟಕವನ್ನು ಆರಂಭಿಸಿದರೂ ಉತ್ತರಖಂಡ್‌‌ನ ಪಂಥನಗರದಲ್ಲಿ ನ್ಯಾನೋ ಕಾರುಗಳನ್ನು ಉತ್ಪಾದಿಸಲಾಗುವುದು ಎಂದು ಹೇಳಿದ್ದಾರೆ.

ಸನಂದ್‌ನಲ್ಲಿರುವ ಘಟಕದಿಂದ ವಾರ್ಷಿಕವಾಗಿ 2.5 ಲಕ್ಷ ಕಾರುಗಳನ್ನು ಉತ್ಪಾದಿಸಬಹುದಾಗಿದ್ದು, ಐದು ಲಕ್ಷ ಕಾರು ಉತ್ಪಾದನೆವರೆಗೆ ವಿಸ್ತರಿಸಬಹುದಾಗಿದೆ. ಆ ನಿಟ್ಟಿನಲ್ಲಿ ಗುಜರಾತ್ ಸರ್ಕಾರ ಟಾಟಾ ಮೋಟಾರ್ಸ್‌ಗಾಗಿ 1000 ಎಕರೆ ಭೂಮಿಯನ್ನು ಮಂಜೂರಾತಿ ಮಾಡಿರುವುದಾಗಿ ಪಾಂಡೆ ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಿಗ್ ಟಿವಿ ಚಾನೆಲ್ 400ಕ್ಕೆ ಏರಿಕೆ
ಶೀಘ್ರವೇ ಭೂ ಬ್ಯಾಂಕ್ ಸ್ಥಾಪನೆ: ಯಡಿಯೂರಪ್ಪ
ಭತ್ತ ಕ್ವಿಂಟಾಲ್‌ಗೆ 50 ರೂ.ಬೋನಸ್
ವಿದೇಶಿ ಕರೆನ್ಸಿ ಠೇವಣಿ ದರ ಹೆಚ್ಚಳ:ಎಸ್‌ಬಿಐ
ತೈಲ ಬೆಲೆ 70 ಡಾಲರ್‌ಗೆ ಕುಸಿತ
ಆರ್ಥಿಕ ಕುಸಿತ: ಆರ್‌‌ಬಿಐನಿಂದ ಸೂಕ್ಷ್ಮ ಪರಿಶೀಲನೆ