ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಬಂಗಾರದ ಮಾರುಕಟ್ಟೆಗೂ ತಟ್ಟಿದ ಆರ್ಥಿಕ ಹೊಡೆತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಂಗಾರದ ಮಾರುಕಟ್ಟೆಗೂ ತಟ್ಟಿದ ಆರ್ಥಿಕ ಹೊಡೆತ
ಭಾರೀ ಪ್ರಮಾಣದಲ್ಲಿ ಆರ್ಥಿಕ ಏರಿಳಿತ ಕಂಡ ಪರಿಣಾಮ ಚಿನ್ನದ ಬೆಲೆಯಲ್ಲಿ 350 ರೂ.ಗಳ ದಿಢೀರ್ ಕುಸಿತ ಕಂಡು 10ಗ್ರಾಂ ಚಿನ್ನಕ್ಕೆ 12, 950ರೂ.ಗಳಿಗೆ ವಹಿವಾಟನ್ನು ಅಂತ್ಯಗೊಳಿಸಿತು.

ಅಪರಂಜಿ ಚಿನ್ನದ ಆಭರಣಗಳಿಗೆ 350 ರೂಪಾಯಿಗಳ ಕುಸಿತ ಕಂಡು 10 ಗ್ರಾಂಗಳಿಗೆ 12,800ರೂಪಾಯಿ ತನಕ ಕಡಿಮೆಯಾಯಿತು. ಇದೇ ರೀತಿ ಸವರಿನ್‌ನಲ್ಲಿ 8ಗ್ರಾಂಗೆ 50ರೂ.ಗಳು ಕಡಿಮೆಯಾಗಿ 10,650ರೂಪಾಯಿಯಲ್ಲಿ ನೆಲೆನಿಂತಿತು.

ಚಿನ್ನ ಬೆಳ್ಳಿಯನ್ನೊಳಗೊಂಡ ಮಾರುಕಟ್ಟೆಗೆ ಜಾಗತಿಕ ಮಟ್ಟದ ಆರ್ಥಿಕ ಬಿಕ್ಕಟ್ಟಿನ ಬಿಸಿ ತಟ್ಟಿತ್ತು. ಇದರಿಂದಾಗಿ ಮಾರುಕಟ್ಟೆಯಲ್ಲಿನ ದೊಡ್ಡ ಪಾಲುದಾರರಿಗೆ ಭಾರಿ ನಷ್ಟವನ್ನುಂಟುಮಾಡಿದೆ.

ಹೂಡಿಕೆದಾರರು ಮತ್ತು ಚಿಲ್ಲರೆ ವ್ಯಾಪಾರಿಗಳ ಜಾಗತಿಕ ಮಟ್ಟದಲ್ಲಿ ಬೆಲೆ ಕುಸಿಯಲು ಇನ್ನೂ ಸಾಧ್ಯತೆಯಿರುವುದರಿಂದ ಹಬ್ಬದ ಕಾಲಘಟ್ಟವಾದರೂ ಆಭರಣದ ಖರೀದಿಯನ್ನು ಮುಂದೂಡುತ್ತಿದ್ದಾರೆ.

ಬೆಳ್ಳಿಯ ದರದಲ್ಲಿ 50ರೂ.ಗಳ ಇಳಿಕೆಯುಂಟಾಗಿದ್ದು ಸೆಪ್ಟಂಬರ್ 20ರ ನಂತರ ಈಗ ಮಾದಲ ಬಾರಿಗೆ ಕಿಲೊಗೆ 17,550 ರೂಪಾಯಿಗಳಿಗೆ ಇಳಿಕೆಯಾಯಿತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಉತ್ತರಖಂಡದಲ್ಲಿ ಶಾಶ್ವತ ನ್ಯಾನೋ ಘಟಕ: ಟಾಟಾ
ಬಿಗ್ ಟಿವಿ ಚಾನೆಲ್ 400ಕ್ಕೆ ಏರಿಕೆ
ಶೀಘ್ರವೇ ಭೂ ಬ್ಯಾಂಕ್ ಸ್ಥಾಪನೆ: ಯಡಿಯೂರಪ್ಪ
ಭತ್ತ ಕ್ವಿಂಟಾಲ್‌ಗೆ 50 ರೂ.ಬೋನಸ್
ವಿದೇಶಿ ಕರೆನ್ಸಿ ಠೇವಣಿ ದರ ಹೆಚ್ಚಳ:ಎಸ್‌ಬಿಐ
ತೈಲ ಬೆಲೆ 70 ಡಾಲರ್‌ಗೆ ಕುಸಿತ