ದೇಶಿಯ ಹಾಗೂ ವಿದೇಶಿ ಕಂಪೆನಿಗಳ ಆದಾಯ ಉಳಿಕೆಯ ಚಮತ್ಕಾರದ ಬಿಸಿ ಇದೀಗ ಇಂಡಿಯನ್ ಇನ್ಸ್‌ಟ್ಯೂಟ್ ವಲಯಕ್ಕೂ ತಟ್ಟಿದ್ದು, ಅಮೆರಿಕದ ಮೊಂಟೊಲೋವಾ, ಮಾಗ್ಮಾ ಡಿಸೈನ್ ಆಟೋಮೇಶನ್ ಮತ್ತು ಪಾರಾಡಿಗಮ್ ಐಟಿ ಕಂಪೆನಿಗಳಾದ ಖರಗ್‌ಪುರದ ಐಐಟಿಯ 15ವಿದ್ಯಾರ್ಥಿಗಳಿಗೆ ಕೆಲಸಕ್ಕೆ ಆಹ್ವಾನ ನೀಡಿ, ಕರೆಯನ್ನು ರದ್ದುಮಾಡಿದೆ.
ಅಮೆರಿಕದ ಈ ಕಂಪೆನಿಗಳು ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ನಿಟ್ಟಿನಲ್ಲಿ ವಾರ್ಷಿಕವಾಗಿ ಏಳು ಲಕ್ಷ ರೂಪಾಯಿ ವೇತನದ ಆಫರ್ ಲೆಟರ್ ಅನ್ನು ನೀಡಿತ್ತು. ಆದರೆ ಕರ್ತವ್ಯಕ್ಕೆ ಹಾಜರಾಗುವ ದಿನಾಂಕವನ್ನು ವಿಳಂಬ ಮಾಡಿತ್ತು.
ಆದರೆ ದಿನಾಂಕ ವಿಳಂಬವಾಗಿರುವ ಬಗ್ಗೆ ನಾವು ತಲೆಕೆಡಿಸಿಕೊಂಡಿಲ್ಲ. ನಮ್ಮ ಬದುಕಿನ ದೂರಗಾಮಿ ಕನಸು ನನಸಾಗುವ ಮುನ್ನವೇ ನುಚ್ಚುನೂರಾಗುವ ರೀತಿಯಲ್ಲಿ ಕೆಲಸವೇ ಇಲ್ಲ ಎಂಬಂತಹ ಪತ್ರ ಬಂದಾಗ ನಾವು ಆತಂಕಕ್ಕೆ ಒಳಗಾಗಿರುವುದಾಗಿ ವಿದ್ಯಾರ್ಥಿಯೊಬ್ಬ ತನ್ನ ಅಳಲನ್ನು ತೋಡಿಕೊಂಡಿದ್ದಾನೆ.
ಆದರೆ ಬಿ ಟೆಕ್ ವಿದ್ಯಾರ್ಥಿಗಳು ಈ ಸಂಸ್ಥೆ ನೇಮಕ ಮಾಡಿರುವ ಕುರಿತು ನಿರಾಕರಣೆ ವ್ಯಕ್ತಪಡಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾದ ವರದಿ ತಿಳಿಸಿದೆ.
ಮೊಂಟೊಲೋವಾ ಮತ್ತು ಪಾರಾಡಿಗಮ್ ಸಂಸ್ಥೆಗಳು ಆಯ್ಕೆ ಮಾಡಿದ ಒಂಬತ್ತು ವಿದ್ಯಾರ್ಥಿಗಳಲ್ಲಿ ಯಾರೊಬ್ಬರಿಗೂ ನೇಮಕಾತಿ ಪತ್ರವನ್ನು ಕಳುಹಿಸಿಲ್ಲ. ಆದರೆ ಮಾಗ್ಮಾ ಸಂಸ್ಥೆ ಆಯ್ಕೆ ಮಾಡಿದ ಒಂಬತ್ತು ವಿದ್ಯಾರ್ಥಿಗಳಲ್ಲಿ ಮೂವರಿಗೆ ಕೆಲಸ ನೀಡುವುದಾಗಿ ಭರವಸೆ ನೀಡಿತ್ತು ಎಂದು ವರದಿ ಹೇಳಿದೆ. |