ಲಂಡನ್: ಪ್ರಸ್ತುತ ಹಣಕಾಸು ಬಿಕ್ಕಟ್ಟನ್ನು ಭಾರತವು ಯಶಸ್ವಿಯಾಗಿ ನಿಭಾಯಿಸಬಲ್ಲುದು ಎಂಬ ವಿಶ್ವಾಸದಲ್ಲಿರುವ ಹಿಂದೂಜಾ ಸಮೂಹವು, ಭಾರತದಲ್ಲಿ ತನ್ನ ಹೂಡಿಕಾ ಅವಕಾಶವನ್ನು ವಿಸ್ತರಿಸುವುದಾಗಿ ಹೇಳಿದೆ. ವಿದೇಶಿ ಪಾಲುದಾರ ಸಹಯೋಗದೊಂದಿಗೆ ಅಣುಶಕ್ತಿ ಸ್ಥಾವರ ಸೇರಿದಂತೆ ಇತರ ವಿಭಾಗಗಳಲ್ಲಿಯೂ ಹೂಡಿಕೆ ನಡೆಸುವುದಾಗಿ ಅದು ಹೇಳಿದೆ.
ಭಾರತ ಅಥವಾ ಇನ್ಯಾವುದೇ ರಾಷ್ಟ್ರಗಳ ಆರ್ಥಿಕ ಶಕ್ತಿಯನ್ನು ಶೇರುಮಾರುಕಟ್ಟೆ ಕಾರ್ಯಕ್ಷಮತೆಯ ಆಧಾರದಲ್ಲಿ ಅಳೆಯಬಾರದು ಎಂದು ಹಿಂದುಜಾ ಸಮೂಹದ ಅಧ್ಯಕ್ಷ ಎಸ್.ಪಿ.ಹಿಂದುಜಾ ಅಭಿಪ್ರಾಯಿಸಿದ್ದಾರೆ.
ಭಾರತೀಯ ಶೇರು ಮಾರುಕಟ್ಟೆಯ ಆಗುಹೋಗುಗಳು ರಾಷ್ಟ್ರದ ಆರ್ಥಿಕ ತಳಹದಿಯ ಮೇಲೆ ಪರಿಣಾಮ ಬೀರದು. ಭಾರತದ ಸಾಮರ್ಥ್ಯ, ಹೂಡಿಕಾ ಅವಕಾಶಗಳು, ಹಾಗೂ ಅಲ್ಲಿನ ಜನತೆಯ ಜಾಣ್ಮೆಯು ಕಳೆಗುಂದಿಲ್ಲ ಎಂದು ಅವರು ಸಂದರ್ಶನ ಒಂದರಲ್ಲಿ ಹೇಳಿದ್ದಾರೆ. |