ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಬ್ಯಾಂಕ್ ಸೌಲಭ್ಯಗಳ ಸೂಕ್ತ ಬಳಕೆಗೆ ಕರೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬ್ಯಾಂಕ್ ಸೌಲಭ್ಯಗಳ ಸೂಕ್ತ ಬಳಕೆಗೆ ಕರೆ
"ಸಮಾಜದಲ್ಲಿ ಪ್ರತಿಯೊಬ್ಬರು ಆರ್ಥಿಕವಾಗಿ ಸಬಲರಾಗಬೇಕೆಂಬ ಗುರಿಯೊಂದಿಗೆ ಬ್ಯಾಂಕ್ ವಿವಿಧ ಸಾಲ ಸೌಲಭ್ಯಗಳನ್ನು ನೀಡುತ್ತಿದೆ. ಜನತೆ ಇದನ್ನು ಸಮರ್ಪಕವಾಗಿ ಬಳಸಿ ಆರ್ಥಿಕವಾಗಿ ಸದೃಢರಾಗಬೇಕು. ಇಂದು ಪ್ರತಿಯೊಬ್ಬರ ಆರ್ಥಿಕ ಮಟ್ಟ ದೇಶದ ಪ್ರಗತಿಯನ್ನು ಬಿಂಬಿಸುತ್ತದೆ" ಎಂದು ಇಂಡಿಯನ್ ಓವರ್ಸೀಸ್ ಬ್ಯಾಂಕಿನ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಎಸ್.ಎ.ಭಟ್ ಹೇಳಿದರು.

ನಗರದಲ್ಲಿ ಸ್ವ ಸಹಾಯ ಗುಂಪುಗಳಿಗೆ ಸಾಲ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಸ್ವ ಸಹಾಯ ಗುಂಪುಗಳ ಕಾರ್ಯವನ್ನುವ ಶ್ಲಾಘಿಸಿದ ಅವರು, ಇವುಗಳ ಮನುಷ್ಯನ ಆರ್ಥಿಕ ಮಟ್ಟವನ್ನು ಸುಧಾರಿಸುತ್ತವೆ ಎಂದರು.

ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ಐ.ಆರ್.ವೈದ್ಯನಾಥನ್ ಮಾತನಾಡಿ, ಬೆಂಗಳೂರು ವಲಯದಲ್ಲಿ ಸಾವಿರಕ್ಕೂ ಹೆಚ್ಚು ಸ್ವ ಸಹಾಯ ಗುಂಪುಗಳಿಗೆ ನೆರವು ನೀಡಲಾಗುತ್ತಿದ್ದು, ಇವುಗಳಿಂದ ಶೇ 100ರಷ್ಟು ಸಾಲ ಮರುಪಾವತಿಯಾಗುತ್ತಿರುವುದು ಹೆಮ್ಮೆಯ ವಿಷಯ. ಸ್ವ ಸಹಾಯ ಗುಂಪುಗಳು ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿವೆ ಎಂಬುದನ್ನು ಇದು ತೋರಿಸುತ್ತದೆ ಎಂದರು.
ಸ್ವ ಸಹಾಯ ಗುಂಪುಗಳ ಕಾರ್ಯಚಟುವಟಿಕೆಗಳನ್ನು ಉತ್ತೇಜಿಸಲು ಬ್ಯಾಂಕಿನ 12 ಶಾಖೆಗಳನ್ನು ಗುರತಿಸಲು ಯೋಚಿಸಲಾಗಿದೆ ಎಂದು ಅವರು ತಿಳಿಸಿದರು.

ಬಡವರಿಗೆ ಸಹಾಯವಾಗುವ ಉದ್ದೇಶದಿಂದ ಬ್ಯಾಂಕ್ ಹತ್ತು ಹಲವು ವಿನೂತನ ಯೋಜನೆಗಳನ್ನು ರೂಪಿಸಿದೆ. ಕೇವಲ ಸಾಲ ಪಡೆಯುವುದರಿಂದ ಆರ್ಥಿಕ ಅಭಿವೃದ್ಧಿ ಸಾಧ್ಯವಿಲ್ಲ. ಬದಲಾಗಿ ಸಮರ್ಪಕವಾಗಿ ಬಳಸಿಕೊಂಡಾಗ ಮಾತ್ರ ಆರ್ಥಿಕ ಅಭಿವೃದ್ಧಿ ಸಾಧ್ಯ ಎಂದು ಇನಿಶಿಯೇಟಿವ್ ಫಾರ್ ಡೆವಲಪ್ಮೆಂಟ್ ಫೌಂಡೇಶನ್‌ನ ಆಡಳಿತ ಟ್ರಸ್ಟಿ ವಿ.ಎಸ್.ಸಾಲಿಮಠ್ ಹೇಳಿದರು.

ಕಾರ್ಯಕ್ರಮದಲ್ಲಿ ಬ್ಯಾಂಕಿನ ಮಾಜಿ ಪ್ರಧಾನ ವ್ಯವಸ್ಥಾಪಕ ಐ.ಕೆ.ವಿಷ್ಣುಮೂರ್ತಿ ಎರ್ಕಾ ಉಪಸ್ಥಿತರಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಣುಶಕ್ತಿ ಸ್ಥಾವರಗಳಲ್ಲಿ ಹಿಂದುಜಾ ಹೂಡಿಕೆ
ಕಿಂಗ್‌ಫಿಶರ್ ಟ್ರೈನಿ ಫೈಲಟ್‌ಗಳ ವೇತನ ಕಡಿತ
ಆದಾಯ ಉಳಿಕೆ ಗಿಮಿಕ್-ಐಐಟಿಗೂ ತಟ್ಟಿದ ಬಿಸಿ
ಬಂಗಾರದ ಮಾರುಕಟ್ಟೆಗೂ ತಟ್ಟಿದ ಆರ್ಥಿಕ ಹೊಡೆತ
ಉತ್ತರಖಂಡದಲ್ಲಿ ಶಾಶ್ವತ ನ್ಯಾನೋ ಘಟಕ: ಟಾಟಾ
ಬಿಗ್ ಟಿವಿ ಚಾನೆಲ್ 400ಕ್ಕೆ ಏರಿಕೆ