ಟಾಟಾ ಮಾಲೀಕತ್ವದ ಯುರೋಪ್‌ನ ಬೃಹತ್ ಪ್ರಮೂಣದ ಉಕ್ಕು ಉತ್ಪಾದಿಸುವ ಕೋರಸ್ ಕಂಪೆನಿಯು ಮುಂದಿನ ಮೂರು ತಿಂಗಳಿನಲ್ಲಿ ಒಂದು ಮಿಲಿಯನ್ ಟನ್ ಸ್ಟೀಲ್ ಉತ್ಪಾದನೆಯನ್ನು ಕಡಿತಗೊಳಿಸುವುದಾಗಿ ಘೋಷಿಸಿದೆ.
ಜಾಗತಿಕ ಮಟ್ಟದಲ್ಲಿ ಉಂಟಾದ ಆರ್ಥಿಕ ಬಿಕ್ಕಟ್ಟು ಕಾರಣದಿಂದ ಬೇಡಿಕೆಗೆ ಅನುಸಾರವಾಗಿ ಉತ್ಪಾದನಾ ಪ್ರಮಾಣವನ್ನು ಹೆಚ್ಚಿಸಲು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಟಾಟಾ ಹೇಳಿಕೆಯಲ್ಲಿ ತಿಳಿಸಿದೆ.
ಯುರೋಪ್ ದೇಶದ ಹೊರಗಿನ ಘಟಕಗಳಿಗೆ ಕೋರಸ್‌ನ ಉಕ್ಕಿನ ಪ್ರಮಾಣದಲ್ಲಿ ಯಾವುದೇ ಬದಲಾವಣೆ ಉಂಟಾಗದೆಂದು ಕಂಪೆನಿಯು ತಿಳಿಸಿದೆ. ಕೋರಸ್ ಯುರೋಪ್‌ನ ಎರಡನೇ ಅತೀ ದೊಡ್ಡ ಸ್ಟೀಲ್ ಉತ್ಪಾದನಾ ಕಂಪೆನಿಯಾಗಿದ್ದು, ಈಗ ಕಂಪೆನಿಯು ವರ್ಷದಲ್ಲಿ 20ಮಿಲಿಯನ್ ಟನ್‌ಗಳಿಗಿಂತ ಹೆಚ್ಚು ಉಕ್ಕನ್ನು ಉತ್ಪಾದಿಸುತ್ತಿದೆ.
ಆರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಮುಂದಿನ ಕೆಲವು ತಿಂಗಳಿನಲ್ಲಿ ಸರಿಯಾದ ಕಾರ್ಯತಂತ್ರವನ್ನು ರೂಪಿಸುತ್ತಿದ್ದೇವೆ ಎಂದು ಕೋರಸ್ ಕಾರ್ಯನಿರ್ವಾಹಕ ಮುಖ್ಯಸ್ಥ ಪಿಲಿಪ್ಪೆ ವಾರಿನ್ ಭರವಸೆ ನೀಡಿದರು. |