ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಆರ್ಥಿಕ ಬಿಕ್ಕಟ್ಟು-ರೇಪೋ ದರ ಕಡಿತ:ಆರ್‌ಬಿಐ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆರ್ಥಿಕ ಬಿಕ್ಕಟ್ಟು-ರೇಪೋ ದರ ಕಡಿತ:ಆರ್‌ಬಿಐ
ಆರ್ಥಿಕ ಸ್ಥಿತಿಯ ಡೋಲಾಯಮಾನ ಸ್ಥಿತಿಯ ಮುಂದುವರಿಕೆಯಿಂದಾಗಿ ನಿರೀಕ್ಷಿತ ಬೆಳವಣಿಗೆಯಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್ ಸೋಮವಾರ ರೇಪೋ ದರವನ್ನು 100 ಅಂಶಗಳಷ್ಟು ಕಡಿತಗೊಳಿಸಿದ್ದು ಬಡ್ಡಿದರವನ್ನು ಶೇ.8ಕ್ಕೆ ಇಳಿಸಿದೆ. 2004ರ ನಂತರ ಭಾರತೀಯ ರಿಸರ್ವ್ ಬ್ಯಾಂಕ್ ಮೊದಲ ಬಾರಿಗೆ ರೇಪೋ ದರ ಕಡಿತಗೊಳಿಸಿದೆ.

ಕೂಡಲೇ ಈ ರೇಪೋ ಕಡಿತ ಜಾರಿಗೆ ಬರಲಿರುವುದಾಗಿ ಆರ್‌ಬಿಐ ತಿಳಿಸಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ನಗದು ಹರಿವನ್ನು ಹೆಚ್ಚಿಸಲು ನಿಟ್ಟಿನಲ್ಲಿ ಮುಂಜಾಗ್ರತೆಯ ಅಂಗವಾಗಿ ಈ ಕ್ರಮ ಕೈಗೊಂಡಿರುವುದಾಗಿ ತಿಳಿಸಿದೆ.

ರೇಪೋ ದರ ಇಳಿಕೆಯಿಂದ ಬ್ಯಾಂಕ್‌ಗಳು ಅಗ್ಗದ ದರದಲ್ಲಿ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.

ದೇಶದಲ್ಲಿ ಉಂಟಾದ ಆರ್ಥಿಕ ಬಿಕ್ಕಟ್ಟಿನ ಸ್ಥಿತಿಯನ್ನು ಹತೋಟಿಗೆ ತರುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ಆರ್‌ಬಿಐ ತಿಳಿಸಿದೆ. ಕಳೆದ ವಾರ ಶೇರುಮಾರುಕಟ್ಟೆಯು 10000 ಗಡಿಗಿಂತ ಕೆಳಮಟ್ಟಕ್ಕೆ ಇಳಿದಿರುವುದರ ಮುಂದಾಗಿಯೂ ಆರ್‌ಬಿಐ ಈ ಕ್ರಮಕ್ಕೆ ಮುಂದಾಗಿದೆ.

ಈ ಕುರಿತು ವಿತ್ತ ಸಚಿವ ಪಿ.ಚಿದಂಬರಂ ಅವರು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ಆರ್‌ಬಿಐ ಕ್ರಮದ ಕುರಿತು ವಿವರಣೆ ನೀಡಿ, ಹೂಡಿಕೆದಾರರು ಮತ್ತು ಸಾಲಗಾರರ ವಿಶ್ವಾಸವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ತೈಲ ಬೆಲೆ 1.12 ಡಾಲರ್ ಏರಿಕೆ
ಕೋರಸ್ ಸ್ಟೀಲ್ ಉತ್ಪಾದನೆಯಲ್ಲಿ ಕಡಿತ: ಟಾಟಾ
ಆರ್ಥಿಕ ಹೊಡೆತದಿಂದ ಪಾಠ ಕಲಿಯಬೇಕು:ಮೊಂಟೆಕ್
ಬ್ಯಾಂಕ್ ಸೌಲಭ್ಯಗಳ ಸೂಕ್ತ ಬಳಕೆಗೆ ಕರೆ
ಅಣುಶಕ್ತಿ ಸ್ಥಾವರಗಳಲ್ಲಿ ಹಿಂದುಜಾ ಹೂಡಿಕೆ
ಕಿಂಗ್‌ಫಿಶರ್ ಟ್ರೈನಿ ಫೈಲಟ್‌ಗಳ ವೇತನ ಕಡಿತ