ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಮತ್ತಷ್ಟು ನೌಕರರ ಕೊಕ್ ಸಾಧ್ಯತೆ: ಮಲ್ಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮತ್ತಷ್ಟು ನೌಕರರ ಕೊಕ್ ಸಾಧ್ಯತೆ: ಮಲ್ಯ
ಮಾರುಕಟ್ಟೆಯಲ್ಲಿನ ಆರ್ಥಿಕ ಕುಸಿತದ ಡೋಲಾಮಾನದ ಸ್ಥಿತಿ ಮುಂದುವರಿದಿರುವ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನ ಸಂಸ್ಥೆಯಲ್ಲಿ ಹೆಚ್ಚಿನ ನೌಕರರನ್ನು ತೆಗೆದು ಹಾಕಬೇಕಾಗುವ ಸಾಧ್ಯತೆ ಇರುವುದಾಗಿ ಕಿಂಗ್ ಫಿಶರ್ ಏರ್‌ಲೈನ್ಸ್‌ ಮಾಲೀಕ ವಿಜಯ್ ಮಲ್ಯ ಅವರು ಸೋಮವಾರ ಪರೋಕ್ಷವಾಗಿ ಸೂಚನೆ ನೀಡಿದ್ದಾರೆ.

ಶೇರು ಮಾರುಕಟ್ಟೆಯ ಸೂಚ್ಯಂಕ ಭಾರೀ ಪ್ರಮಾಣದಲ್ಲಿ ಇಳಿಕೆ ಕಾಣುವುದರೊಂದಿಗೆ ಹಲವಾರು ವಿಮಾನಗಳು ಸಂಚರಿಸದೇ ಇರುವುದರಿಂದ, ನಾವು ನಷ್ಟವನ್ನು ತೂಗಿಸಲು ಹುದ್ದೆಯನ್ನು ಕಡಿತ ಮಾಡಬೇಕಾದ ಅನಿವಾರ್ಯ ಸ್ಥಿತಿ ಬಂದೊದಗಿದೆ ಎಂದು ಹೇಳಿದರು.

ಅವರು ಸಂಸತ್‌ ಹೊರಭಾಗದಲ್ಲಿ ಸೋಮವಾರ ಸುದ್ದಿಗಾರರು, ಕಿಂಗ್ ಫಿಶರ್ ಸಂಸ್ಥೆಯಲ್ಲಿ ಮತ್ತೆ ನೌಕರರನ್ನು ತೆಗೆಯುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತ ಮಾತನಾಡಿದರು.

ಆದರೆ ಏವಿಯೇಶನ್ ಸೆಕ್ಟರ್‌ನಲ್ಲಿ ಉಂಟಾದ ಬಿಕ್ಕಟ್ಟಿನ ಕುರಿತಾಗಿ ತಾನು ಯಾವುದೇ ಸಚಿವರನ್ನಾಗಲಿ, ಸರ್ಕಾರದ ಅಧಿಕಾರಿಗಳನ್ನು ಭೇಟಿಯಾಗಿಲ್ಲ ಎಂದು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

ಏತನ್ಮಧ್ಯೆ ಜೆಟ್ ಏರ್‌ವೇಸ್‌ನ ಮುಖ್ಯಸ್ಥ ನರೇಶ್ ಗೋಯಲ್ ಅವರು ಇಂದು ಹಣಕಾಸು ಸಚಿವ ಪಿ.ಚಿದಂಬರಂ ಅವರೊಂದಿಗೆ ಸಭೆಯನ್ನು ನಡೆಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆರ್ಥಿಕ ಬಿಕ್ಕಟ್ಟು-ರೇಪೋ ದರ ಕಡಿತ:ಆರ್‌ಬಿಐ
ತೈಲ ಬೆಲೆ 1.12 ಡಾಲರ್ ಏರಿಕೆ
ಕೋರಸ್ ಸ್ಟೀಲ್ ಉತ್ಪಾದನೆಯಲ್ಲಿ ಕಡಿತ: ಟಾಟಾ
ಆರ್ಥಿಕ ಹೊಡೆತದಿಂದ ಪಾಠ ಕಲಿಯಬೇಕು:ಮೊಂಟೆಕ್
ಬ್ಯಾಂಕ್ ಸೌಲಭ್ಯಗಳ ಸೂಕ್ತ ಬಳಕೆಗೆ ಕರೆ
ಅಣುಶಕ್ತಿ ಸ್ಥಾವರಗಳಲ್ಲಿ ಹಿಂದುಜಾ ಹೂಡಿಕೆ