ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > 2 ತಿಂಗಳಲ್ಲಿ ಹಣದುಬ್ಬರ ಇಳಿಕೆ: ಮಾಂಟೆಕ್ ಸಿಂಗ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
2 ತಿಂಗಳಲ್ಲಿ ಹಣದುಬ್ಬರ ಇಳಿಕೆ: ಮಾಂಟೆಕ್ ಸಿಂಗ್
PTI
ನಗದು ಪೂರೈಕೆಯಲ್ಲಿನ ಸಡಿಲತೆಯು ಹಣದುಬ್ಬರ ನಿಯಂತ್ರಣ ಕ್ರಮದ ಮೇಲೆ ಪರಿಣಾಮ ಬೀರುವುದಿಲ್ಲ ಎಂಬುದಾಗಿ ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಸೂಚಿಸಿದ್ದು, ನಗದು ಹರಿವು ಹೆಚ್ಚಳವು ಆರ್ಥಿಕ ಚಟುವಟಿಕೆಗಳಿಗೆ ಬೆಂಬಲ ನೀಡಲಿದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.

ನಗದು ಹರಿವು ಹೆಚ್ಚಳ, ರೇಪೋ ದರ ಇಳಿಕೆಯು ಹಣದುಬ್ಬರ ನಿಯಂತ್ರಣದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ಇದು ಆರ್ಥಿಕ ಚಟುವಟಿಕೆ ವೃದ್ಧಿ ಮತ್ತು ಬಂಡವಾಳ ರಕ್ಷಣೆಗೆ ಸಹಾಯಕವಾಗಲಿದೆ ಎಂದು ಅಹ್ಲುವಾಲಿಯಾ ನವದೆಹಲಿಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಜಾಗತಿಕ ಉತ್ಪನ್ನಗಳ ಬೆಲೆಯಲ್ಲಿ ಇಳಿಕೆ ಉಂಟಾಗಿದ್ದು, ಇದರಿಂದಾಗಿ ಮುಂದಿನ ಹಣದುಬ್ಬರ ಪ್ರಮಾಣದಲ್ಲಿ ಇಳಿಕೆ ಉಂಟಾಗುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಮುಂದಿನ ಎರಡು ತಿಂಗಳಲ್ಲಿ ಸಗಟು ಬೆಲೆ ಅಂಶದಲ್ಲಿ ಇಳಿಕೆ ಉಂಟಾಗಲಿದ್ದು, ಹಣದುಬ್ಬರ ದರದಲ್ಲಿ ಗಮನಾರ್ಹ ಇಳಿಕೆ ಉಂಟಾಗಲಿದೆ ಎಂದು ಅಹ್ಲುವಾಲಿಯಾ ಸೂಚಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮತ್ತಷ್ಟು ನೌಕರರ ಕೊಕ್ ಸಾಧ್ಯತೆ: ಮಲ್ಯ
ಆರ್ಥಿಕ ಬಿಕ್ಕಟ್ಟು-ರೇಪೋ ದರ ಕಡಿತ:ಆರ್‌ಬಿಐ
ತೈಲ ಬೆಲೆ 1.12 ಡಾಲರ್ ಏರಿಕೆ
ಕೋರಸ್ ಸ್ಟೀಲ್ ಉತ್ಪಾದನೆಯಲ್ಲಿ ಕಡಿತ: ಟಾಟಾ
ಆರ್ಥಿಕ ಹೊಡೆತದಿಂದ ಪಾಠ ಕಲಿಯಬೇಕು:ಮೊಂಟೆಕ್
ಬ್ಯಾಂಕ್ ಸೌಲಭ್ಯಗಳ ಸೂಕ್ತ ಬಳಕೆಗೆ ಕರೆ