ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಹಣಕಾಸು ಬಿಕ್ಕಟ್ಟಿನಿಂದ 20 ಮಿ.ಉದ್ಯೋಗ ನಷ್ಟ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಣಕಾಸು ಬಿಕ್ಕಟ್ಟಿನಿಂದ 20 ಮಿ.ಉದ್ಯೋಗ ನಷ್ಟ
ಜಾಗತಿಕ ಆರ್ಥಿಕತೆಯಲ್ಲಿನ ಹಣಕಾಸು ಬಿಕ್ಕಟ್ಟಿನಿಂದಾಗಿ ಮುಂದಿನ ವರ್ಷಾಂತ್ಯದೊಳಗೆ ಸುಮಾರು 20 ದಶಲಕ್ಷ ಉದ್ಯೋಗ ನಷ್ಟ ಉಂಟಾಗಲಿದೆ ಎಂದು ವಿಶ್ವಸಂಸ್ಥೆ ಏಜೆನ್ಸಿಯು ತಿಳಿಸಿದೆ.

ನಿರ್ಮಾಣ, ಸ್ಥಿರಾಸ್ತಿ, ಹಣಕಾಸು ಸೇವೆ ಮತ್ತು ಆಟೋ ಕ್ಷೇತ್ರಗಳ ಮೇಲೆ ಹಣಕಾಸು ಬಿಕ್ಕಟ್ಟು ತೀವ್ರ ರೀತಿಯ ಪರಿಣಾಮವನ್ನು ಬೀರಲಿದೆ ಎಂಬುದಾಗಿ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ(ಐಎಲ್ಒ)ತಿಳಿಸಿದೆ.

2009ರ ಅಂತ್ಯದೊಳಗೆ ವಿಶ್ವ ನಿರುದ್ಯೋಗ ಪ್ರಮಾಣವು ಕಳೆದ ವರ್ಷದ 190 ದಶಲಕ್ಷದಿಂದ 210 ದಶಲಕ್ಷಕ್ಕೆ ಏರಿಕೆಗೊಳ್ಳಲಿದೆ ಎಂದು ಐಎಲ್ಒ ಪ್ರಧಾನ ನಿರ್ದೇಶಕ ಜಾನ್ ಸೋಮಾವಿಯಾ ಎಚ್ಚರಿಕೆ ನೀಡಿದ್ದಾರೆ.

ಇದು ಕೇವಲ ವಾಲ್‌ಸ್ಟ್ರೀಟ್‌ಗೆ ಸಂಬಂಧಿಸಿದ ಸಮಸ್ಯೆಯಲ್ಲ. ಎಲ್ಲಾ ಕ್ಷೇತ್ರಗಳಿಗೂ ಸಂಬಂಧಿಸಿದ್ದಾಗಿದೆ. ಇದಕ್ಕಾಗಿ ಆರ್ಥಿಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
2 ತಿಂಗಳಲ್ಲಿ ಹಣದುಬ್ಬರ ಇಳಿಕೆ: ಮಾಂಟೆಕ್ ಸಿಂಗ್
ಮತ್ತಷ್ಟು ನೌಕರರ ಕೊಕ್ ಸಾಧ್ಯತೆ: ಮಲ್ಯ
ಆರ್ಥಿಕ ಬಿಕ್ಕಟ್ಟು-ರೇಪೋ ದರ ಕಡಿತ:ಆರ್‌ಬಿಐ
ತೈಲ ಬೆಲೆ 1.12 ಡಾಲರ್ ಏರಿಕೆ
ಕೋರಸ್ ಸ್ಟೀಲ್ ಉತ್ಪಾದನೆಯಲ್ಲಿ ಕಡಿತ: ಟಾಟಾ
ಆರ್ಥಿಕ ಹೊಡೆತದಿಂದ ಪಾಠ ಕಲಿಯಬೇಕು:ಮೊಂಟೆಕ್