ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಏರ್‌ ಇಂಡಿಯಾದ ಉದ್ಯೋಗ ಕಡಿತವಿಲ್ಲ:ಪ್ರಫುಲ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಏರ್‌ ಇಂಡಿಯಾದ ಉದ್ಯೋಗ ಕಡಿತವಿಲ್ಲ:ಪ್ರಫುಲ್
PTI
ಸರಕಾರಿ ವಲಯದ ವಿಮಾನ ಸಂಸ್ಥೆಯಾಗಿರುವ ಏರ್ ಇಂಡಿಯಾದಿಂದ ನೌಕರರ ವಜಾ ಸಾಧ್ಯತೆಯನ್ನು ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ತಳ್ಳಿ ಹಾಕಿದ್ದಾರೆ.

1808 ಕೋಟಿಯ ಚೆನ್ನೈ ವಿಮಾನ ನಿಲ್ದಾಣ ಅಭಿವೃದ್ಧಿ ಮತ್ತು ಆಧುನೀಕರಣ ಯೋಜನೆಯನ್ನು ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸಕ್ತ ವಿಮಾನಯಾನ ಕ್ಷೇತ್ರವು ಎದುರಿಸುವ ಬಿಕ್ಕಟ್ಟುಗಳಿಗೆ ಇಂಧನ ಬೆಲೆ ಹೆಚ್ಚಳವೇ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿಮಾನ ಇಂಧನ ಬೆಲೆಯು ನಿಯಂತ್ರಿಸಲಾಗದಷ್ಟು ಹೆಚ್ಚಳಗೊಂಡಿರುವುದಾಗಿ ತಿಳಿಸಿದ ಅವರು, ಪ್ರಸಕ್ತ ಬಿಕ್ಕಟ್ಟನ್ನು ವಿವೇಚನೆಯಿಂದ ನಿರ್ವಹಿಸುವಂತೆ ಕರೆ ನೀಡಿದ್ದಾರೆ.

ಏರ್ ಇಂಡಿಯಾದಿಂದ ಯಾವುದೇ ಉದ್ಯೋಗ ಕಡಿತವಿಲ್ಲ ಎಂದು ಸ್ಪಷ್ಟಪಡಿಸಿದ ಪಟೇಲ್, ಏನೇ ಆದರೂ, ಖಾಸಗಿ ವಿಮಾನ ಕ್ಷೇತ್ರದ ವಿವಾದದ ಕುರಿತಾಗಿ ಪ್ರತಿಕ್ರಯಿಸಲು ನಿರಾಕರಿಸಿದ್ದಾರೆ.

ಖಾಸಗಿ ವಿಮಾನಯಾನ ಸಂಸ್ಥೆ ಜೆಟ್ ಏರ್‌ವೇಯ್ಸ್ 1900 ನೌಕರರನ್ನು ವಜಾಗೊಳಿಸಲು ನಿರ್ಧರಿಸಿದ್ದು, ನಂತರ ನಿರ್ಧಾರವನ್ನು ಹಿಂತೆಗೆದುಕೊಂಡಿತ್ತು. ಇದರೊಂದಿಗೆ, ವಿಜಯ್ ಮಲ್ಯ ನೇತೃತ್ವದ ಕಿಂಗ್‌ಫಿಶರ್ ಏರ್‌ಲೈನ್ಸ್ ತರಬೇತು ಪೈಲಟ್‌ಗಳ ವೇತನದ ಪ್ರಮಾಣವನ್ನು ತಗ್ಗಿಸುವುದಾಗಿ ಘೋಷಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹಣಕಾಸು ಬಿಕ್ಕಟ್ಟಿನಿಂದ 20 ಮಿ.ಉದ್ಯೋಗ ನಷ್ಟ
2 ತಿಂಗಳಲ್ಲಿ ಹಣದುಬ್ಬರ ಇಳಿಕೆ: ಮಾಂಟೆಕ್ ಸಿಂಗ್
ಮತ್ತಷ್ಟು ನೌಕರರ ಕೊಕ್ ಸಾಧ್ಯತೆ: ಮಲ್ಯ
ಆರ್ಥಿಕ ಬಿಕ್ಕಟ್ಟು-ರೇಪೋ ದರ ಕಡಿತ:ಆರ್‌ಬಿಐ
ತೈಲ ಬೆಲೆ 1.12 ಡಾಲರ್ ಏರಿಕೆ
ಕೋರಸ್ ಸ್ಟೀಲ್ ಉತ್ಪಾದನೆಯಲ್ಲಿ ಕಡಿತ: ಟಾಟಾ