ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಎಟಿಎಫ್ ಸಾಲ: ಪ್ರಫುಲ್, ದೇವ್ರಾ ಮಾತುಕತೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಟಿಎಫ್ ಸಾಲ: ಪ್ರಫುಲ್, ದೇವ್ರಾ ಮಾತುಕತೆ
PTI
ಎಟಿಎಫ್ ಖರೀದಿ ಸಂಬಂಧ ಇಂಡಿಯನ್ ಏರ್‌ಲೈನ್ಸ್ ತೈಲ ಕಂಪನಿಗಳಿಗೆ ಕೊಡಬೇಕಾದ ಬಾಕಿ ಮೊತ್ತದ ಕುರಿತಾಗಿ ಮಾತುಕತೆ ನಡೆಸಲು ಪೆಟ್ರೋಲಿಯಂ ಸಚಿವ ಮುರಳಿ ದೇವೊರ ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ಅವರನ್ನು ಬುಧವಾರ ಭೇಟಿ ಮಾಡಲಿದ್ದಾರೆ.

ಏರ್‌ಲೈನ್ಸ್ ಮತ್ತು ತೈಲ ಕಂಪನಿ ಎರಡಕ್ಕೂ ಯಾವುದೇ ನಷ್ಟ ಉಂಟಾಗದ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಲು ಮಾತುಕತೆಯಲ್ಲಿ ಪ್ರಯತ್ನಿಸಲಾಗುವುದು ಎಂದು ದೇವ್ರಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಭಾರತದ ಏರ್‌ಲೈನ್ ಸಂಸ್ಥೆ ಏರ್ ಇಂಡಿಯಾ, ಖಾಸಗಿ ವಿಮಾನ ಸಂಸ್ಥೆ ಜೆಟ್ ಏರ್‌ವೇಸ್ ಮತ್ತು ಕಿಂಗ್‌ಫಿಶರ್ ಏರ್‌ಲೈನ್ಸ್‌ಗಳು, ಎಟಿಎಫ್ ಇಂಧನ ಖರೀದಿ ಸಂಬಂಧ ತೈಲ ಕಂಪನಿಗಳೊಂದಿಗೆ ಒಟ್ಟಾಗಿ ಸುಮಾರು 20 ಶತಕೋಟಿ ರೂ. ಸಾಲವನ್ನು ಹೊಂದಿವೆ.

ಅರುವತ್ತು ದಿನಗಳ ಸಾಲ ಅವಧಿಯು ಪೂರ್ಣಗೊಂಡ ಬಳಿಕವೂ ಏರ್‌ಲೈನ್ಸ್ ಕಂಪನಿಗಳು ಕಂತು ತಪ್ಪಿಸಿದ ಅನೇಕ ನಿದರ್ಶನಗಳಿವೆ ಎಂದು ದೇವ್ರಾ ಹೇಳಿದ್ದಾರೆ.

ಖಾಸಗಿ ಏರ್‌ಲೈನ್ಸ್ ಸಂಸ್ಥೆಗಳು ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ಅವರ ಸಹಕಾರದೊಂದಿಗೆ, ಹಣಕಾಸು ಸಮಸ್ಯೆಯ ಆಧಾರದಲ್ಲಿ ಸರಕಾರದಿಂದ ಹಣಕಾಸು ಸಹಾಯಕ್ಕಾಗಿ ಪ್ರಯತ್ನಿಸುತ್ತಿವೆ.

ಏರ್‌ಲೈನ್ಸ್ ಸಂಸ್ಥೆಗಳಿಗೆ ಸಹಾಯ ಮಾಡಲು ಸರಕಾರವು ಪ್ರಯತ್ನಿಸುತ್ತಿದ್ದು, ವಿಮಾನಯಾನ ಸಂಸ್ಥೆಗಳು ಕಾರ್ಯಸ್ಥಗಿತಗೊಳಿಸಲು ಸರಕಾರವು ಬಯಸುವುದಿಲ್ಲ ಎಂದು ದೇವ್ರಾ ಇದೇ ವೇಳೆ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸದ್ಯ ಇಂಧನ ಬೆಲೆ ಇಳಿಕೆಯಿಲ್ಲ:ದೇವ್ರಾ
ಶೀಘ್ರವೇ ಜಪಾನ್‌ನೊಂದಿಗೆ ಎಫ್‌ಟಿಎ ಒಪ್ಪಂದ:ಪಿಎಂ
ಏರ್‌ ಇಂಡಿಯಾದ ಉದ್ಯೋಗ ಕಡಿತವಿಲ್ಲ:ಪ್ರಫುಲ್
ಹಣಕಾಸು ಬಿಕ್ಕಟ್ಟಿನಿಂದ 20 ಮಿ.ಉದ್ಯೋಗ ನಷ್ಟ
2 ತಿಂಗಳಲ್ಲಿ ಹಣದುಬ್ಬರ ಇಳಿಕೆ: ಮಾಂಟೆಕ್ ಸಿಂಗ್
ಮತ್ತಷ್ಟು ನೌಕರರ ಕೊಕ್ ಸಾಧ್ಯತೆ: ಮಲ್ಯ