ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಭಾರತದ ಮೇಲೆ ವಿಶ್ವಾಸವಿರಿಸಿ:ಜಪಾನ್‌ಗೆ ಸಿಂಗ್ ಕರೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತದ ಮೇಲೆ ವಿಶ್ವಾಸವಿರಿಸಿ:ಜಪಾನ್‌ಗೆ ಸಿಂಗ್ ಕರೆ
PTI
ಅಂತಾರಾಷ್ಟ್ರೀಯ ಹಣಕಾಸು ಬಿಕ್ಕಟ್ಟಿನಿಂದ ಉಂಟಾಗಿರುವ ಸಮಸ್ಯೆಗಳಿಗೆ ಆತಂಕ ಪಡೆಬೇಕಾದ ಅವಶ್ಯಕತೆಯಿಲ್ಲ ಎಂಬುದಾಗಿ ಜಪಾನಿ ಹೂಡಿಕೆದಾರರಿಗೆ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಭರವಸೆ ನೀಡಿದ್ದು, ಭಾರತದ ಆರ್ಥಿಕ ವ್ಯವಸ್ಥೆಯ ಮೇಲೆ ವಿಶ್ವಾಸವಿರಿಸುವಂತೆ ಜಪಾನ್ ಉದ್ಯಮಿಗಳಿಗೆ ಕರೆ ನೀಡಿದ್ದಾರೆ.

'ಭಾರತದ ಹಣಕಾಸು ವ್ಯವಸ್ಥೆಯೊಂದಿಗೆ ವಿಶ್ವಾಸವಿರಿಸುವಂತೆ ನಾನು ನಿಮ್ಮಲ್ಲಿ ಒತ್ತಾಯಿಸುತ್ತೇನೆ. ಖಾಸಗಿ ಕಾರ್ಯತತ್ಪರತೆ, ಸವಾಲು ಸ್ವೀಕರಣೆ, ಉದ್ಯಮಶೀಲತೆ ಮುಂತಾದವುಗಳಿಗೆ ಸಮಂಜಸವಾಗುವಂತಹ ವಾತಾವರಣ ನಿರ್ಮಿಸಲು ನಾವು ಬದ್ಧರಾಗಿದ್ದೇವೆ' ಎಂದು ಪ್ರಸಕ್ತ ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ಸಿಂಗ್ ಜಪಾನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕಳೆದ ಒಂದು ವರ್ಷದ ಚೀನಾದೊಂದಿಗಿನ ಭಾರತದ ದ್ವಿಪಕ್ಷೀಯ ವ್ಯಾಪಾರದ ಪ್ರಮಾಣದ ವೃದ್ಧಿಯು ಜಪಾನ್‌ನೊಂದಿಗಿನ ಭಾರತದ ಒಟ್ಟು ವ್ಯಾಪಾರಕ್ಕಿಂತ ಹೆಚ್ಚಾಗಿದೆ. ಜಪಾನ್ ಉದ್ಯಮಿಗಳು ಭಾರತದ ಆರ್ಥಿಕ ವಾತಾವರಣದ ಕುರಿತಾಗಿ ಆಗ್ಗಿಂದಾಗೆ ಆತಂಕಕ್ಕೆ ಒಳಗಾಗುತ್ತಾರೆ ಎಂಬುದಾಗಿ ಸಿಂಗ್ ಅಭಿಪ್ರಾಯಪಟ್ಟರು.

ಜಪಾನ್‌ನಿಂದ ಬಂಡವಾಳ ಆಕರ್ಷಿಸಲು ಭಾರತವು ಪ್ರಾರಂಭಿಸಿರುವುದಾಗಿ ಸೂಚಿಸಿದ ಸಿಂಗ್, ಏನೇ ಆದರೂ, ಇದು ಪೂರ್ಣ ಸಂಭಾವ್ಯತೆಗಿಂತ ಬಹು ಕಡಿಮೆಯಾಗಿದೆ ಎಂದು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಎಟಿಎಫ್ ಸಾಲ: ಪ್ರಫುಲ್, ದೇವ್ರಾ ಮಾತುಕತೆ
ಸದ್ಯ ಇಂಧನ ಬೆಲೆ ಇಳಿಕೆಯಿಲ್ಲ:ದೇವ್ರಾ
ಶೀಘ್ರವೇ ಜಪಾನ್‌ನೊಂದಿಗೆ ಎಫ್‌ಟಿಎ ಒಪ್ಪಂದ:ಪಿಎಂ
ಏರ್‌ ಇಂಡಿಯಾದ ಉದ್ಯೋಗ ಕಡಿತವಿಲ್ಲ:ಪ್ರಫುಲ್
ಹಣಕಾಸು ಬಿಕ್ಕಟ್ಟಿನಿಂದ 20 ಮಿ.ಉದ್ಯೋಗ ನಷ್ಟ
2 ತಿಂಗಳಲ್ಲಿ ಹಣದುಬ್ಬರ ಇಳಿಕೆ: ಮಾಂಟೆಕ್ ಸಿಂಗ್