ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಐಟಿ ಸಂಸ್ಥೆಗಳೊಂದಿಗೆ ರಿಲಯನ್ಸ್ ಕಮ್ಯುನಿಕೇಶನ್ಸ್ ಒಪ್ಪಂದ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಐಟಿ ಸಂಸ್ಥೆಗಳೊಂದಿಗೆ ರಿಲಯನ್ಸ್ ಕಮ್ಯುನಿಕೇಶನ್ಸ್ ಒಪ್ಪಂದ
ತನ್ನ ಗ್ರಾಹಕರಿಗೆ ಇಂಟರ್ನೆಟ್ ಸಂಪರ್ಕದೊಂದಿಗೆ ಉಚಿತ ಲ್ಯಾಪ್‌ಟಾಪ್ ನೀಡುವ ಉದ್ದೇಶದಿಂದ ಐಟಿ ದೈತ್ಯರಾದ ಅಸರ್, ಅಸಸ್, ಎಚ್‌ಸಿಎಲ್, ಇಂಟೆಲ್ ಮತ್ತು ಲಿನೋವೋದೊಂದಿಗೆ ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಕಮ್ಯುನಿಕೇಶನ್ಸ್ ಕಾರ್ಯತಂತ್ರ ಮೈತ್ರಿಯೊಂದನ್ನು ಮಾಡಿಕೊಂಡಿದೆ.

ರಿಲಯನ್ಸ್ ಉನ್ನತ ವೇಗದ ಇಂಟರ್ನೆಟ್ ಕಾರ್ಡ್ ಸೇವೆಯೊಂದಿಗೆ ಇಂಟೆಲ್‌ನ 'ಅಟಂ' ಉಚಿತ ಲ್ಯಾಪ್‌ಟಾಪ್‌ಗಳನ್ನು ರಿಲಯನ್ಸ್‌ ಈ ನೂತನ ಯೋಜನೆಯಿಂದ ಗ್ರಾಹಕರು ಪಡೆಯಬಹುದಾಗಿದೆ ರಿಲಯನ್ಸ್ ಕಮ್ಯುನಿಕೇಶನ್ಸ್‌ನ ಅಧ್ಯಕ್ಷ ಮಹೇಶ್ ಪ್ರಸಾದ್ ತಿಳಿಸಿದ್ದಾರೆ.

ಭಾರತದಲ್ಲಿ ಹೆಚ್ಚುತ್ತಿರುವು ಇಂಟರ್ನೆಟ್ ಸೇವೆಯು ರಿಲಯನ್ಸ್ ಕಮ್ಯುನಿಕೇಶನ್ಸ್‌ನ ಮುಖ್ಯ ದೂರದೃಷ್ಟಿಯಾಗಿದೆ. ದೇಶದಲ್ಲಿ ಮುಂದಿನ ಹಂತದ ಇಂಟರ್ನೆಟ್ ಅಭಿವೃದ್ಧಿಯು ಪಿಸಿ ಮತ್ತು ಲ್ಯಾಪ್‌ಟಾಪ್ ಅಭಿವೃದ್ಧಿಯೊಂದಿಗೆ ಸಂಪರ್ಕ ಹೊಂದಿದೆ ಎಂದು ಅವರು ಹೇಳಿದ್ದಾರೆ.

ಎರಡು ವರ್ಷಗಳಿಗೆ ತಿಂಗಳಿಗೆ ರೂ.1,500 ಕಂತಿನ ಮೂಲಕ ಗ್ರಾಹಕರು ಈ ಯೋಜನೆಯ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಕಂಪನಿ ಪ್ರಕಟಣೆಗಳು ತಿಳಿಸಿವೆ.

ಅನಿಲ್ ಧೀರೂಬಾಯ್ ಕಂಪನಿಯ ಭಾಗವಾಗಿರುವ ರಿಲಯನ್ಸ್ ಕಮ್ಯುನಿಕೇಶನ್ಸ್, ಭಾರತದ ಪ್ರಮುಖ ನಿಸ್ತಂತು ಇಂಟರ್ನೆಟ್ ಸೇವಾ ಸರಬರಾಜು ಸಂಸ್ಥೆಯಾಗಿದ್ದು, ದೇಶದ 20000 ನಗರಗಳಲ್ಲಿ ಮತ್ತು 4.5 ಲಕ್ಷ ಗ್ರಾಮಗಳಲ್ಲಿ ಸುಮಾರು ಹತ್ತು ಲಕ್ಷ ಗ್ರಾಹಕರನ್ನು ಹೊಂದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಾರತದ ಮೇಲೆ ವಿಶ್ವಾಸವಿರಿಸಿ:ಜಪಾನ್‌ಗೆ ಸಿಂಗ್ ಕರೆ
ಎಟಿಎಫ್ ಸಾಲ: ಪ್ರಫುಲ್, ದೇವ್ರಾ ಮಾತುಕತೆ
ಸದ್ಯ ಇಂಧನ ಬೆಲೆ ಇಳಿಕೆಯಿಲ್ಲ:ದೇವ್ರಾ
ಶೀಘ್ರವೇ ಜಪಾನ್‌ನೊಂದಿಗೆ ಎಫ್‌ಟಿಎ ಒಪ್ಪಂದ:ಪಿಎಂ
ಏರ್‌ ಇಂಡಿಯಾದ ಉದ್ಯೋಗ ಕಡಿತವಿಲ್ಲ:ಪ್ರಫುಲ್
ಹಣಕಾಸು ಬಿಕ್ಕಟ್ಟಿನಿಂದ 20 ಮಿ.ಉದ್ಯೋಗ ನಷ್ಟ