ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಇಂಧನ ಸಾಲ ತೀರಿಸಲು ಮಾರ್ಚ್ 2009ರವರೆಗೆ ಗಡುವು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇಂಧನ ಸಾಲ ತೀರಿಸಲು ಮಾರ್ಚ್ 2009ರವರೆಗೆ ಗಡುವು
PTI
ಎಟಿಎಫ್ ಇಂಧನ ಖರೀದಿ ಸಂಬಂಧ ತೈಲ ಕಂಪನಿಗಳೊಂದಿಗಿರುವ ಸುಮಾರು 2500-2800 ಕೋಟಿ ರೂ. ಸಾಲವನ್ನು ಮಾಸಿಕ ಕಂತಿನ ಮೂಲಕ ತೀರಿಸಲು ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಸರಕಾರವು ಮಾರ್ಚ್ 2009ರವರೆಗೆ ಗಡುವು ನೀಡಿದೆ.

ಪೆಟ್ರೋಲಿಯಂ ಸಚಿವ ಮುರಲಿ ದೇವ್ರಾ ಮತ್ತು ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ನಡುವೆ ಬುಧವಾರ ನಡೆದ ಮಾತುಕತೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.

ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ, ತೈಲ ಕಂಪನಿಗಳ ಜೆಟ್ ಇಂಧನ ಸಾಲ ಅವಧಿಯನ್ನು 60 ದಿನಗಳಿಂದ 90 ದಿನಗಳಿಗೆ ವಿಸ್ತರಿಸಲಿದ್ದು, ಮಾಸಿಕ ಕಂತಿನ ಮೂಲಕ ಸಾಲ ಮೊತ್ತವನ್ನು ತೀರಿಸಲು ವಿಮಾನ ಸಂಸ್ಥೆಗಳಿಗೆ ಮಾರ್ಚ್ 2009ರವರೆಗೆ ಗಡುವು ನೀಡಲಾಗುವುದು.

ಕಿಂಗ್‌ಫಿಶರ್ ಮುಖ್ಯಸ್ಥ ಮತ್ತು ಸಿಇಒ ವಿಜಯ್ ಮಲ್ಯ, ಜೆಟ್ ಏರ್‌ವೇಯ್ಸ್ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಕೆ.ದತ್ತಾ ಮತ್ತು ಏರ್ ಇಂಡಿಯಾ ಮುಖ್ಯಸ್ಥ ರಘು ಮೆನನ್ ಈ ಸಭೆಯಲ್ಲಿ ಉಪಸ್ಥಿತರಿದ್ದರು.

ರಾಜ್ಯ ನಿಯಂತ್ರಿತ ತೈಲ ಸಂಸ್ಥೆಗಳಾದ ಭಾರತ್ ಪೆಟ್ರೋಲಿಯಂ, ಹಿಂದೂಸ್ಥಾನ್ ಪೆಟ್ರೋಲಿಯಂನ ಪ್ರತಿನಿಧಿಗಳು ಮತ್ತು ಹಣಕಾಸು ಸಚಿವಾಲಯದ ಅಧಿಕಾರಿಗಳೂ ಸಭೆಯಲ್ಲಿ ಭಾಗವಹಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಐಟಿ ಸಂಸ್ಥೆಗಳೊಂದಿಗೆ ರಿಲಯನ್ಸ್ ಕಮ್ಯುನಿಕೇಶನ್ಸ್ ಒಪ್ಪಂದ
ಭಾರತದ ಮೇಲೆ ವಿಶ್ವಾಸವಿರಿಸಿ:ಜಪಾನ್‌ಗೆ ಸಿಂಗ್ ಕರೆ
ಎಟಿಎಫ್ ಸಾಲ: ಪ್ರಫುಲ್, ದೇವ್ರಾ ಮಾತುಕತೆ
ಸದ್ಯ ಇಂಧನ ಬೆಲೆ ಇಳಿಕೆಯಿಲ್ಲ:ದೇವ್ರಾ
ಶೀಘ್ರವೇ ಜಪಾನ್‌ನೊಂದಿಗೆ ಎಫ್‌ಟಿಎ ಒಪ್ಪಂದ:ಪಿಎಂ
ಏರ್‌ ಇಂಡಿಯಾದ ಉದ್ಯೋಗ ಕಡಿತವಿಲ್ಲ:ಪ್ರಫುಲ್