ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಭಾರತದ ಐಟಿ ಕಂಪನಿಗಳಲ್ಲಿ 'ಪಿಂಕ್ ಸ್ಲಿಪ್' ಇಲ್ಲ:ಇನ್ಫೋಸಿಸ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತದ ಐಟಿ ಕಂಪನಿಗಳಲ್ಲಿ 'ಪಿಂಕ್ ಸ್ಲಿಪ್' ಇಲ್ಲ:ಇನ್ಫೋಸಿಸ್
ಪ್ರಸಕ್ತ ಜಾಗತಿಕ ಆರ್ಥಿಕ ಬಿಕ್ಕಟ್ಟನ್ನು ಎದುರಿಸುವಲ್ಲಿ ಭಾರತದ ಮಾಹಿತಿ ತಂತ್ರಜ್ಞಾನ ಉದ್ಯಮಗಳು ಶಕ್ತವಾಗಿರುವ ಹಿನ್ನೆಲೆಯಲ್ಲಿ, ಭಾರತೀಯ ಐಟಿ ಉದ್ಯಮಗಳಲ್ಲಿ ಉದ್ಯೋಗ ಕಡಿತವಿಲ್ಲ ಎಂಬುದಾಗಿ ಇನ್ಫೋಸಿಸ್ ಟೆಕ್ನಾಲಜಿ ಉಪಾಧ್ಯಕ್ಷ ನಂದನ್ ನಿಲೇಕಣಿ ಸ್ಪಷ್ಟಪಡಿಸಿದ್ದಾರೆ.

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಅಡಿಪಾಯವು ಭದ್ರವಾಗಿದ್ದು, ಪಿಂಕ್ ಸ್ಲಿಪ್ ನೀಡುವ ಸಂದರ್ಭ ಒದಗಿ ಬರುವುದಿಲ್ಲ ಎಂದು ನಿಲೇಕಣಿ ತಿಳಿಸಿದ್ದಾರೆ.

ಇನ್ಫೋಸಿಸ್ ಅಭಿವೃದ್ಧಿಯನ್ನು ಕಡಿಮೆಗೊಳಿಸಿದರೂ, ಶೇ.13-15ರಷ್ಟು ಉನ್ನತ ಮಟ್ಟಕ್ಕೆ ತಲುಪಿದೆ ಎಂದು ಅವರು ಸೂಚಿಸಿದ್ದಾರೆ

ಜಾಗತಿಕ ಹಣಕಾಸು ಬಿಕ್ಕಟ್ಟು ಅತ್ಯಂತ ಕ್ಲಿಷ್ಟಕರವಾಗಿದ್ದು, ಅದನ್ನು ಎದುರಿಸುವಲ್ಲಿ ಭಾರತೀಯ ಸರಕಾರವು ಉತ್ತಮ ಪ್ರಯತ್ನಗಳನ್ನೇ ನಡೆಸಿದೆ. ಅಲ್ಲದೆ, ಆರ್ಥಿಕ ಕುಸಿತದ ಹೊರತಾಗಿಯೂ ಭಾರತವು ಅಭಿವೃದ್ಧಿ ಸಾಧಿಸಲಿದೆ ಎಂದು ಮನಮೋಹನ್ ಸಿಂಗ್ ಅವರೂ ಹೇಳಿದ್ದಾರೆ ಎಂದು ನಿಲೇಕಣಿ ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಇಂಧನ ಸಾಲ ತೀರಿಸಲು ಮಾರ್ಚ್ 2009ರವರೆಗೆ ಗಡುವು
ಐಟಿ ಸಂಸ್ಥೆಗಳೊಂದಿಗೆ ರಿಲಯನ್ಸ್ ಕಮ್ಯುನಿಕೇಶನ್ಸ್ ಒಪ್ಪಂದ
ಭಾರತದ ಮೇಲೆ ವಿಶ್ವಾಸವಿರಿಸಿ:ಜಪಾನ್‌ಗೆ ಸಿಂಗ್ ಕರೆ
ಎಟಿಎಫ್ ಸಾಲ: ಪ್ರಫುಲ್, ದೇವ್ರಾ ಮಾತುಕತೆ
ಸದ್ಯ ಇಂಧನ ಬೆಲೆ ಇಳಿಕೆಯಿಲ್ಲ:ದೇವ್ರಾ
ಶೀಘ್ರವೇ ಜಪಾನ್‌ನೊಂದಿಗೆ ಎಫ್‌ಟಿಎ ಒಪ್ಪಂದ:ಪಿಎಂ