ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಗೃಹ ಸಾಲ ದರ ಇಳಿಕೆ ಸಂಭವ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗೃಹ ಸಾಲ ದರ ಇಳಿಕೆ ಸಂಭವ
ಭಾರತೀಯ ರಿಸರ್ವ್ ಬ್ಯಾಂಕ್ ರೇಪೋ ದರ ಇಳಿಕೆಗೊಳಿಸಿದ್ದರಿಂದ ನಗದು ಹರಿವು ಪರಿಸ್ಥಿತಿಯಲ್ಲಿ ಚೇತರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಗೃಹ ಸಾಲ ಬಡ್ಡಿದರಗಳು ಇಳಿಕೆಗೊಳ್ಳುವ ಸಂಭಾವ್ಯತೆ ಇದೆ.

ಗೃಹ ಸಾಲ ವಿಭಾಗದಲ್ಲಿ ಮಾರುಕಟ್ಟೆ ಮುಂಚೂಣಿಯಲ್ಲಿರುವ ಐಸಿಐಸಿಐ ಬ್ಯಾಂಕು ಕೂಡಾ ನಗದು ಮಾರುಕಟ್ಟೆಯಲ್ಲಿನ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದು, ಅದರ ಪ್ರಕಾರ ನಿರ್ಧಾರ ತೆಗೆದುಕೊಳ್ಳಲಿದೆ. ಅಕ್ಟೋಬರ್ ಹತ್ತರಂದು ಐಸಿಐಸಿಐ ಬ್ಯಾಂಕ್ ಗೃಹ ಸಾಲ ಬಡ್ಡಿದರವನ್ನು ಶೇ.1ರಷ್ಟು ಏರಿಸಿತ್ತು.

ಬಡ್ಡಿದರ ಪ್ರಮಾಣವು ಹೆಚ್ಚಾಗಿದ್ದ ಸಂದರ್ಭದಲ್ಲಿ ಬ್ಯಾಂಕ್ ಈ ನಿರ್ಧಾರವನ್ನು ಕೈಗೊಂಡಿತ್ತು. ಆದರೆ, ಭಾರತೀಯ ರಿಸರ್ವ್ ಬ್ಯಾಂಕ್‌ನ ಪರಿಹಾರ ಕ್ರಮಗಳು ಪರಿಸ್ಥಿತಿಯನ್ನು ಬದಲಾಯಿಸಿದ್ದು, ಬಡ್ಡಿದರ ಕಡಿತಗೊಳಿಸುವತ್ತ ಬ್ಯಾಂಕ್ ಚಿಂತನೆ ನಡೆಸಿದೆ ಎಂದು ಐಸಿಐಸಿಐನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಹಣಕಾಸು ವ್ಯವಸ್ಥೆಯಲ್ಲಿ ನಗದು ಹರಿವು ಪ್ರಮಾಣವನ್ನು ಹೆಚ್ಚಿಸುವ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಸರಕಾರದ ಕ್ರಮಗಳಿಂದಾಗಿ ಪಂಜಾಬ್ ನ್ಯಾಶನಲ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮುಂತಾದ ಬ್ಯಾಂಕ್‌ಗಳು ಅರ್ಧ ಪ್ರತಿಶತದಷ್ಟು ಗೃಹಸಾಲ ಬಡ್ಡಿದರವನ್ನು ಕಳೆದ ವಾರ ಇಳಿಕೆಗೊಳಿಸಿವೆ. ಎಸ್‌ಬಿಐ ಸೇರಿದಂತೆ ಅನೇಕ ಸರಕಾರಿ ವಲಯದ ಬ್ಯಾಂಕುಗಳೂ ಗೃಹ ಸಾಲ ಬಡ್ಡಿದರ ಕಡಿತಗೊಳಿಸುವ ನಿರೀಕ್ಷೆ ಇದೆ.

ಸುಲಭ ನಗದು ಹರಿವು ಪರಿಸ್ಥಿತಿಯು ಮುಂದುವರಿದಲ್ಲಿ ಬ್ಯಾಂಕ್‌ಗಳು ಠೇವಣಿ ದರವನ್ನು ಕಡಿಮೆಗೊಳಿಸಲಿವೆ. ಇದು ಸಾಲ ದರ ಕಡಿತಕ್ಕೆ ಹಾದಿ ಮಾಡಿಕೊಡುತ್ತದೆ ಎಂದು ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್‌ನ ಸಿಎಂಡಿ ಅಲೋಕ್ ಮಿಶ್ರಾ ಅಭಿಪ್ರಾಯಪಟ್ಟಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಾರತದ ಐಟಿ ಕಂಪನಿಗಳಲ್ಲಿ 'ಪಿಂಕ್ ಸ್ಲಿಪ್' ಇಲ್ಲ:ಇನ್ಫೋಸಿಸ್
ಇಂಧನ ಸಾಲ ತೀರಿಸಲು ಮಾರ್ಚ್ 2009ರವರೆಗೆ ಗಡುವು
ಐಟಿ ಸಂಸ್ಥೆಗಳೊಂದಿಗೆ ರಿಲಯನ್ಸ್ ಕಮ್ಯುನಿಕೇಶನ್ಸ್ ಒಪ್ಪಂದ
ಭಾರತದ ಮೇಲೆ ವಿಶ್ವಾಸವಿರಿಸಿ:ಜಪಾನ್‌ಗೆ ಸಿಂಗ್ ಕರೆ
ಎಟಿಎಫ್ ಸಾಲ: ಪ್ರಫುಲ್, ದೇವ್ರಾ ಮಾತುಕತೆ
ಸದ್ಯ ಇಂಧನ ಬೆಲೆ ಇಳಿಕೆಯಿಲ್ಲ:ದೇವ್ರಾ