ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಬ್ಯಾಂಕ್‌ಗಳಿಗೆ ಸರಕಾರದಿಂದ 3,000ಕೋಟಿ ಹೂಡಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬ್ಯಾಂಕ್‌ಗಳಿಗೆ ಸರಕಾರದಿಂದ 3,000ಕೋಟಿ ಹೂಡಿಕೆ
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಾರುಕಟ್ಟೆ ವಿಶ್ವಾಸವನ್ನು ವೃದ್ಧಿಗೊಳಿಸುವ ಸಲುವಾಗಿ, ಹೂಡಿಕೆ ಪರ್ಯಾಪ್ತ ಅನುಪಾತವನ್ನು (ಸಿಎಆರ್) ರಕ್ಷಿಸುವ ನಿಟ್ಟಿನಲ್ಲಿ ಸರಕಾರವು ಏಳು ಸರಕಾರಿ ವಲಯ ಬ್ಯಾಂಕ್‌ಗಳಲ್ಲಿ 3,000 ಕೋಟಿ ರೂ.ಯನ್ನು ಹೂಡಿಕೆ ಮಾಡುವ ಸಾಧ್ಯತೆ ಇದೆ.

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ವಿಜಯಾ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ, ವಿಜಯಾ ಬ್ಯಾಂಕ್, ಯುಸಿಒ ಬ್ಯಾಂಕ್ ಮತ್ತು ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಮುಂತಾದ ಬ್ಯಾಂಕ್‌ಗಳು ಈ ಮರುಬಂಡವಾಳದ ಪ್ರಯೋಜನವನ್ನು ಪಡೆಯಲಿವೆ. ಈ ಎಲ್ಲಾ ಬ್ಯಾಂಕ್‌ಗಳ ಹೂಡಿಕೆ ಅಪಾಯ ಆಧಾರಿತ ಆಸತಿ ಅನುಪಾತ (ಸಿಆರ್ಎಆರ್) ಪ್ರಮಾಣವು ಶೇ.12ಕ್ಕಿಂತ ಕಡಿಮೆಯಿದೆ.

ಈ ಕುರಿತು ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿಯಬೇಕಿದ್ದು, 3000 ಕೋಟಿ ರೂ.ಯನ್ನು ಸರಕಾರವು ಸದ್ಯದಲ್ಲಿಯೇ ಬ್ಯಾಂಕ್‌ಗಳಿಗೆ ಒದಗಿಸುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಂಡವಾಳವು ಸಾಲ ಯೋಜನೆಯ ಮೂಲಕ ನಡೆಸಲಾಗುತ್ತಿದ್ದು, ಸರಕಾರಿ ಸದಸ್ಯತ್ವವನ್ನು ಹೊಂದಿದ ಟಯರ್-2 ಬಾಂಡ್ ಮತ್ತು ಆದ್ಯತಾ ಶೇರುಗಳನ್ನು ಬ್ಯಾಂಕ್‌ಗಳು ಪ್ರಕಟಿಸುವ ಸಾಧ್ಯತೆ ಇದೆ.

ಯಾವುದೇ ಬ್ಯಾಂಕ್‌ಗಳ ಸಿಆರ್ಎಆರ್ ದರವು ಶೇ.10ಕ್ಕಿಂತ ಕಡಿಮೆ ಇಲ್ಲದಿದ್ದರೂ, ಬ್ಯಾಂಕಿಂಗ್ ವ್ಯವಸ್ಥೆಯ ಸೂಕ್ತ ಕಾರ್ಯನಿರ್ವಹಣೆಗಾಗಿ ಈ ಯೋಜನೆಗೆ ಸರಕಾರ ಮುಂದಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಗೃಹ ಸಾಲ ದರ ಇಳಿಕೆ ಸಂಭವ
ಭಾರತದ ಐಟಿ ಕಂಪನಿಗಳಲ್ಲಿ 'ಪಿಂಕ್ ಸ್ಲಿಪ್' ಇಲ್ಲ:ಇನ್ಫೋಸಿಸ್
ಇಂಧನ ಸಾಲ ತೀರಿಸಲು ಮಾರ್ಚ್ 2009ರವರೆಗೆ ಗಡುವು
ಐಟಿ ಸಂಸ್ಥೆಗಳೊಂದಿಗೆ ರಿಲಯನ್ಸ್ ಕಮ್ಯುನಿಕೇಶನ್ಸ್ ಒಪ್ಪಂದ
ಭಾರತದ ಮೇಲೆ ವಿಶ್ವಾಸವಿರಿಸಿ:ಜಪಾನ್‌ಗೆ ಸಿಂಗ್ ಕರೆ
ಎಟಿಎಫ್ ಸಾಲ: ಪ್ರಫುಲ್, ದೇವ್ರಾ ಮಾತುಕತೆ