ಜಾಗತಿಕ ಆರ್ಥಿಕ ಏರಿಳಿತದ ಪ್ರಭಾವದ ಕುರಿತಾದ ಸರಕಾರದ ಹೋರಾಟಕ್ಕೆ ಬಿಡುವೆಂಬಂತೆ, ಆಹಾರ, ಆಹಾರೇತರ ಮತ್ತು ಉತ್ಪಾದನಾ ವಸ್ತುಗಳ ಬೆಲೆಯಲ್ಲಿ ಇಳಿಕೆ ಉಂಟಾದ ಹಿನ್ನೆಲೆಯಲ್ಲಿ, ಅಕ್ಟೋಬರ್ 11ಕ್ಕೆ ಅಂತ್ಯಗೊಂಡ ವಾರದಲ್ಲಿ ಸಗಟು ಬೆಲೆ ಆಧಾರಿತ ಹಣದುಬ್ಬರವು ಶೇ.11.07ರಷ್ಟು ಇಳಿಕೆಗೊಂಡಿದೆ.ಹಣದುಬ್ಬರ ದರವು ಶೇ.11.07ರಷ್ಟು ಇಳಿಕೆಗೊಂಡಿರುವುದಾಗಿ ಸರಕಾರಿ ಅಂಕಿಅಂಶಗಳು ತಿಳಿಸಿವೆ. ಸೆಪ್ಟೆಂಬರ್ 27ಕ್ಕೆ ಅಂತ್ಯಗೊಂಡ ವಾರದಲ್ಲಿ ಹಣದುಬ್ಬರವು ಶೇ11.44ರಷ್ಟಿತ್ತು.ಪ್ರಾಥಮಿಕ ಉತ್ಪನ್ನಗಳಾದ ಗೋಧಿ, ಜೋಳ, ಬಾರ್ಲಿ, ತೊಗರಿಬೇಳೆ, ಬಟಾಟೆ, ಕೊ ತ್ತಂಬರಿ, ರಬ್ಬರ್ ಮುಂತಾದವುಗಳ ಬೆಲೆಯು ಇಳಿಕೆಗೊಂಡಿದೆ. ಆಹಾರ ಉತ್ಪನ್ನಗಳಲ್ಲಿ ಹಣ್ಣುಗಳು, ತರಕಾರಿಗಳು ಮತ್ತು ಮೊಟ್ಟೆಯ ಬೆಲೆ ಇಳಿಕೆಗೊಂಡಿದೆ.ಆದರೆ, ಚಹಾ, ತುಪ್ಪ, ಅಕ್ಕಿ, ಟೊಬ್ಯಾಕೋ, ಸಾಸಿವೆ ಬೀಜ ಮುಂತಾದವುಗಳ ಬೆಲೆಯು ಏರಿಕೆಯಲ್ಲಿದೆ. |
|