ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಹಣದುಬ್ಬರ ಇಳಿಕೆಗೊಳ್ಳುವ ವಿಶ್ವಾಸವಿದೆ:ಚಿದಂಬರಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಣದುಬ್ಬರ ಇಳಿಕೆಗೊಳ್ಳುವ ವಿಶ್ವಾಸವಿದೆ:ಚಿದಂಬರಂ
PTI
ಅಕ್ಟೋಬರ್ 11ಕ್ಕೆ ಅಂತ್ಯಗೊಂಡ ವಾರದಲ್ಲಿ ಹಣದುಬ್ಬರವು ಶೇ.11.44ರಿಂದ ಶೇ.11.7ಕ್ಕೆ ಇಳಿಕೆಗೊಂಡಿದ್ದರೂ, ಹಣದುಬ್ಬರ ಪ್ರಮಾಣವು ಇನ್ನೂ ಏರಿಕೆಯಲ್ಲಿಯೇ ಇದೆ ಎಂದು ಹಣಕಾಸು ಸಚಿವ ಪಿ.ಚಿದಂಬರಂ ಕಳವಳ ವ್ಯಕ್ತಪಡಿಸಿದ್ದಾರೆ.

ಏನೇ ಆದರೂ, ಮುಂದಿನ ದಿನಗಳಲ್ಲಿ ಹಣದುಬ್ಬರವು ಇನ್ನಷ್ಟು ಇಳಿಕೆಗೊಳ್ಳಲಿದೆ ಎಂಬ ವಿಶ್ವಾಸವಿದೆ ಎಂಬುದಾಗಿ ಚಿದಂಬರಂ ತಿಳಿಸಿದರು.

ಏತನ್ಮಧ್ಯೆ, ಹೂಡಿಕೆದಾರರ ಆತಂಕವನ್ನು ದೂರಮಾಡಲು ಪ್ರಯತ್ನಿಸಿರುವ ಚಿದಂಬರಂ, ಬಂಡವಾಳ ಒಳಹರಿವು ಕ್ರಮೇಣ ಹೆಚ್ಚಳಗೊಳ್ಳಲಿದೆ ಎಂಬ ವಿಶ್ವಾಸವಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಆತಂಕದಲ್ಲಿ ಶೇರುಗಳನ್ನು ಮಾರಾಟ ಮಾಡಬೇಡಿ, ಅದು, ಆರ್ಥಿಕ ಕುಸಿತವನ್ನು ಇನ್ನಷ್ಟು ತೀವ್ರಗೊಳಿಸುತ್ತದೆ ಎಂಬ ಎಚ್ಚರಿಕೆಯನ್ನು ಇದೇ ವೇಳೆ ಚಿದಂಬರಂ ಹೂಡಿಕೆದಾರರಿಗೆ ನೀಡಿದರು.

ಏನೇ ಆದರೂ, ಪತ್ರಕರ್ತರ ಅನೇಕ ಪ್ರಶ್ನೆಗಳಿಗೆ ಉತ್ತರಿಸಲು ಚಿದಂಬರಂ ಇದೇ ವೇಳೆ ನಿರಾಕರಿಸಿದ್ದು, ಹಣಕಾಸು ವ್ಯವಸ್ಥೆಯಲ್ಲಿ ಸಾಕಷ್ಟು ನಗದು ಹರಿವಿದೆ ಎಂಬುದಾಗಿ ಸ್ಪಷ್ಟಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹಣದುಬ್ಬರ: ಶೇ.11.07ಕ್ಕೆ ಇಳಿಕೆ
ಶೀಘ್ರವೇ ತೈಲ ಬೆಲೆ ಇಳಿಕೆ:ದೇವ್ರಾ
ಬ್ಯಾಂಕ್‌ಗಳಿಗೆ ಸರಕಾರದಿಂದ 3,000ಕೋಟಿ ಹೂಡಿಕೆ
ಗೃಹ ಸಾಲ ದರ ಇಳಿಕೆ ಸಂಭವ
ಭಾರತದ ಐಟಿ ಕಂಪನಿಗಳಲ್ಲಿ 'ಪಿಂಕ್ ಸ್ಲಿಪ್' ಇಲ್ಲ:ಇನ್ಫೋಸಿಸ್
ಇಂಧನ ಸಾಲ ತೀರಿಸಲು ಮಾರ್ಚ್ 2009ರವರೆಗೆ ಗಡುವು