ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಟಾಟಾ ಮೋಟಾರ್ಸ್‌: 400 ನೌಕರರಿಗೆ ಟಾಟಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟಾಟಾ ಮೋಟಾರ್ಸ್‌: 400 ನೌಕರರಿಗೆ ಟಾಟಾ
ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಪ್ರಭಾವದಿಂದಾಗಿ ಅನೇಕ ಕಂಪನಿಗಳು ಉದ್ಯೋಗ ಕಡಿತದ ಸೂಚನೆಯನ್ನು ನೀಡುತ್ತಿರುವುದರೊಂದಿಗೆ, ದೇಶದ ಅತಿ ದೊಡ್ಡ ಅಟೋಮೊಬೈಲ್ ನಿರ್ಮಾಣ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ಕೂಡಾ ಅದೇ ಹಾದಿಯನ್ನು ತುಳಿದಂತಿದೆ.

ಟಾಟಾ ಮೋಟಾರ್ಸ್ ತನ್ನ ಜೇಮ್‌ಶೆಡ್‌ಪುರ ಸ್ಥಾವರದ 400 ಖಾಯಂದಾರರಲ್ಲದ 'ಕೆಲಸ ಇಲ್ಲ' ನೋಟೀಸ್ ನೀಡಿದೆ. ಅಕ್ಟೋಬರ್ 20ರಂದು 'ಕೆಲಸ ಇಲ್ಲ ' ಎಂಬ ನೋಟೀಸಿನೊಂದಿಗೆ ಟಾಟಾ ಮೋಟಾರ್ಸ್ 300 ತಾತ್ಕಾಲಿಕ ನೌಕರರನ್ನು ವಜಾ ಮಾಡಿತ್ತು.

ಉತ್ಪಾದನೆಯಲ್ಲಿನ ಕುಸಿತದ ಕಾರಣದಿಂದಾಗಿ ಸುಮಾರು 400 ನೌಕರರನ್ನು ವಜಾ ಮಾಡಲಾಗುವುದು ಎಂಬುದಾಗಿ ಕಂಪನಿಯು ಮೊದಲೇ ಸೂಚಿಸಿತ್ತು ಎಂದು ಕಂಪನಿ ಮೂಲಗಳು ತಿಳಿಸಿವೆ.

ಕಂಪನಿಯು ಸುಮಾರು 3,500 ತಾತ್ಕಾಲಿಕ ನೌಕರರನ್ನು ಹೊಂದಿದ್ದು, ಮುಂಗಾರು ಅವಧಿಯಲ್ಲಿ ವಾರ್ಷಿಕ ಉತ್ಪಾದನೆಯಲ್ಲಿ ಇಳಿಕೆ ಉಂಟಾದ ಕಾರಣ ಈಗಾಗಲೇ 1,500 ನೌಕರರಿಗೆ ಉದ್ಯೋಗ ಇಲ್ಲದಂತಾಗಿದೆ. ಈಗ, ಇತ್ತೀಚಿನ ಉತ್ಪಾದನೆಯಲ್ಲೂ ಇಳಿಕೆ ಉಂಟಾದ ಹಿನ್ನೆಲೆಯಲ್ಲಿ ಕಂಪನಿಯು ಮತ್ತೆ 400 ನೌಕರರನ್ನು ಉದ್ಯೋಗದಿಂದ ತೆಗೆದುಹಾಕಲಿದೆ ಎಂದು ಕಂಪನಿ ಸೂಚಿಸಿದೆ.

ಕಂಪನಿಯು ಬುಧವಾರದಿಂದ ಕೆಲಸಕ್ಕೆ ಹಾಜರಾಗದಂತೆ ಮಂಗಳವಾರವೇ ನೋಟೀಸು ನೀಡಿದ್ದು, ಈ ಮೊದಲು, ಇಂಜಿನ್, ಕ್ಯಾಬ್ ಮತ್ತು ಕಾಯಿಲ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ 300 ಕಾರ್ಮಿಕರನ್ನು ವಜಾ ಮಾಡಲಾಗಿತ್ತು.

ಏತನ್ಮಧ್ಯೆ, ಅರೆಕಾಲಿಕ ನೌಕರರ ವಜಾವು ಸಾಮಾನ್ಯ ಪ್ರಕ್ರಿಯೆಯಾಗಿದ್ದು, ಜಾಗತಿಕ ಆರ್ಥಿಕ ಕುಸಿತದ ಹೊರತಾಗಿ ಇತರ ಕೆಲವು ಕಾರಣಗಳಿಂದ ಉತ್ಪಾದನೆಯಲ್ಲಿ ಇಳಿಕೆ ಉಂಟಾದ ಪರಿಣಾಮವಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಟಾಟಾ ಮೋಟಾರ್ಸ್ ವಕ್ತಾರ ಕ್ಯಾಪ್ಟನ್ ಪಿ.ಜೆ.ಸಿಂಗ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹಣದುಬ್ಬರ ಇಳಿಕೆಗೊಳ್ಳುವ ವಿಶ್ವಾಸವಿದೆ:ಚಿದಂಬರಂ
ಹಣದುಬ್ಬರ: ಶೇ.11.07ಕ್ಕೆ ಇಳಿಕೆ
ಶೀಘ್ರವೇ ತೈಲ ಬೆಲೆ ಇಳಿಕೆ:ದೇವ್ರಾ
ಬ್ಯಾಂಕ್‌ಗಳಿಗೆ ಸರಕಾರದಿಂದ 3,000ಕೋಟಿ ಹೂಡಿಕೆ
ಗೃಹ ಸಾಲ ದರ ಇಳಿಕೆ ಸಂಭವ
ಭಾರತದ ಐಟಿ ಕಂಪನಿಗಳಲ್ಲಿ 'ಪಿಂಕ್ ಸ್ಲಿಪ್' ಇಲ್ಲ:ಇನ್ಫೋಸಿಸ್