ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಆರ್‌ಬಿಐನಿಂದ ಬ್ಯಾಂಕ್ ಕಾರ್ಯನಿರ್ವಹಣೆಯ ಅವಲೋಕನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆರ್‌ಬಿಐನಿಂದ ಬ್ಯಾಂಕ್ ಕಾರ್ಯನಿರ್ವಹಣೆಯ ಅವಲೋಕನ
ಭಾರತೀಯ ಬ್ಯಾಂಕ್‌ಗಳ ಸುರಕ್ಷತೆ ಮತ್ತು ಸಾಮರ್ಥ್ಯವನ್ನು ದೃಷ್ಟಿಯಲ್ಲಿರಿಸಿಕೊಂಡು, ವಿದೇಶದಲ್ಲಿರುವ ಭಾರತೀಯ ಬ್ಯಾಂಕ್‌ಗಳ ಕಾರ್ಯನಿರ್ವಹಣೆಯ ಅವಲೋಕನವನ್ನು ಇನ್ನಷ್ಟು ವೃದ್ಧಿಗೊಳಿಸಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ. ಎಲ್ಲೆಡೆ ಆರ್ಥಿಕ ಕೋಲಾಹಲವನ್ನು ಎಬ್ಬಿಸಿರುವ ಹಣಕಾಸು ಬಿಕ್ಕಟ್ಟಿನಿಂದಾಗಿ ಆರ್‌ಬಿಐ ಈ ನಿರ್ಧಾರಕ್ಕೆ ಮುಂದಾಗಿದೆ.

ಭಾರತೀಯ ಬ್ಯಾಂಕ್‌ಗಳ ವಿದೇಶಿ ಕಾರ್ಯನಿರ್ವಹಣೆಗಾಗಿ ಪರಿಷ್ಕೃತ ಕಣ್ಗಾವಲು ವ್ಯವಸ್ಥೆ ಸೇರಿದಂತೆ ಸೂಕ್ತ ನಿರ್ವಹಣಾ ಚೌಕಟ್ಟನ್ನು ನವೆಂಬರ್ ಅಂತ್ಯದೊಳಗೆ ಅಂತಿಮಗೊಳಿಸಲಾಗುವುದು ಎಂದು ಆರ್‌ಬಿಐನ ಮಧ್ಯಾವಧಿಯ ನೀತಿ ವಿಮರ್ಷೆಗಳು ಇಂದು ಘೋಷಿಸಿವೆ.

ಇದರೊಂದಿಗೆ, ವಿದೇಶಿ ನಿಯಂತ್ರಕರೊಂದಿಗೆ ಪರಿವೀಕ್ಷಣಾ ಸಹಕಾರಕ್ಕಾಗಿ ಅಪೆಕ್ಸ್ ಬ್ಯಾಂಕ್ ಆಂತರಿಕ ಕಾರ್ಯನಿರ್ವಹಣಾ ತಂಡವೊಂದನ್ನು ರಚಿಸಲಿದೆ. ಈ ಸಂಬಂಧ ಸಮಿತಿಯು ನವೆಂಬರ್ ಅಂತ್ಯದೊಳಗೆ ವರದಿಯನ್ನು ಸಲ್ಲಿಸಲಿದೆ ಎಂದು ಪಂಜಾಬ್ ನ್ಯಾಶನಲ್ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕ ಜೆ.ಎಂ.ಗಾರ್ಗ್ ಹೇಳಿದ್ದಾರೆ.

ಭಾರತೀಯ ಬ್ಯಾಂಕ್‌ಗಳು ಜಾಗತಿಕ ಹಣಕಾಸು ಪ್ರಕ್ಷುಬ್ಧತೆಯಿಂದ ಅತಿ ಹೆಚ್ಚು ಪ್ರಭಾವವನ್ನು ಹೊಂದಿಲ್ಲದಿದ್ದರೂ, ಅಪೆಕ್ಸ್ ಬ್ಯಾಂಕ್‌ನ ಈ ಸುರಕ್ಷತಾ ಕ್ರಮವು ಬ್ಯಾಂಕ್‌ಗಳ ಮೇಲಿನ ಈ ಪ್ರಭಾವವನ್ನು ಇನ್ನಷ್ಟು ತಗ್ಗಿಸಲಿದೆ ಎಂದು ಅವರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಾಲ ನೀತಿ ಅಂತಿಮ ನಿರ್ಧಾರವಲ್ಲ: ಚಿದಂಬರಂ
ರೂಪಾಯಿ ಮೌಲ್ಯ 50.15ಕ್ಕೆ ಇಳಿಕೆ
ಟಾಟಾ ಮೋಟಾರ್ಸ್‌: 400 ನೌಕರರಿಗೆ ಟಾಟಾ
ಹಣದುಬ್ಬರ ಇಳಿಕೆಗೊಳ್ಳುವ ವಿಶ್ವಾಸವಿದೆ:ಚಿದಂಬರಂ
ಹಣದುಬ್ಬರ: ಶೇ.11.07ಕ್ಕೆ ಇಳಿಕೆ
ಶೀಘ್ರವೇ ತೈಲ ಬೆಲೆ ಇಳಿಕೆ:ದೇವ್ರಾ