ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಶೇ.92.6 ಬ್ಯಾಂಕ್ ಠೇವಣಿಗಳು ಸುರಕ್ಷಿತ: ಸರಕಾರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶೇ.92.6 ಬ್ಯಾಂಕ್ ಠೇವಣಿಗಳು ಸುರಕ್ಷಿತ: ಸರಕಾರ
PTI
ಸುಮಾರು ಶೇ.92.6ರಷ್ಟು ಬ್ಯಾಂಕ್ ಠೇವಣಿಗಳು ಠೇವಣಿ, ವಿಮಾ ಮತ್ತು ಕ್ರೆಡಿಟ್ ಗ್ಯಾರಂಟಿ ಯೋಜನೆಯಡಿಯಲ್ಲಿ ಸುರಕ್ಷಿತವಾಗಿದೆ ಎಂದು ಸರಕಾರವು ಶನಿವಾರ ಸ್ಪಷ್ಟಪಡಿಸಿದೆ.

ಮಾರ್ಚ್ 2008ರ ಪ್ರಕಾರ, ಒಟ್ಟು ಠೇವಣಿ ಖಾತೆಗಳಲ್ಲಿ , ಸಂಪೂರ್ಣ ಸುರಕ್ಷಿತ ಉಳಿತಾಯ ಠೇವಣಿಯ ಪ್ರಮಾಣವು ಶೇ.92.6ರಷ್ಟಿದೆ ಎಂದು ರಾಜ್ಯ ಹಣಕಾಸು ಸಚಿವ ಪವನ್ ಕುಮಾರ್ ಬನ್ಸಾಲ್ ರಾಜ್ಯಸಭಾಗೆ ನೀಡಿರುವ ಲಿಖಿತ ಉತ್ತರದಲ್ಲಿ ಹೇಳಿದ್ದಾರೆ.

ಏನೇ ಆದರೂ, ಹಣಕಾಸು ವ್ಯವಸ್ಥೆಯಲ್ಲಿ ಠೇವಣಿ ದರವನ್ನು ರಕ್ಷಿಸಲು ವಿಶೇಷ ಕಾನೂನನ್ನು ರಚಿಸುವ ಸಾಧ್ಯತೆಯನ್ನು ಅವರು ತಳ್ಳಿಹಾಕಿದ್ದಾರೆ. ಠೇವಣಿ, ವಿಮಾ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೋರೇಶನ್(ಡಿಐಸಿಜಿಸಿ) ದೇಶದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ಸಣ್ಣ ಹೂಡಿಕೆದಾರರ ವಿಮಾ ಯೋಜನೆಯನ್ನು ವೃದ್ಧಿಸಲಿದೆ ಎಂದು ಹೇಳಿದ್ದಾರೆ.

ಠೇವಣಿ ವಿಮೆಯು ದೇಶದ ಎಲ್ಲಾ ಬ್ಯಾಂಕ್‌ಗಳಿಗೂ ಕಡ್ಡಾಯವಾಗಿದ್ದು, ಮತ್ತು ಠೇವಣಿ ವಿಮಾ ಯೋಜನೆಯು ದೇಶದಲ್ಲಿನ ಸ್ಥಳೀಯ ಬ್ಯಾಂಕ್, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್, ಸಹಕಾರ ಬ್ಯಾಂಕ್ ಮತ್ತು ಖಾಸಗಿ ಬ್ಯಾಂಕ್ ಸೇರಿದಂತೆ ಎಲ್ಲಾ ವಾಣಿಜ್ಯ ಬ್ಯಾಂಕ್‌ಗಳನ್ನು ಒಳಗೊಂಡಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಒಪಿಇಸಿಯಿಂದ ತೈಲ ಉತ್ಪಾದನೆ ಕಡಿತ
ಆರ್‌ಬಿಐನಿಂದ ಬ್ಯಾಂಕ್ ಕಾರ್ಯನಿರ್ವಹಣೆಯ ಅವಲೋಕನ
ಸಾಲ ನೀತಿ ಅಂತಿಮ ನಿರ್ಧಾರವಲ್ಲ: ಚಿದಂಬರಂ
ರೂಪಾಯಿ ಮೌಲ್ಯ 50.15ಕ್ಕೆ ಇಳಿಕೆ
ಟಾಟಾ ಮೋಟಾರ್ಸ್‌: 400 ನೌಕರರಿಗೆ ಟಾಟಾ
ಹಣದುಬ್ಬರ ಇಳಿಕೆಗೊಳ್ಳುವ ವಿಶ್ವಾಸವಿದೆ:ಚಿದಂಬರಂ