ಪ್ರಸಕ್ತ ಅಧ್ಯಯನ ನಡೆಸುತ್ತಿರುವ ಕಾಲೇಜು ವಿದ್ಯಾರ್ಥಿಗಳ ಮೇಲೂ ಜಾಗತಿಕ ಹಣಕಾಸು ಬಿಕ್ಕಟ್ಟಿನ ಬಿಸಿಯು ತಟ್ಟಿದ್ದು, ಹೆಚ್ಚಿನ ಕಂಪನಿಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ನೌಕರರಿಗಷ್ಟೇ ಪಿಂಕ್ ಸ್ಲಿಪ್ ನೀಡಿರುವುದಲ್ಲದೆ, ಆರು ತಿಂಗಳ ಹಿಂದೆ ಕ್ಯಾಂಪಸ್ ಆಯ್ಕೆಯಲ್ಲಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ ವಿದ್ಯಾರ್ಥಿಗಳಿಗೆ ಆಫರ್ ಲೆಟರ್ ಕಳುಹಿಸದೇ ಇರುವುದು ಕೂಡಾ ಕಾಲೇಜು ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಗಿದೆ.ಆರರಿಂದ ನಾಲ್ಕು ತಿಂಗಳ ಹಿಂದೆ ಕ್ಯಾಂಪಸ್ ಸಂದರ್ಶನದ ಮೂಲಕ ಆಯ್ಕೆಗೊಂಡ ಹೆಚ್ಚಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದ ಕಂಪನಿಗಳು ಇನ್ನೂ ಆಫರ್ ಲೆಟರ್ ಕಳುಹಿಸದೇ ಇದ್ದು, ಆಗಾಗಲೇ ಆರ್ಥಿಕ ಕುಸಿತವು ಎಲ್ಲೆಡೆ ಕೋಲಾಹಾಲವನ್ನೇ ಸೃಷ್ಟಿಸಿರುವುದರಿಂದ ಆಫರ್ ಲೆಟರ್ ತಮಗೆ ಬರದೇ ಇರಬಹುದು ಎಂಬ ಭೀತಿಯನ್ನು ಈ ವಿದ್ಯಾರ್ಥಿಗಳು ಹೊಂದಿದ್ದಾರೆ.ಈ ವರ್ಷದ ಕ್ಯಾಂಪಸ್ ಸಿಬ್ಬಂದಿ ನೇಮಕ ಪ್ರಮಾಣದಲ್ಲಿ ಕಳೆದ ವರ್ಷಕ್ಕಿಂತ ಇಳಿಕೆ ಉಂಟಾಗಿದ್ದರೂ, ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳ ನೇಮಕದ ಬದ್ಧತೆಯನ್ನು ತನ್ನ ಕಂಪನಿಯು ನಿಭಾಯಿಸಿದೆ ಎಂದು ಜೆನ್ಸರ್ ಟೆಕ್ನಾಲಜೀಸ್ ಆಂಡ್ ನಾಸ್ಕಾಂನ ಅಧ್ಯಕ್ಷ ಗಣೇಶ್ ನಟರಾಜನ್ ಹೇಳುತ್ತಾರೆ.ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡುವ ಭರವಸೆಯನ್ನು ಕಂಪನಿಗಳು ಪೂರೈಸುವ ಕುರಿತಾದ ಭೀತಿಯಿದ್ದರೂ, ಐಟಿ ಹೊರಗುತ್ತಿಗೆ ಕ್ಷೇತ್ರದಲ್ಲಿನ ಬೃಹತ್ ಕಂಪನಿಗಳು ತಮ್ಮ ಬದ್ಧತೆಯನ್ನು ಉಳಿಸಿಕೊಳ್ಳಲಿವೆ ಎಂಬ ವಿಶ್ವಾಸವನ್ನು ನಟರಾಜನ್ ವ್ಯಕ್ತಪಡಿಸಿದ್ದಾರೆ. |
|