ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಆರ್ಥಿಕ ಕುಸಿತ: 'ಕಾರ್ಪೋರೇಟ್ ಗಿಫ್ಟ್‌'ಗೆ ಕೊಕ್ !
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆರ್ಥಿಕ ಕುಸಿತ: 'ಕಾರ್ಪೋರೇಟ್ ಗಿಫ್ಟ್‌'ಗೆ ಕೊಕ್ !
PTI
ಆರ್ಥಿಕ ಕುಸಿತದ ಭೀತಿಯು ದೀಪಾವಳಿ ಉಡುಗೊರೆಗಳ ಮೇಲೂ ತಟ್ಟಿದ್ದು, ಜಾಗತಿಕ ಹಣಕಾಸು ಬಿಕ್ಕಟ್ಟಿನಿಂದಾಗಿ ಹೆಚ್ಟಿನ ಕಂಪನಿಗಳಿಗೆ ಈ ಬಾರಿ ಕಂಪನಿ ನೌಕರರಿಗೆ ದೀಪಾವಳಿ ಉಡುಗೊರೆ ನೀಡುವುದು ಅಸಾಧ್ಯವೆನಿಸಿದೆ.

ಪ್ರತಿವರ್ಷ ದೀಪಾವಳಿ ಹಬ್ಬದ ಸಮಯದಲ್ಲಿ ವಿಶೇಷವಾಗಿ ಗುಜರಾತಿನಲ್ಲಿ ' ಕಾರ್ಪೋರೇಟ್ ಗಿಫ್ಟ್'ಗಳಿಗೆ ತುಂಬಾ ಬೇಡಿಕೆಯಿರುತ್ತದೆ. ಆದರೆ, ಜಾಗತಿಕ ಹಣಕಾಸು ಪ್ರಕ್ಷುಬ್ಧತೆಯ ಬಿಸಿ ತಟ್ಟಿರುವ ಹೆಚ್ಚಿನ ಕಂಪನಿಗಳು ವೆಚ್ಚಕಡಿತದತ್ತ ದೃಷ್ಟಿ ಹಾಯಿಸಿದ್ದು, ದೀಪಾವಳಿ ಸಂದರ್ಭದಲ್ಲಿ ಸಿಬ್ಬಂದಿಗಳಿಗೆ ಪ್ರತಿವರ್ಷ ನೀಡುವಂತೆ ಈ ವರ್ಷ ಯಾವುದೇ ಉಡುಗೊರೆಗಳನ್ನು ನೀಡದಿರಲು ನಿರ್ಧರಿಸಿದೆ.

ಇದರ ಪ್ರಭಾವವು ವ್ಯಾಪಾರಿಗಳ ಮೇಲೆ ಬಿದ್ದಿದ್ದು, ಕಳೆದ ವರ್ಷಕ್ಕಿಂತ ಈ ವರ್ಷವು ವ್ಯಾಪಾರದಲ್ಲಿ ಶೇ.30ರಷ್ಟು ಇಳಿಕೆ ಉಂಟಾಗಿದೆ ಎಂದು ಹೆಚ್ಚಿನ ಅಂಗಡಿ ಮಾಲೀಕರು ಮತ್ತು ವ್ಯಾಪಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಈ ವರ್ಷ ಮಾರುಕಟ್ಟೆಯು ಕುಸಿತಗೊಂಡಿದ್ದು, ಕಂಪನಿಗಳು ನೀಡುವ ಕಾರ್ಪೋರೇಟ್ ಗಿಫ್ಟ್ ಆರ್ಡರ್‌ಗಳ ಪ್ರಮಾಣವು ಶೇ.30-40ರಷ್ಟು ಇಳಿಕೆಗೊಂಡಿದೆ ಎಂದು ಸಿಹಿತಿನಿಸು ಮತ್ತು ಉಡುಗೊರೆ ಮಳಿಗೆಯ ಮಾಲೀಕರೊಬ್ಬರು ಹೇಳುತ್ತಾರೆ.

ತಮ್ಮ ವ್ಯವಹಾರವನ್ನು ವೃದ್ಧಿಗೊಳಿಸು ಗ್ರಾಹಕರ ಆಕರ್ಷಣೆಗಾಗಿ ಹೆಚ್ಚಿನ ಶಾಪ್ ಮಾಲೀಕರು ಅನೇಕ ಹಬ್ಬದ ಕೊಡುಗೆಗಳನ್ನು ನೀಡುತ್ತಿದ್ದರೂ, ಅದರಿಂದ ಅಷ್ಟೊಂದು ಪ್ರಯೋಜನವೇನೂ ಆಗಿಲ್ಲ ಎಂಬುದಾಗಿ ಶಾಪ್ ಮಾಲೀಕರು ಬೇಸರ ವ್ಯಕ್ತಪಡಿಸುತ್ತಾರೆ.

ಇದರೊಂದಿಗೆ, ಶೇರು ಮಾರುಕಟ್ಟೆಯು 9000 ಗಡಿಗಿಂತ ಕೆಳಮಟ್ಟಕ್ಕೆ ಇಳಿದಿರುವುದರಿಂದ ಉಡುಗೊರೆಗಾಗಿ ಕೂಡಿಸಿಟ್ಟ ಹಣವು ನಷ್ಟವಾಗಿಯೂ ಹೋಗಿರುವ ಸಾಧ್ಯತೆ ಇದೆ ಎಂಬುದು ಹಲವರ ಅಭಿಪ್ರಾಯವಾಗಿದೆ.

ಭಾರತೀಯ ಕಾರ್ಪೋರೇಟ್‌ಗಳು ಹಬ್ಬದ ಉಡುಗೊರೆಗಾಗಿ 2006ರಲ್ಲಿ 13 ಶತಕೋಟಿ ವೆಚ್ಚ ಮಾಡಿದ್ದವು. 2007ರಲ್ಲಿ ಅದು 20 ಶತಕೋಟಿಗೆ ಏರಿಕೆಗೊಂಡಿತ್ತು. ಆದರೆ, ಪ್ರಸಕ್ತ ವರ್ಷದಲ್ಲಿ ಉಡುಗೊರೆಗಾಗಿ ಕಂಪನಿಯು ವ್ಯಯಿಸುವ ವೆಚ್ಚದಲ್ಲಿ ಐದರಿಂದ ಆರು ಶತಕೋಟಿಗಳಷ್ಟು ಇಳಿಕೆ ಉಂಟಾಗಲಿದೆ ಎಂಬುದಾಗಿ ಅಸೋಚಾಂ ವರದಿಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಾಲೇಜು ವಿದ್ಯಾರ್ಥಿಗಳಿಗೂ 'ಪಿಂಕ್ ಸ್ಲಿಪ್' ಕಾಟ?
ಭಾರತ ಆರ್ಥಿಕ ಕುಸಿತದ ಹಾದಿಯಲ್ಲಿಲ್ಲ:ಸುಬ್ಬರಾವ್
5000 ಗಡಿಗೆ ಶೇರುಪೇಟೆ ಕುಸಿತ ಸಂಭವ
ಶೇ.92.6 ಬ್ಯಾಂಕ್ ಠೇವಣಿಗಳು ಸುರಕ್ಷಿತ: ಸರಕಾರ
ಒಪಿಇಸಿಯಿಂದ ತೈಲ ಉತ್ಪಾದನೆ ಕಡಿತ
ಆರ್‌ಬಿಐನಿಂದ ಬ್ಯಾಂಕ್ ಕಾರ್ಯನಿರ್ವಹಣೆಯ ಅವಲೋಕನ