ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ನ್ಯಾನೋದ ಇನ್ನೊಂದು ಘಟಕ ಧಾರವಾಡದಲ್ಲಿ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನ್ಯಾನೋದ ಇನ್ನೊಂದು ಘಟಕ ಧಾರವಾಡದಲ್ಲಿ?
PTI
ಪಶ್ಚಿಮ ಬಂಗಾಳದಿಂದ ಹೊರನಡೆದ ನ್ಯಾನೋ ಕಾರು ಉತ್ಪಾದನಾ ಘಟಕ ಗುಜರಾತ್‌ನತ್ತ ಮುಖ ಮಾಡುವ ಮೂಲಕ ಕರ್ನಾಟಕಕ್ಕೆ ಟಾಟಾ ಕಂಪನಿ ನಿರಾಸೆ ಮೂಡಿಸಿತ್ತು. ಆದರೆ ಇದೀಗ ಟಾಟಾ ಕರ್ನಾಟಕ್ಕೆ ಹೊಸದೊಂದು ಭರವಸೆ ನೀಡಿದೆ.

ನ್ಯಾನೋ ಘಟಕದ ಕುರಿತು ಗುಜರಾತ್ ಸರ್ಕಾರದ ಜೊತೆ ಮೊದಲೇ ಮಾತುಕತೆ ನಡೆದಿದ್ದರಿಂದ ಕರ್ನಾಟಕಕ್ಕೆ ಟಾಟಾ ಕಂಪೆನಿ ಬರಲಿಲ್ಲ. ಆದರೂ, ನ್ಯಾನೋದ 2ನೇ ಘಟಕವನ್ನು ಧಾರವಾಡದಲ್ಲೇ ಆರಂಭಿಸುತ್ತೇವೆ ಎಂದು ಟಾಟಾ ಸಂಸ್ಥೆ ಭರವಸೆ ನೀಡಿರುವುದಾಗಿ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ತಿಳಿಸಿದ್ದಾರೆ.

ಟಾಟಾದ ಉಕ್ಕು ಘಟಕಕ್ಕೆ ಹಾವೇರಿಯಲ್ಲಿ ಜಾಗ ಸೇರಿದಂತೆ ಎಲ್ಲಾ ಸೌಲಭ್ಯ ಒದಗಿಸಲಾಗಿದೆ ಎಂದು ಸಚಿವರು ಟಾಟಾದ ಯಾವುದೇ ಘಟಕಕ್ಕೆ ಬೇಕಾದ ಎಲ್ಲಾ ಸವಲತ್ತು ಒದಗಿಸಲು ನಾವು ಸಿದ್ಧರಿದ್ದೇವೆ ಎಂದು ಈಗಾಗಲೇ ಸ್ಪಷ್ಟಪಡಿಸಿರುವುದಾಗಿ ತಿಳಿಸಿದ್ದಾರೆ.

ಅಲ್ಲದೆ, ಧಾರವಾಡಕ್ಕೆ ಬಜಾಜ್ ಮತ್ತು ಹೊಂಡಾ ಕಂಪೆನಿಗಳ ಬಂಡವಾಳ ತರುವ ಕುರಿತು ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿದ್ದೇವೆ ಎಂದೂ ಅವರು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹಣಕಾಸು ಬಿಕ್ಕಟ್ಟಿಗೆ ಕ್ರಮ: ಪ್ರಧಾನಿ
ಆರ್ಥಿಕ ಕುಸಿತ: 'ಕಾರ್ಪೋರೇಟ್ ಗಿಫ್ಟ್‌'ಗೆ ಕೊಕ್ !
ಕಾಲೇಜು ವಿದ್ಯಾರ್ಥಿಗಳಿಗೂ 'ಪಿಂಕ್ ಸ್ಲಿಪ್' ಕಾಟ?
ಭಾರತ ಆರ್ಥಿಕ ಕುಸಿತದ ಹಾದಿಯಲ್ಲಿಲ್ಲ:ಸುಬ್ಬರಾವ್
5000 ಗಡಿಗೆ ಶೇರುಪೇಟೆ ಕುಸಿತ ಸಂಭವ
ಶೇ.92.6 ಬ್ಯಾಂಕ್ ಠೇವಣಿಗಳು ಸುರಕ್ಷಿತ: ಸರಕಾರ