ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ನ್ಯಾನೋ ಡೀಸೇಲ್ ಆವೃತ್ತಿ ಬಿಡುಗಡೆ ವಿಳಂಬ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನ್ಯಾನೋ ಡೀಸೇಲ್ ಆವೃತ್ತಿ ಬಿಡುಗಡೆ ವಿಳಂಬ
PTI
ಬೇಡಿಕೆಯಲ್ಲಿನ ಕುಂಠಿತದಿಂದಾಗಿ ಡೀಸೇಲ್ ನ್ಯಾನೋ ಬಿಡುಗಡೆಯಲ್ಲಿ ವಿಳಂಬವಾಗಲಿದೆ ಎಂದು ಟಾಟಾ ಕಂಪನಿ ಮೂಲಗಳು ತಿಳಿಸಿವೆ.

2009ರ ವೇಳೆಗೆ ನ್ಯಾನೋ ಡೀಸೇಲ್ ಆವೃತ್ತಿಯನ್ನು ಬಿಡುಗಡೆಗೊಳಿಸುವುದಾಗಿ ಟಾಟಾ ಮೋಟಾರ್ಸ್ ಈ ಮೊದಲು ಘೋಷಿಸಿತ್ತು. ಆದರೆ, ಮುಂದಿನ ವರ್ಷದ ಮೊದಲ ಮೂರು ತಿಂಗಳುಗಳಲ್ಲಿ ನ್ಯಾನೋ ಪೆಟ್ರೋಲ್ ಆವೃತ್ತಿಯ ಕಾರನ್ನು ಟಾಟಾ ಮೋಟಾರ್ಸ್ ಬಿಡುಗಡೆಗೊಳಿಸಲಿದೆ ಎಂದು ಆಟೋ ಉದ್ಯಮ ಮೂಲಗಳು ಹೇಳಿವೆ.

ನ್ಯಾನೋ ಪೆಟ್ರೋಲ್ ಆವೃತ್ತಿಯ ಕಾರನ್ನು ಟಾಟಾ ಮೋಟಾರ್ಸ್ ಮೊದಲಿಗೆ ಬಿಡುಗಡೆ ಮಾಡಲಿರುವುದಾಗಿ ಕಂಪನಿ ವಕ್ತಾರರು ತಿಳಿಸಿದ್ದಾರೆ. ಸಿಎನ್‌ಜಿ, ಡೀಸೇಲ್ ಮುಂತಾದ ಇಂಜಿನ್ ಆಯ್ಕೆಗಳನ್ನು ನ್ಯಾನೋ ನೀಡಲಿದೆ ಎಂದು ಆಟೋ ಎಕ್ಸ್ಪೋದಲ್ಲಿ ರತನ್ ಟಾಟಾ ತಿಳಿಸಿದ್ದರು. ಈ ಯೋಜನೆಯಿಂದ ಟಾಟಾ ಹಿಂದಕ್ಕೆ ಸರಿಯುವುದಿಲ್ಲ. ಆದರೆ ಸದ್ಯದ ಮಟ್ಟಿಗೆ ಟಾಟಾ ಮೋಟಾರ್ಸ್ ನ್ಯಾನೋ ಪೆಟ್ರೋಲ್ ಆವೃತ್ತಿಯನ್ನು ಬಿಡುಗಡೆ ಮಾಡಲಿದೆ ಎಂದು ವಕ್ತಾರರು ಸ್ಪಷ್ಟಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರೂಪಾಯಿ ಮೌಲ್ಯ 20 ಪೈಸೆಗಳಷ್ಟು ಕುಸಿತ
ನ್ಯಾನೋದ ಇನ್ನೊಂದು ಘಟಕ ಧಾರವಾಡದಲ್ಲಿ?
ಹಣಕಾಸು ಬಿಕ್ಕಟ್ಟಿಗೆ ಕ್ರಮ: ಪ್ರಧಾನಿ
ಆರ್ಥಿಕ ಕುಸಿತ: 'ಕಾರ್ಪೋರೇಟ್ ಗಿಫ್ಟ್‌'ಗೆ ಕೊಕ್ !
ಕಾಲೇಜು ವಿದ್ಯಾರ್ಥಿಗಳಿಗೂ 'ಪಿಂಕ್ ಸ್ಲಿಪ್' ಕಾಟ?
ಭಾರತ ಆರ್ಥಿಕ ಕುಸಿತದ ಹಾದಿಯಲ್ಲಿಲ್ಲ:ಸುಬ್ಬರಾವ್