ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಏರ್‌ಲೈನ್ಸ್‌ಗಳಿಗೆ 5.2 ಬಿಲಿಯನ್ ಡಾಲರ್ ನಷ್ಟ ಸಂಭವ: ಐಎಟಿಎ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಏರ್‌ಲೈನ್ಸ್‌ಗಳಿಗೆ 5.2 ಬಿಲಿಯನ್ ಡಾಲರ್ ನಷ್ಟ ಸಂಭವ: ಐಎಟಿಎ
PTI
ಜಾಗತಿಕ ಕಚ್ಚಾತೈಲ ಬೆಲೆಯಲ್ಲಿನ ಇಳಿಕೆಯ ಹೊರತಾಗಿಯೂ, ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಉಂಟಾದ ಹಿನ್ನೆಲೆಯಲ್ಲಿ, ಪ್ರಸಕ್ತ ವರ್ಷದಲ್ಲಿ ಅಂತಾರಾಷ್ಟ್ರೀಯ ವಿಮಾನಯಾನ ಉದ್ಯಮಕ್ಕೆ 5.2 ಶತಕೋಟಿ ಡಾಲರ್‌ಗಿಂತಲೂ ಹೆಚ್ಚು ಪ್ರಮಾಣದ ನಷ್ಟ ಉಂಟಾಗುವ ನಿರೀಕ್ಷೆ ಇದೆ.

ಭಾರತ, ಚೀನಾ ಸೇರಿದಂತೆ ಏಶಿಯಾ ಫೆಸಿಫಿಕ್ ವಲಯದ ಏರ್‌ಲೈನ್ಸ್‌ಗಳ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.6.8ರಷ್ಟು ಇಳಿಕೆ ಉಂಟಾಗಿದೆ ಎಂದು ಅಂತಾರಾಷ್ಟ್ರೀಯ ವಿಮಾನ ಸಾರಿಗೆ ಸಂಸ್ಥೆ(ಐಎಟಿಎ) ಬಿಡುಗಡೆಗೊಳಿಸಿದ ಅಂಕಿಅಂಶಗಳು ತಿಳಿಸಿವೆ.

ವಿಮಾನ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಉಂಟಾಗಿದ್ದು, 2003ರಿಂದ ಇಷ್ಟೊಂದು ಪ್ರಮಾಣದ ಇಳಿಕೆಯನ್ನು ಕಂಡಿರಲಿಲ್ಲ ಎಂದು ಐಎಟಿಎ ಮುಖ್ಯಸ್ಥ ಗಯವೋನಿ ಬಿಸಿಗ್ನಾನಿ ತಿಳಿಸಿದ್ದಾರೆ.

ಜಾಗತಿಕ ಕಚ್ಚಾತೈಲ ಬೆಲೆಯಲ್ಲಿ ಇಳಿಕೆ ಉಂಟಾಗಿರುವುದು ಉತ್ತಮ ವಿಚಾರವೇ ಆಗಿದೆ. ಇಲ್ಲವಾದಲ್ಲಿ ಏರ್‌ಲೈನ್ಸ್ ಸಂಸ್ಥೆಗಳ ನಷ್ಟದ ಪ್ರಮಾಣವು ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇತ್ತು. ಅದಾಗ್ಯೂ, ಹೆಚ್ಚಿನ ಎಲ್ಲಾ ವಲಯದ ವಿಮಾನಯಾನ ಸಂಸ್ಥೆಗಳ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆ ಉಂಟಾಗಿದೆ ಎಂದು ಅವರು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನ್ಯಾನೋ ಡೀಸೇಲ್ ಆವೃತ್ತಿ ಬಿಡುಗಡೆ ವಿಳಂಬ
ರೂಪಾಯಿ ಮೌಲ್ಯ 20 ಪೈಸೆಗಳಷ್ಟು ಕುಸಿತ
ನ್ಯಾನೋದ ಇನ್ನೊಂದು ಘಟಕ ಧಾರವಾಡದಲ್ಲಿ?
ಹಣಕಾಸು ಬಿಕ್ಕಟ್ಟಿಗೆ ಕ್ರಮ: ಪ್ರಧಾನಿ
ಆರ್ಥಿಕ ಕುಸಿತ: 'ಕಾರ್ಪೋರೇಟ್ ಗಿಫ್ಟ್‌'ಗೆ ಕೊಕ್ !
ಕಾಲೇಜು ವಿದ್ಯಾರ್ಥಿಗಳಿಗೂ 'ಪಿಂಕ್ ಸ್ಲಿಪ್' ಕಾಟ?