ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಯುರೋಪ್, ಏಶಿಯಾದತ್ತ ಐಟಿ ಕಂಪನಿಗಳ ದೃಷ್ಟಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯುರೋಪ್, ಏಶಿಯಾದತ್ತ ಐಟಿ ಕಂಪನಿಗಳ ದೃಷ್ಟಿ
ಅಮೆರಿಕ ಆರ್ಥಿಕತೆಯು ಮಂಕು ಹಿಡಿದಿರುವುದರೊಂದಿಗೆ ಮತ್ತು ಹೆಚ್ಚಿನ ಕಂಪನಿಗಳು ಐಟಿ ವೆಚ್ಚವನ್ನು ಕಡಿತಗೊಳಿಸುತ್ತಿರುವ ಹಿನ್ನೆಲೆಯಲ್ಲಿ, ಪ್ರಮುಖ ಭಾರತೀಯ ಐಟಿ ಕಂಪನಿಗಳು ಯುರೋಪ್, ಪಶ್ಚಿಮ ಏಶಿಯಾ, ಲ್ಯಾಟಿನ್ ಅಮೆರಿಕ ಮುಂತಾದ ನೂತನ ಪ್ರದೇಶಗಳತ್ತ ದೃಷ್ಟಿ ಹಾಯಿಸಿವೆ.

ಆದರೆ, ಭಾಷೆ, ಕಾರ್ಮಿಕ ನೀತಿ, ಮುಂತಾದ ಅನೇಕ ವಿಚಾರಗಳಲ್ಲಿ ಭಿನ್ನತೆ ಕಂಡುಬರುವುದರಿಂದ ಈ ಪ್ರದೇಶಗಳಲ್ಲಿ ವ್ಯವಹಾರ ನಡೆಸಲು ಭಾರತೀಯ ಕಂಪನಿಗಳಿಗೆ ಕಷ್ಟಕರವಾಗುವ ಸಾಧ್ಯತೆ ಇದ್ದು, ಇದು ಕಂಪನಿಯ ಲಾಭಾಂಶದ ಮೇಲೆ ಪರಿಣಾಮ ಬೀರಲಿದೆ ಎಂದು ಉದ್ಯಮ ವಿಶ್ಲೇಷಕರು ಹೇಳುತ್ತಾರೆ.

ಅಮೆರಿಕ ಅವಲಂಬನೆಯನ್ನು ಶೇ.40ರಿಂದ ಶೇ.60ರಷ್ಟು ಕಡಿತಗೊಳಿಸಲು ಇನ್ಫೋಸಿಸ್ ನಿರ್ಧರಿಸಿರುವುದಾಗಿ ಈ ವರ್ಷದ ಪ್ರಾರಂಭದಲ್ಲಿ ಇನ್ಫೋಸಿಸ್ ಸಿಇಒ ಗೋಪಾಲಕೃಷ್ಣನ್ ಹೇಳಿದ್ದರು. ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸದಲ್ಲಿ ಇನ್ಫೋಸಿಸ್‌ನ ಯುರೋಪ್ ಆದಾಯವು ಶೇ.28.1ರಷ್ಟಿದ್ದು, ಇದರಲ್ಲಿ ಉತ್ತರ ಅಮೆರಿಕದ ಭಾಗವು ಶೇ.61.5ರಷ್ಟಿತ್ತು.

ಇನ್ಫೋಸಿಸ್‌ನಂತೆ, ಟಿಸಿಎಸ್, ಎಚ್‌ಸಿಎಲ್, ವಿಪ್ರೋ, ಸತ್ಯಂ ಮುಂತಾದ ಕಂಪನಿಗಳು ಅಮೆರಿಕ ಹೊರತಾಗಿ ಇತರ ಪ್ರದೇಶಗಳಾದ ಆಸ್ಟ್ರೇಲಿಯಾ, ಪಶ್ಚಿಮ ಏಶಿಯಾ, ಏಶಿಯಾ ಪೆಸಿಫಿಕ್ ಮುಂತಾದ ಕಡೆಗಳಲ್ಲಿ ಬಂಡವಾಳ ಹೂಡಲು ಆಸಕ್ತಿ ಹೊಂದಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಏರ್‌ಲೈನ್ಸ್‌ಗಳಿಗೆ 5.2 ಬಿಲಿಯನ್ ಡಾಲರ್ ನಷ್ಟ ಸಂಭವ: ಐಎಟಿಎ
ನ್ಯಾನೋ ಡೀಸೇಲ್ ಆವೃತ್ತಿ ಬಿಡುಗಡೆ ವಿಳಂಬ
ರೂಪಾಯಿ ಮೌಲ್ಯ 20 ಪೈಸೆಗಳಷ್ಟು ಕುಸಿತ
ನ್ಯಾನೋದ ಇನ್ನೊಂದು ಘಟಕ ಧಾರವಾಡದಲ್ಲಿ?
ಹಣಕಾಸು ಬಿಕ್ಕಟ್ಟಿಗೆ ಕ್ರಮ: ಪ್ರಧಾನಿ
ಆರ್ಥಿಕ ಕುಸಿತ: 'ಕಾರ್ಪೋರೇಟ್ ಗಿಫ್ಟ್‌'ಗೆ ಕೊಕ್ !