ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಎಲ್‌ಜಿ ಉತ್ಪನ್ನಗಳ ಬೆಲೆಯಲ್ಲಿ ಹೆಚ್ಚಳ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಲ್‌ಜಿ ಉತ್ಪನ್ನಗಳ ಬೆಲೆಯಲ್ಲಿ ಹೆಚ್ಚಳ
ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಇಳಿಕೆಯಿಂದಾಗಿ ಉಂಟಾದ ನಷ್ಟವನ್ನು ಸರಿದೂಗಿಸುವ ನಿಟ್ಟಿನಲ್ಲಿ, ಪ್ರಮುಖ ಎಲೆಕ್ಟ್ರಾನಿಕ್ ಸಂಸ್ಥೆ ಎಲ್‌ಜಿ ಎಲೆಕ್ಟ್ರಾನಿಕ್ಸ್ ಇಂಡಿಯಾ ಎಲ್ಲಾ ವರ್ಗದ ಉತ್ಪನ್ನಗಳ ಬೆಲೆಯನ್ನು ನವೆಂಬರ್ ಒಂದರಿಂದ ಹೆಚ್ಚಳಗೊಳಿಸಲು ನಿರ್ಧರಿಸಿದೆ.

ರೂಪಾಯಿ ಮೌಲ್ಯ ಇಳಿಕೆಯಿಂದಾಗಿ ಕಂಪನಿಯು ನಷ್ಟದ ಹಾದಿಯಲ್ಲಿದ್ದು, ಈ ನಿಟ್ಟಿನಲ್ಲಿ ಕಂಪನಿಯು ತನ್ನ ಎಲ್ಲಾ ವಿಭಾಗದ ಉತ್ಪನ್ನಗಳ ಬೆಲೆಯನ್ನು ನವೆಂಬರ್ 1 ರಿಂದ ಶೇ.ಐದರಷ್ಟು ಹೆಚ್ಚಿಸಲಾಗುವುದು ಎಂದು ಎಲ್‌ಜಿ ಎಲೆಕ್ಟ್ರಾನಿಕ್ಸ್ ಇಂಡಿಯಾದ ಮುಖ್ಯಸ್ಥ ಅಮಿತಾಬ್ ತಿವಾರಿ ತಿಳಿಸಿದ್ದಾರೆ.

ಸಿಟಿವಿ ಬೆಲೆಯನ್ನು ಶೇ.3.5ರಷ್ಟು, ವಾಷಿಂಗ್ ಮೆಷಿನ್, ರೆಫ್ರಿಜರೇಟರ್ ಶೇ.4ರಷ್ಟು ಕಂಪನಿಯು ಏರಿಸಲಿದ್ದು, ಆದರೆ, ಎಲ್‌ಸಿಡಿ ಬೆಲೆಯಲ್ಲಿ ಯಾವುದೇ ಬದಲಾವಣೆಯನ್ನು ಉಂಟುಮಾಡುವುದಿಲ್ಲ ಎಂದು ತಿವಾರಿ ಹೇಳಿದ್ದಾರೆ.

ಈ ನಡುವೆ, ಕಂಪನಿಯು ತನ್ನ ಆರ್ ಆಂಡ್ ಡಿ ಹಾಗೂ ಸಿಬ್ಬಂದಿ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ 2009ರೊಳಗೆ ಭಾರತದಲ್ಲಿ 50 ದಶಲಕ್ಷ ಡಾಲರ್ ಬಂಡವಾಳ ಹೂಡುವ ಯೋಜನೆಯನ್ನು ಹೊಂದಿದೆ ಎಂದು ಎಲ್‌ಜಿಯು ಘೋಷಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಚ್ಚಾತೈಲ ಬೆಲೆ 62 ಡಾಲರ್‌ಗೆ ಕುಸಿತ
ಯುರೋಪ್, ಏಶಿಯಾದತ್ತ ಐಟಿ ಕಂಪನಿಗಳ ದೃಷ್ಟಿ
ಏರ್‌ಲೈನ್ಸ್‌ಗಳಿಗೆ 5.2 ಬಿಲಿಯನ್ ಡಾಲರ್ ನಷ್ಟ ಸಂಭವ: ಐಎಟಿಎ
ನ್ಯಾನೋ ಡೀಸೇಲ್ ಆವೃತ್ತಿ ಬಿಡುಗಡೆ ವಿಳಂಬ
ರೂಪಾಯಿ ಮೌಲ್ಯ 20 ಪೈಸೆಗಳಷ್ಟು ಕುಸಿತ
ನ್ಯಾನೋದ ಇನ್ನೊಂದು ಘಟಕ ಧಾರವಾಡದಲ್ಲಿ?