ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ತೈಲ ಬೆಲೆ ಇಳಿಕೆ: ಲಾಭದತ್ತ ತೈಲ ಮಾರಾಟ ಕಂಪನಿಗಳು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತೈಲ ಬೆಲೆ ಇಳಿಕೆ: ಲಾಭದತ್ತ ತೈಲ ಮಾರಾಟ ಕಂಪನಿಗಳು
PTI
ಜಾಗತಿಕ ಕಚ್ಚಾತೈಲ ಬೆಲೆಯು ಬ್ಯಾರಲ್‌ಗೆ 60 ಡಾಲರ್‌ ಸಮೀಪಕ್ಕೆ ತಲುಪಿರುವ ಹಿನ್ನೆಲೆಯಲ್ಲಿ, ಡೀಸೇಲ್ ಮತ್ತು ಅಡುಗೆ ಅನಿಲ ಹೊರತಾಗಿ, ರಾಜ್ಯ ನಿಯಂತ್ರಿತ ತೈಲ ಮಾರಾಟ ಕಂಪನಿಗಳು ಪೆಟ್ರೋಲ್ ಮಾರಾಟದಲ್ಲಿ ಲಾಭ ಗಳಿಸಲು ಪ್ರಾರಂಭಿಸಿವೆ.

ಏನೇ ಆದರೂ, ಇಂಧನ ಬೆಲೆಯನ್ನು ಇಳಿಸುವ ಸಾಧ್ಯತೆಯನ್ನು ಸರಕಾರವು ತಳ್ಳಿಹಾಕಿದ್ದು, ತೈಲ ಬೆಲೆಯು ಕನಿಷ್ಟ ಪಕ್ಷ ಒಂದು ತಿಂಗಳವರೆಗೂ ಇದೇ ಮಟ್ಟದಲ್ಲಿದ್ದರೆ ನಂತರ ತೈಲ ಬೆಲೆ ಇಳಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ತೈಲ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಎಸ್.ಸುಂದರೇಶನ್ ಹೇಳಿದ್ದಾರೆ.

ಮುಂದಿನ ತಿಂಗಳು ನಾಲ್ಕು ರಾಜ್ಯಗಳಲ್ಲಿ ಚುನಾವಣೆಯು ನಿಗದಿಯಾಗಿರುವ ಹಿನ್ನೆಲೆಯಲ್ಲಿ ಇಂಧನ ಬೆಲೆ ಇಳಿಸುವಂತೆ ರಾಜಕೀಯ ಪಕ್ಷಗಳ ನಡುವಿನ ಒತ್ತಡವು ಹೆಚ್ಚಳವಾಗುವ ಸಂಭವವಿದೆ.

ಡಾಲರ್ ವಿರುದ್ಧದ ರೂಪಾಯಿ ಮೌಲ್ಯ ಇಳಿಕೆಯು ಪೂರಕ ಪೆಟ್ರೋಲ್ ಮಾರಾಟದ ಬ್ರೇಕ್ ಈವನ್ ಅಂಶವನ್ನು ಪ್ರತಿ ಬ್ಯಾರಲ್‌ಗೆ 61 ಡಾಲರ್‌ನಿಂದ 55 ಡಾಲರ್‌ಗೆ ಇಳಿಕೆಗೊಳಿಸಿದೆ ಎಂದು ಸಚಿವಾಲಯ, ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೋರೇಶನ್, ಭಾರತ್ ಪೆಟ್ರೋಲಿಯಂ ಕಾರ್ಪೋರೇಶನ್ ಮತ್ತು ಹಿಂದೂಸ್ಥಾನ್ ಪೆಟ್ರೋಲಿಯಂ ಹೇಳಿವೆ.

ಇಂದಿನ ವಹಿವಾಟಿನಲ್ಲಿ ರೂಪಾಯಿ ಮೌಲ್ಯವು ಡಾಲರ್ ವಿರುದ್ಧ ಶೇ.6.65ರಷ್ಟು ಇಳಿಕೆಗೊಂಡಿದ್ದು, ಫಾರೆಕ್ಸ್ ಮಾರುಕಟ್ಟೆಯಲ್ಲಿ 50.09ಕ್ಕೆ ವಹಿವಾಟು ನಡೆಸುತ್ತಿದೆ. ಸೆಪ್ಟೆಂಬರ್ ತಿಂಗಳಿನಿಂದ ರೂಪಾಯಿ ಮೌಲ್ಯವು ಡಾಲರ್ ವಿರುದ್ಧ ಸುಮಾರು ಶೇ.13.3ರಷ್ಟು ಇಳಿಕೆಗೊಂಡಿದೆ.

ಕಚ್ಚಾತೈಲ ಬೆಲೆಯು ಕಳೆದ ಮೂರು ತಿಂಗಳುಗಳಲ್ಲಿ ಸುಮಾರು ಶೇ.60ರಷ್ಟು ಇಳಿಕೆಗೊಂಡಿದ್ದು, ತೈಲ ಕಂಪನಿಗಳು ಪೆಟ್ರೋಲ್, ಡೀಸೇಲ್, ಅಡುಗೆ ಅನಿಲವನ್ನು ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ವೆಚ್ಚದಲ್ಲಿ ಮಾರಾಟ ಮಾಡುತ್ತಿದ್ದರಿಂದ ತೈಲ ಕಂಪನಿಗಳಿಗೆ ಉಂಟಾಗುತ್ತಿದ್ದ ನಷ್ಟವನ್ನು ತಗ್ಗಿಸಲು ಇದು ಸಹಾಯಕವಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಎಲ್‌ಜಿ ಉತ್ಪನ್ನಗಳ ಬೆಲೆಯಲ್ಲಿ ಹೆಚ್ಚಳ
ಕಚ್ಚಾತೈಲ ಬೆಲೆ 62 ಡಾಲರ್‌ಗೆ ಕುಸಿತ
ಯುರೋಪ್, ಏಶಿಯಾದತ್ತ ಐಟಿ ಕಂಪನಿಗಳ ದೃಷ್ಟಿ
ಏರ್‌ಲೈನ್ಸ್‌ಗಳಿಗೆ 5.2 ಬಿಲಿಯನ್ ಡಾಲರ್ ನಷ್ಟ ಸಂಭವ: ಐಎಟಿಎ
ನ್ಯಾನೋ ಡೀಸೇಲ್ ಆವೃತ್ತಿ ಬಿಡುಗಡೆ ವಿಳಂಬ
ರೂಪಾಯಿ ಮೌಲ್ಯ 20 ಪೈಸೆಗಳಷ್ಟು ಕುಸಿತ