ಪ್ರಸಕ್ತ ಹಣಕಾಸು ಪರಿಸ್ಥಿತಿಯ ಕುರಿತಾಗಿ ಮಾತುಕತೆ ನಡೆಸಲು ಮತ್ತು ಹಣಕಾಸು ಬಿಕ್ಕಟ್ಟನ್ನು ಎದುರಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ಹಣಕಾಸು ಸಚಿವ ಪಿ.ಚಿದಂಬರಂ ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಸೇರಿದಂತೆ ಪ್ರಮುಖ ನಿಯಂತ್ರಕರು ಮತ್ತು ನೀತಿ ನಿರ್ಮಾಪಕರೊಂದಿಗೆ ಬುಧವಾರ ಸಭೆ ನಡೆಸಿದರು.ಹಣಕಾಸು ಸಚಿವರ ನಾರ್ತ್ ಬ್ಲಾಕ್ ಕಚೇರಿಯಲ್ಲಿ ನಡೆದ ಈ ಸಭೆಯಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್ ರಾಜ್ಯಪಾಲ ಡಿ.ಸುಬ್ಬರಾವ್, ಸೆಬಿ ಮುಖ್ಯಸ್ಥ ಸಿ.ಬಿ.ಬಾವೆ, ಭಾರತೀಯ ರಿಸರ್ವ್ ಬ್ಯಾಂಕ್ ಉಪ ರಾಜ್ಯಪಾಲ ರಾಕೇಶ್ ಮೋಹನ್ ಮತ್ತು ಮಾಜಿ ಆರ್‌ಬಿಐ ರಾಜ್ಯಪಾಲ ಸಿ.ರಂಗರಾಜನ್ ಮತ್ತು ಇತರರು ಪಾಲ್ಗೊಂಡಿದ್ದರು.ಆರ್ಥಿಕತೆಯನ್ನು ಸ್ಥಿರತೆಗೊಳಿಸಲು ಅಗತ್ಯವಿದ್ದಲ್ಲಿ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಭೆಯಲ್ಲಿ ಸರಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಪುನರುಚ್ಛರಿಸಿದೆ.ಕೇವಲ ಸಾಂಪ್ರಾದಾಯಿಕ ವಿಧಾನಗಳನ್ನು ಅವಲಂಬಿಸಲು ಸಾಧ್ಯವಿಲ್ಲದ ಕಾರಣ, ಸಾಂಪ್ರಾದಾಯಿಕ ಮತ್ತು ಅಸಾಂಪ್ರಾದಾಯಿಕ ವಿಧಾನಗಳ ನಿಯೋಜನೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಮುಂದುವರಿಸಲಿದೆ ಎಂದು ಕೇಂದ್ರ ಬ್ಯಾಂಕ್ ಮಧ್ಯಾವಧಿ ಸಾಲ ನೀತಿ ಘೋಷಿಸಿದ ವೇಳೆ ಹಣಕಾಸು ಸಚಿವರು ಹೇಳಿದ್ದರು. |
|