ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ತೈಲ ಬೆಲೆ ಇಳಿಕೆಯಿಲ್ಲ: ಸರಕಾರ ಸ್ಪಷ್ಟನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತೈಲ ಬೆಲೆ ಇಳಿಕೆಯಿಲ್ಲ: ಸರಕಾರ ಸ್ಪಷ್ಟನೆ
ತೈಲ ಬೆಲೆ ಇಳಿಸುವ ಯಾವುದೇ ಪ್ರಸ್ತಾಪವನ್ನು ಸದ್ಯಕ್ಕೆ ಸರಕಾರವು ಹೊಂದಿಲ್ಲ ಎಂದು ಪೆಟ್ರೋಲಿಯಂ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಎಸ್.ಸುಂದರೇಶನ್ ಬುಧವಾರ ಸ್ಪಷ್ಟಪಡಿಸಿದ್ದಾರೆ.

ಇಂಧನ ಬೆಲೆ ಇಳಿಕೆಯ ಕುರಿತಾಗಿ ನಿರ್ಧಾರ ಮಾಡಲು ಇನ್ನೂ ಕೆಲವು ವಾರಗಳ ಕಾಲ ಪರಿಸ್ಥಿತಿಯ ಅವಲೋಕನ ನಡೆಸಲಾಗುವುದು. ತೈಲ ಬೆಲೆ ಇಳಿಕೆಯು ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಸ್ಥಿರತೆಯನ್ನು ಅವಲಂಬಿಸಿರುತ್ತದೆ ಎಂದು ಸುಂದರೇಶನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕಚ್ಚಾತೈಲ ಬೆಲೆಯು ಬ್ಯಾರಲ್‌ಗೆ 57 ಡಾಲರ್‌ಗೆ ಇಳಿಕೆಗೊಂಡಲ್ಲಿ ದೇಶೀಯ ತೈಲ ಬೆಲೆ ಇಳಿಸುವ ಬಗ್ಗೆ ಸರಕಾರವು ಚಿಂತನೆ ನಡೆಸಲಿದೆ ಎಂದು ಈ ಮೊದಲು ಸಚಿವಾಲಯವು ತಿಳಿಸಿತ್ತು.

ಇಂದು ಏಶಿಯನ್ ಮಾರುಕಟ್ಟೆಯಲ್ಲಿ ವಿಶ್ವ ತೈಲ ಬೆಲೆಯು 1.99 ಡಾಲರ್‌ನಷ್ಟು ಏರಿಕೆಗೊಂಡಿದ್ದು, ಬ್ಯಾರಲ್ ಒಂದಕ್ಕೆ 64.72 ಡಾಲರ್‌ಗೆ ತಲುಪಿದೆ.

ಜಾಗತಿಕ ತೈಲ ಬೆಲೆಯು ತನ್ನ ಪ್ರಸಕ್ತ ಮಟ್ಟದಲ್ಲಿ ನಾಲ್ಕು ವಾರಗಳ ಕಾಲ ಸ್ಥಿರತೆಯನ್ನು ಕಾಯ್ದುಕೊಂಡಲ್ಲಿ ದೇಶೀಯ ತೈಲ ಬೆಲೆಯನ್ನು ತಗ್ಗಿಸುವ ಬಗ್ಗೆ ವಿಚಾರ ಮಾಡಲಾಗುವುದು ಎಂದು ಸುಂದರೇಶನ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆರ್‌ಬಿಐ, ಸೆಬಿಯೊಂದಿಗೆ ಚಿದಂಬರಂ ಮಾತುಕತೆ
ಆಂಧ್ರಬ್ಯಾಂಕ್‌ ಜತೆ ಹೀರೋಹೋಂಡಾ ಒಪ್ಪಂದ
ರೂಪಾಯಿ ಮೌಲ್ಯ 29 ಪೈಸೆಗಳಷ್ಟು ಚೇತರಿಕೆ
ತೈಲ ಬೆಲೆ ಇಳಿಕೆ: ಲಾಭದತ್ತ ತೈಲ ಮಾರಾಟ ಕಂಪನಿಗಳು
ಎಲ್‌ಜಿ ಉತ್ಪನ್ನಗಳ ಬೆಲೆಯಲ್ಲಿ ಹೆಚ್ಚಳ
ಕಚ್ಚಾತೈಲ ಬೆಲೆ 62 ಡಾಲರ್‌ಗೆ ಕುಸಿತ